ಪುಟ:Ekaan'gini.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಮೇಲೆಯೂ ಮಾತನಾಡುತ್ತ ಸ್ವಲ್ಪ ಹೊತ್ತಿದ್ದು ಚಂಪಾ ಹೊರಟು ಹೋದಳು.

   ....ಮಾರನೆ ದಿನ ತಂಗಿ ಅಕ್ಕನನ್ನು ಕೇಳಿದಳು:

"ರಾಧಮ್ಮನಿಗೆ ಕಾಗದ ಬರೆಯಲ್ವಾ ಅಕ್ಕಾ?" "ಬರೀತೀನಿ" "ಬರೀತೀನಿ ಅಂತ ಮೊನ್ನೆಯಿಂದಲೂ ಹೇಳ್ತಾನೇ ಇದೀಯ. ಮನೆ ವಿಷಯ ಅವರಿಗೆಲ್ಲ ತಿಳಿಸೋದು ಬೇಡ್ವೆ? ಏನು ಅಂದ್ಕೋತಾರೆ?" ಇವತ್ತು ಯಾಕೋ ಮನಸ್ಸು ಸರಿಯಾಗಿಲ್ಲ ವಿಜಯಾ, ನಾಳೆ ಬರೀತೀನಿ." "ನಿನ್ನೆಯೂ ಹೀಗೇ ಹೇಳಿದ್ದೆ." "ಹೌದೇನು?" "ಇದೆಂಥಾ ಸೋಮಾರಿತನ? ನನಗೂ ಕೂಡಾ ಇದೇ ರೀತಿ ಇವತ್ತು ನಾಳೆ ಅಂತ ಕಾಗದ ಬರೀದೆ ದಿನ ತಳ್ಳಿದೆ___ಅಲ್ಲ?" "ಅಪ್ಪ ಪೆನ್ನು ಬಿಟ್ಟುಹೋಗಿದಾರೋ ಇಲ್ವೋ, ನೋಡು ವಿಜೀ. ಈಗಲೇ ಬರೆದ್ಬಿಡೋಣ." ಪೆನ್ನಿತ್ತು "ಕಾಗದಾನೂ ತರಲಾ?" ಎಂದು ವಿಜಯಾ ಕೇಳಿದಳು. "ಹೂಂ." ಅದು ರಾಧಮ್ಮ____ ಕುಸುಮೆಯರಿಗೆ ಜಂಟಿ ಕಾಗದ ಸುನಂದೆಯಿಂದ ತಾಯಿಯ ಮರಣವನ್ನು ಕುರಿತು ಚುಟುಕು ವಾರ್ತೆ. "ಆಗೋಯ್ತೆ ಅಕ್ಕ?" "ಹೂಂ." ಇಬ್ಬರಿಗೂ ನನ್ನ ನಮಸ್ಕಾರ ತಿಳಿಸು." ಆ ಒಂದು ಗೆರೆಯನ್ನೂ ಸುನಂದಾ ಬರೆದಳು. ಇಷ್ಟಕ್ಕೆ ಕಾರ್ಡೇ ಸಾಕಾಗಿತ್ತು," ಎಂದು ವಿಜಯಾ ನಕ್ಕಳು ಆಗ್ಲೇ ಮಿತವ್ಯಯ ಕಲಿತ್ಕೊಂಡಿದೀಯಾ! ಹುಂ! ಪೋಸ್ಟಾಫೀಸಿಗೆ ಹೋದಾಗ ಒಂದು ನಾಲ್ಕು ಇನ್ಲೆಂಡ್ ಲೆಟರಾದರೂ ತೆಗೊಂಡು ಬಾ" ವಿಜಯಳ ಮುಖವನ್ನು ನೋಡುತ್ತ ಥಟ್ಟನೆ ಏನೋ ಹೊಳೆದವಳಂತೆ,