ಪುಟ:Ekaan'gini.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಅತ್ತೆಯ ಬಳಿ ನಿಂತು ತನ್ನನ್ನೆ ನೋಡುತಿದ್ದ ಸರಸ್ವತಿಯನ್ನು ಸುನಂದಾ ಕರೆದುಕೊಂಡಳು ಮಗುವಿನ ಬೆನ್ನ ಹಿಂದಿನಿಂದ ತಾಯಿಯ ನಿಟ್ಟುಸಿರು ಸದ್ದಿಲ್ಲದೆ ಹೊರಟತು. . "ನನಗೂ ಓದಬೇಕೂಂತ ಆಸೆ.ಆದರೆ ಅದಕ್ಕೂ ಪುಣ್ಯ ಮಾಡಿರ್ಬೇಕು ಅಲ್ವೆ?"...... ಬೆಂಗಳೂರಿಗೆ ಹೊರಟುದಕ್ಕೆ ಮುಂಚೆ ಸುನಂದೆಯನ್ನು ಚಂಪಾ ಕಂಡಿರಲಿಲ್ಲ.ಅನಂತರ ಒಮ್ಮೆ ಬಂದಿದ್ದಳಾದರೂ ಸುನಂದೆ ತಾಯಿಯ ಆರೈಕೆಯಲ್ಲಿ ನಿರತಳಾಗಿದ್ದುದರಿಂದ ಹೆಚ್ಚು ಮಾತನಾಡುವುದು ಸಾಧ್ಯ್ವಾಗಿರಲಿಲ್ಲ.ಈಗ ಸುನಂದೆ ಆಡಿದ ಮಾತು,ನೇರವಾಗಿ ಆಕೆಯ ಸುಖದುಃಖದ ಪ್ರಶ್ನೆಗೇ ಗೆಳತಿಯನ್ನು ಒಯ್ದಿತು.

 "ಯಾಕೆ ಸುನಂದಾ,ಎಲ್ಲಾ ರೀತೀಲೂ  ಪ್ರಯತ್ನ ಮಾಡಿದ್ದಾಯ್ತೆ ?"  
"ಆಯ್ತಮ್ಮಾ ಆಯ್ತು." 
"ಏನ್ಹೇಳ್ತಾರೆ?"                                                      "ಬಾವಿಗೆ ಬಿದ್ದು ಸತ್ತೋಗು ಅಂತ "                                                           ಚಂಪಾ,ತಾನು ಕೇಳಿದ್ದೊಂದು ಕಿಂವದಂತಿಯ ವಿಷಯ ಪ್ರಸ್ತಾಪಿಸಿದಳು.                                  
"ಆತ ಎರಡ್ನೆ ಮದುವೆ ಮಾಡ್ಕೋತಾರಂತೆ ಹೌದೆ ?"                                                
"ಹಾಗೂ ಸುದ್ದಿ ಹಬ್ಬಿದೆಯೇನು?"                                                     "ಹಾಗೇಂತ ನಮ್ಮಮ್ಮನಿಗೆ ಯಾರೋ ಹೇಳಿದರಂತೆ."                                          
ಸುನಂದೆ ನಕ್ಕಳು.                                                                   "ಇಲ್ಲ ಚಂಪಾ,ಹೊಸ ಕಾನೂನು ಬಂದ್ಬಿಟ್ಟಿದೆ.ನಾನು ಹೀಗೇ ಇರೋವರೆಗೂ ಎರಡ್ನೇ ಮದುವೆ ಆತ ಮಾಡ್ಕೊಳ್ಳೋ ಹಾಗಿಲ್ಲ,ಕಾನೂನು ವಿಷಯ ಹಾಗಿರ್ಲಿ.ಆತ ಇನ್ನು ಯಾವತ್ತೂ ಮದುವೆ ಮಾಡ್ಕೊಳ್ಳೋದೇ ಇಲ್ಲ ಅನಿಸುತ್ತೆ."        
 "ಯಾವ ಆಧಾರದ ಮೇಲೆ ಹೇಳ್ತೀಯಾ ಹಾಗೆ?"                                               

"ಆತನ ಮನಸ್ನಲ್ಲಿರೋದು ನನಗೆ ಗೊತ್ತು ಚಂಪಾ.ಹೆಂಗಸು ತನ್ನ ಸೂಳೆಯಾಗಿರೋದು ಆತನಿಗೆ ಒಪ್ಪಿಗೆ.ಹೆಂಡತಿಯಾಗಿ ಮಾತ್ರ ಯಾರೂ ಇರಕೂಡದು,ಅಷ್ಟೆ."