ಪುಟ:Ekaan'gini.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಂಗಿನಿ

ಆ ಮಾತನ್ನು ಕೇಳಿ ಗೆಳತಿಯ ಮೈ ಜುಮ್ಮೆಂದಿತು.        
 "ಇರಬಹುದಮ್ಮಾ.ನನಗೆ ಅದೆಲ್ಲಾ ಹ್ಯಾಗೆ ತಿಳೀಬೇಕು?"    
 ಸುನಂದಾ ಸ್ನೇಹಿತೆಯನ್ನೆ ದಿಟ್ಟಿಸಿದಳು.ತನಗಿಂತ ವಯಸ್ಸಿನಲ್ಲಿ ಒಂದೇ ವರ್ಷ ಚಿಕ್ಕವಳು.ಆದರೂ ಇನ್ನೂ ಎಳೇ ಹುಡುಗಿಯ ಹಾಗಿದಾಳೆ.ಈಕೆಗೂ ಮದುವೆಯಾಗಿದೆ ಎಂದು ಯಾರಾದರೂ ಹೇಳಬೇಕೇ ಹೊರತು-                         
 ಸುನಂದೆ ಸುಮ್ಮನಾದಳೆಂದು ಚಂಪಾ ತಾನಾಗಿಯ ಕೇಳಿದಳುಃ                                        
"ಇನ್ನೇನುಮಾಡ್ಬೇಕುಅಂತಾರೆ,ನಿಮ್ಮಪ್ಪ?"                                      "ಪಾಪ!ಅವರೇನು ಹೇಳ್ತಾರೆ? ಯಾರು ಏನು ಹೇಳೋದು ಸಾಧ್ಯ?"               ವಿಜಯಾ ಕಾಫಿಯ ಲೋಟಗಳೊಡನೆ ಬಂದಳು.ಬರಿಯ ಕಾಫಿ ಕುಡಿದು ಅಭ್ಯಾಸವಿಲ್ಲದ ಸರಸ್ವತಿ"ಬಿಸ್ಕತ್ತು"ಎಂದಳು.ಒಳಗಿನ ಡಬ್ಬದಿಂದ ಮೂರು ಬಿಸ್ಕತ್ತುಗಳು ಹೊರಬಂದುವು ವಿಜಯಾ ಒಂದನ್ನು ಸರಸ್ವತಿಗೆ ಕೊಟ್ಟು,ಉಳಿದೆರಡನ್ನು ಚಂಪಾಳ ಮುಂದೆ ತಟ್ಟೆಯಲ್ಲಿರಿಸಿದಳು.                                                        "ನನಗ್ಯಾತಕ್ಕೆ?ನಾನೇನು ಮಗುವೆ?" ಎಂದು ಚಂಪಾ ಆಕ್ಷೇಪಿಸಿದಳು.

ಆಕೆ ಬಿಸ್ಕತ್ತು ಮುಟ್ಟಲಿಲ್ಲ. ವಿಜಯಳ ಕಡೆ ತಿರುಗಿ ಚಂಪಾ ಕೇಳಿದಳುಃ

 "ಇನ್ನೆಷ್ಟು ದಿನ ಇರ್ತೀಯೆ?"                   
 "ಗೊತ್ತಿಲ್ಲಮ್ಮ."

" ಕರಕೊಂಡು ಹೋಗೋಕೆ ಬರ್ತಾರಾ?"

ಲಜ್ಜೆಯ ನಸುಗುಂಪು ಬೇಡ ಬೇಡವೆಂದರೂ ವಿಜಯಾಳ ಮುಖವನ್ನು ಅಲಂಕರಿಸಿತು.                                                           "ಬರಬಹುದೂಂತ ತೋರುತ್ತೆ."     
"ವಿಜಯಾ ವಾಪಸು ಹೋಗೋಕ್ಮುಂಚೆ  ಇಬ್ಬರೂ ನಮ್ಮ ಮನೆಗೆ ಬರ್ತಿರಾ ಸುನಂದಾ?"   
ಬರಲೇಬೇಕು-ಎಂದು ಆಗ್ರಹದಿಂದ ಸೂಚಿಸುವ ಧ್ವನಿ ಇತ್ತು ಆ ಪ್ರಶ್ನೆಯಲ್ಲಿ.          
 ತಂಗಿಯ ಮುಖ ನೋಡಿ ಸುನಂದಾ ಉತ್ತರವಿತ್ತಳು;"ಆಗಲ್ಲಿ".