ಪುಟ:Ekaan'gini.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರೆಗೂದಲದ್ನು ಆಕೆ ನೋಡಿದಳೆಂದರೆ ಕಿತ್ತು ತೆಗೆಯುವುದು ಖಂಡಿತ.... ಕನ್ನಡಿಯಲ್ಲಿ ಮೂಡಿದ್ದ ತನ್ನ ಮುಖದ ಪ್ರತಿಬಿಂಬ....ಅದು ಹಿಂದಿನ ಸೌಂದರ್ಯದ ಛಾಯೆ ಮಾತ್ರ. ಈ ರೀತಿಯೀ ಇದ್ದರಾಯಿತು, ಕೊಳ್ಳೆ ಹೋದುದೇನು?---ಎಂದುಕೊಂಡಳು ಸುನಂದಾ. ತನ್ನ ಸೌಂದರ್ಯವನ್ನು ಯಾರು ಮೆಚ್ಚಬೇಕಾಗಿದೆ ಇನ್ನು ? ಯಾರಿಗೋಸ್ಕರ ಸುಂದರಿಯಾಗಿ ರಬೇಕು ತಾನು?.... ತಂಗಿಯತ್ತ ನೋಡಿ. ಬರೆಯುವುದು ಮುಗಿಯುತ್ತ ಬಂತೆಂಬುದನ್ನು ಗಮನಿಸಿ. ಸುನಂದಾ ಅಂದಳು: "ನನ್ನ ನಮಸ್ಕಾರ ತಿಳಿಸೀ" "ಹೂಂ!" ಬಳಿಕ ಸರಸ್ವತಿಯವನ್ನು ನಡೆಸಿಕೊಂಡು ವಿಜಯಾ ಅಂಚೆಯ ಮನೆಗೆ ಹೋದಳು. ಕೃಷ್ಣಪ್ವನವರು ಮನೆಗೆ ಮರಳಿದುದು ತಡವಾಗಿ. "ಎಲ್ಲಿಗೆ ಹೋಗಿದ್ದೆ ಆಸ್ವ ?" ಎಂದು ಸುನಂದಾ ಕೇಳಿದಳು. "ಎಲ್ಲಿಗೂ ಇಲ್ಲಮ್ಮ. ಯಾರೋ ಸ್ನೇಹಿತರು ಸಿಕ್ಕಿದ್ದರು. ಹರಟೆ ಹೊಡೀತಾ ನಿಂತ್ಬಿಟ್ಟೆ."

 ಹಿಂದೆ ಒಂದೆರಡು ಗಂಟೆಗಳ ಕಾಲ ಎಲ್ಲೆಯಾದರೂ ಕೆಲಸ ನೋಡಬೇಕು 

ಎಂದಿದ್ದರು ತಂದೆ.ಸುನಂದೆಗೆ ಅದು ನೆನಪಿತ್ತು.ಆದರೆ ಅನಂತರದ ಘಟನೆ ಗಳು,ತಾಯಿಯ ಕಾಒಲೆ,ಅದಕ್ಕೆಲ್ಲ ಆಸ್ಪದ ಕೊಟ್ಟರಲಿಲ್ಲ.ಪುನಃ ಆಲೋ ಚನೆ ತಂದೆಯನ್ನು ಕಾಡಬಹುದು ಎಂಬ ಶಂಕೆ ಹುಟ್ಟಿತ್ತು ಸುನಂದೆಗೆ.

  ಕೃಷ್ಣಪ್ಪನವರು ಕೇಳಿದರು:
  "ವಿಜಯಾ ಎಲ್ಲಿ?"
  "ಅಡುಗೆ ಮನೇಲಿದಾಳೆ."
   "ವೆಂಕಟರಾಮಯ್ಯನಿಂದೀನಾದರೂ ಕಾಗದ ಬಂತೆ?"

"ಇಲ್ಲ. ಇವತ್ತಷ್ಟೇ ವಿಜಯಾ ಬರೆದ್ಲು." "ಎರಡು ವಾರ ಬಿಟ್ಕೂಂಡು ? ರ್ತೀಸಿ ಆಂದಿದ್ದ, ಅಲ್ವೆ ?" "ಹೂಂ"