ಪುಟ:Ekaan'gini.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೨೫

ಬೆಳಗಿನಿಂದಲೆ ಸರಸ್ವತಿಯನ್ನು ಕರೆದೊಯ್ದಿದ ನೆರೆಮನೆಯ ಸುಶೀಲಾ ಈಗ ಒಳ ಬಂದಳು. ದಿನಕ್ರಮ ತಪ್ಪಿಸಿ ಹಾಗೆ ತನ್ನನ್ನೊಯ್ದುದನ್ನು ಒಪ್ಪದೇ ಇದ್ದ ಸರಸ್ವತಿ, ಸುಶೀಲಾ ಮನೆಗೆ ವಾಪಸು ಕರೆದು ತಂದಳೆಂದು ಮೊದಲು ಸಂತೋಷಪಟ್ಟರೂ ಮನೆಯೊಳಗಿನ ಅಳುಮೋರೆಯ ಹೆಂಗಸರನ್ನು ಕಂಡು ವ್ಯಾಕುಲಗೊಂಡಳು. ತನ್ನಸ್ವರವೂ ಕೇಳಿಸಲೆಂದು ಆಕೆಯೂ ತಡ ಮಾಡದೆ ಅತ್ತಳು. ನಿಂತಿದ್ದವರಲ್ಲಿ ವಯೋವೃದ್ಧೆಯಾಗಿದ್ದ ಒಬ್ಬರೆಂದರು : “ಯಾಕಳ್ತೀರೇ? ಅತ್ತರೆ ಸತ್ತವರ ಆತ್ಮಕ್ಕೆ ನಮೋವಾಗುತ್ತೆ, ಅಳಬೇಡಿ : "ಆಕೆ ಪುಣ್ಯವಂತೆ, ಮುತ್ತೈದೆ ಸಾವಿನ ಭಾಗ್ಯ ಸಾಮಾನ್ಯವೇ?” .... ಬಳಿಕ ಬಿಸಿಲೇರಿದಂತೆ, ಮನೆಗೆಲಸನಳ ನೆನವಾಹಗುತ್ತಾ ನೆರೆದಿದ್ದವರು ಚೆದರಿದರು. ಕೊನೆಯಲ್ಲಿ, ಕೃಷ್ಣಪ್ಪನವರೂ ವೆಂಕಟರಾಮಯ್ಯನೂ ಮನೆಗೆ ಹಿಂದಿರುಗಿದ ಹೊತ್ತಿಗೆ, ಅಲ್ಲಿ ಉಳಿದಿದ್ದವರು ಮೂವರು ಮಾತ್ರ : ಅಕ್ಕನ ತೊಡೆಯ ಮೇಲೆ ತಲೆಇರಿಸಿ ಮಲಗಿದ್ದ ವಿಜಯಾ, ಗೋಡೆಗೊರಗಿ ಕುಳಿದ್ದ ಸುನಂದಾ ಮತ್ತು ಪಕ್ಕದಲ್ಲೆ ತನ್ನ ಪುಟ್ಟ ಹಾಸಿಗೆಯಲ್ಲಿ ನಿದ್ದೆ ಹೋಗಿದ್ದ ಸರಸ್ವತಿ. ಅರ್ಧಾಂಗಿಯನ್ನು ಕಳೆದುಕೊಂಡ ಕ್ಷಣದಿಂದಲೆ ಕೃಷ್ಣಪ್ಪನವರು ಕ್ಷೀಣಿಸಿ ಕಡ್ಡಿಯಾಗಿದ್ದರು. ಗಾಳಿ ಬೀಸಿದರೆ ಹಾರಿಹೋಗುವಂತಿತ್ತು ದೇಹ, ಪ್ರಯಾಸದಿಂದ ನಡೆದು ಹಿಂತಿರುಗಿ ಬಂದವರು ಜಗುಲಿಯ ಮೇಲಿದ್ದ ಆರಾಮ ಕುರ್ಚಿಯ ಮೇಲೆ ಕುಳಿತರು. ವೆಂಕಟರಾಮಯ್ಯ ನಡುಮನೆಗೆ ಹೋದ. ವಿಜಯಾ ಮೈಮುದುಡಿಕೊಂಡು ಮಲಗಿಯೇ ಇದ್ದುದನ್ನು ಕಂಡು ಆತನಿಗೆ..ಗಾಬರಿಯಾಯಿತು. ಮೈದುನ ನನ್ನು ಕ೦ಡು ಸುನಂದಾ ಅ೦ದಳು : “ಇದೇ ಈಗ ಜೋಂಪು ಹತ್ತಿದೆ, ಬನ್ನಿ. ಸ್ವಲ್ಪ ಹೊತ್ತು ಕೂತೀರ್‍ತಿರಾ?” "ಹ್ಞೂ”, ಎಂದ ವೆಂಕಟರಾಮಯ್ಯ, ಸುನಂದಾ, ತನ್ನ ಬದಲು ಗೋಡೆಗೊರಗಿ ಕುಳಿತ ಮೈದುನನ ತೊಡೆಯ ಮೇಲೆ ತಂಗಿಯ ತಲೆಯನ್ನಿರಿಸಿದಳು. ತಾನು ನಿಧಾನವಾಗಿ ತಂದೆಯ ಬಳಿಗೆ ನಡೆದಳು.