ಪುಟ:Ekaan'gini.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುನಂದಾ ಮತ್ತೂ ಅಂದಳು: "ನೀನು ಶಿವಮೊಗ್ಗೆಗೆ ಬರೆಯಲ್ವಾ? ಇನ್ನೂ ಬೇಕಾದಷ್ಛು ಹೊತ್ತಿದೆ. ಬರೆದ್ಬಿಡು." ವಿಜಯಾ ಒಲ್ಲೆ ಎನ್ನಲಿಲ್ಲ ಗಂಡನಿಗೆ ಬರೆಯುವುದು ಮನಸ್ಸಿನಲ್ಲಿದ್ದೇ, ಈ ದಿನ ತಂಗಿ ಕಾಗದ ಬರಯುವ ಪ್ರಸ್ತಾಪ ಮಾಡಿದಳೆಂದು ಸುನಂದೆಗೆ ಈಗ ಅನಿಸಿತು. ಎಂಥ ಬೆಪ್ಪು ತಾನು! ತನಗಿದು ಮೊದಲೇ ಹೊಳೆಯಬಾರದಾಗಿತ್ತೆ?---- ಎಂದು ತನ್ನನ್ನು ತಾನೇ ಸುನಂದಾ ಟೀಕಿಸಿಕೊಂಡಳು.

  ವಿಜಯಾ ಕಾಗದ ಬರುಯುತ್ತಿದ್ದಂತೆ ಸುನಂದೆ ಮನಸ್ಸಿನಲ್ಲೆ ಎಣಿಸಿಕೊಂಡಳು: ತಾಯಿಯ ಮರಣದ ದುಃಖವನ್ನು ವಿಜಯಾ ಬೇಗನೆ ಮರೆತುಬಿಡುತ್ತಾಳೆ.  ಗಂಡನ ಸಾನ್ನಿಧ್ಯದಲ್ಲಿ ಹಾಗೆ ಮರೆಯುವುದು ಸಾಧ್ಯ.  ಪ್ರೀತಿಯ ತಾಯಿಯೊಬ್ಬಳು ಇದ್ದಳೆಂಬೆ ನೆನಪು ಆಗಾಗ್ಗೆ ಆಗುವುದೇ ಹೊರತು ಆಕೆಗೆ ಹೆಚ್ಚು ವ್ಯಥೆಯಾಗದು..
  ಸುನಂದಾ ಕೊಠಡಿಗೆ ಹೋಗಿ, ಕನ್ನಡಿಯನ್ನು ಕಿಟಕಿಯ ದಂಡೆಗೆ ಸಿಲುಕಿಸಿ, ಹೆರಳು ಹಾಕಿಕೊಳ್ಳಲು ತೊಡಗಿದಳು.  ಕಪೋಲಗಳು ಬತ್ತಿದ್ದುವು, ಕಣ್ಣುಗಳ ಕೆಳಗೆ ಅರ್ಧ ವೃತ್ತದಲ್ಲಿ ಕರಿದಾಗಿದ್ದ ಭಾಗ. ಸೊರಗಿ ನೀಳವಾಗಿದ್ದ ಕೊರಳು.
  ಇತ್ತೀಚೆಗೆ ಎಡ ಕಿವಿಯ ಮೇಲ್ಗಡೆ ಬಿಳಿಯ ಕೂದಲೊಂದು ಕಾಣಲಸಿಕ್ಕಿತು.  ಆದರೆ, ಬಾಚಿಕೊಂಡಾಗಲೆಲ್ಲ ಕರಿ ಕೂದಲುಗಳ ನಡುವೆ ಮರೆಯಾಗುತ್ತಿತ್ತು ಅದು ಅಲ್ಲೇ ಇದೆಯೇ ಏನೆಂದು ಈ ದಿನವೂ ಸುನಂದಾ ನೋಡಿದಳು.  ಇತ್ತು.  ಆದರೆ ಅದನ್ನು ಹುಡುಕಿದಾಗ, ನರೆತಿದ್ದ ಇನ್ನೊಂದು ಕೂದಲು ಕಾಣಲು ದೊರೆಯಿತು.  ಸುನಂದಾ ಅದನ್ನು ಬೇರ್ಪಡಿಸಿ ಮುಖದೆದುರು ತಂದು ಹಿಡಿದಳು.  ತನ್ನದೇ ಇನ್ನೊಂದು ನರೆ ಗೂದಲು! ವಯಸ್ಸು ಇಪ್ಪತ್ತ ನಾಲ್ಕೂ ಇಲ್ಲ ಇನ್ನೂ...ಅಷ್ಟರಲ್ಲೇ ಬಿಳಿ ಕೂದಲು!
  ಸುನಂದೆಗೆ ನಗು ಬಂತು.  ಆ ಎರಡು ಕೂದಲುಗಳನ್ನೂ ಆಕೆ ಹಾಗೆಯೇ ಇರಗೊಟ್ಟಳು.  ಹೀಗೆಯೇ ಬೆಳ್ಳಗಾಗುತ್ತ ಬಂದರೆ ಇನ್ನು ಒಂದೆರಡು ವರ್ಷಗಳಲ್ಲೇ ಬೆಳ್ಳಿ ಕೂದಲಿನ ವಯೋವೃದ್ಧೆಯಾಗಬಹುದು ತಾನು!  ಈ ಸಾರೆ ತನ್ನ ಹೆರಳು ಹಾಕಲು ವಿಜಯಳಿಗೆ ಆಸ್ಪದ ಕೊಡದಿದ್ದುದೇ ಮೇಲಾಯಿತು.