ಪುಟ:Ekaan'gini.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಏಕಾಂಗಿನಿ

....ಹೊರಡುವುದಕ್ಕೆ ಮುಂಚೆ ವೆಂಕಟರಾಮಯ್ಯ ತನ್ನ ಹೆಂಡತಿಯನ್ನು ಪಕ್ಕಕ್ಕೆ ಕರೆದ. ಕೋಟಿನ ಒಳಜೇಬಿನೊಳಗಿದ್ದ ನೋಟುಗಳನ್ನು ಎಣಿಸಿ, ತನ್ನ ರೈಲು ಖರ್ಚಿಗೆ ಬೇಕಾದುದನ್ನು ತೆಗೆದಿರಿಸಿದ. ಅನಂತರ ಇಪ್ಪತ್ತು ರೂಪಾಯಿ ಉಳಿಯಿತು. ಅಷ್ಟು ಹಣನನ್ನೂ ಆತ ವಿಜಯಳ ಕೈಯಲ್ಲಿರಿಸಿದ. "ಇಷ್ಟು ಯಾಕೆ?" ಎಂದು ಕೇಳಿದಳು ವಿಜಯಾ. "ಇಟ್ಕೊಂಡಿರು. ಇಲ್ಲಿ ಮನೆ ಖರ್ಚಿಗೆ ಬೇಕಾಗ್ಬಹುದು" ಎಂದ ವೆಂಕಟರಾಮಯ್ಯ. ....ಆತ ಹೋದ ಬಳಿಕ ವಿಜಯಾ ಸುನಂದೆಯ ಬಳಿಗೆ ಬಂದು, ನೋಟುಗಳಿದ್ದ ಕೈಯನ್ನು ಮುಂದಕ್ಕೆ ಚಾಚುತ್ತಾ ಅಂದಳು; "ಅಕ್ಕಾ. ಇಗೋ. ಖರ್ಚಿಗೇಂತ ಅವರು ದುಡ್ಡು ಕೊಟ್ಟು ಹೋದ್ರು. ಇಟ್ಕೊ." ಕೈಲಿದ್ದ ವಾತ್ರವನ್ನು ಕೆಳಕ್ಕಿಡಲೆಂದು ಸುನಂದಾ ಸರಕ್ಕನೆ ಬಾಗಿದಳು. ಮತ್ತೆ ತಲೆ ಎತ್ತಿದಾಗ ಕಣ್ಣುಗಳಲ್ಲೇನೂ ಇರಲಿಲ್ಲ. ಹೊಂಚುಹಾಕುತ್ತಲಿದ್ದ ಕಂಬನಿಗಳೆರಡು ತಂಗಿಗೆ ತಿಳಿಯದಂತೆ ಕೆಳಕ್ಕೆ ಧುಮುಕಿದ್ದುವು.

                      ೧೬ 

ಒಂದು ಸಂಜೆ ಚಂಪಾ ಸುನಂದೆಯನ್ನು ಕಾಣಲು ಬಂದಳು. ಬಾಗಿಲಲ್ಲಿ ನಿಂತಿದ್ದ ಸುನಂದಾ ಗೆಳತಿಯನ್ನು ಒಳಕ್ಕೆ ಕರೆದಳು. "ಬಾರೇ, ಬಾ. ವಿಜಯಾ ಬಂದಿದಾಳೆ. [ಕೊಠಡಿಯತ್ತ ತಿರುಗಿ] ವಿಜೀ, ಬಾ ಇಲ್ಲಿ. ಯಾರು ಬಂದಿದಾರೆ ನೋಡು." ಮುಖ ಬಾಡಿದ್ದರೂ ಮೈ ಹೃಷ್ಟಪುಷ್ಟವಾಗಿದ್ದ ವಿಜಯಳನ್ನು ನೋಡುತ್ತ ಚಂಪಾ ಅಂದಳು: "ಚೆನ್ನಾಗಿದೀಯಾ ವಿಜಯಾ?" "ಇದೀನಿ ಇಷ್ಟರಮಟ್ಟಿಗೆ." ಚಂಪಾ ಅಕ್ಕನಿಗೆ ಸಹಾಧ್ಯಾಯಿನಿ, ತನಗಲ್ಲ. ಆದರೂ, ಹಿಂದೆ ಅಕ್ಕನನ್ನು