ಪುಟ:Ekaan'gini.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾ೦ಗಿನಿ ವಿಜಯಾ ಶಿವಮೊಗ್ಗಾದ ವಿಷಯ ಕೇಳುವುದರಲ್ಲೆ ಆಸಕ್ತಳಾದಳು. ತಾನು ಇಲ್ಲದೇ ಇದ್ದಾಗ ಆತ ಒಂಟಿಯಾಗಿ-ಅಂದರೆ, ಬಳಿಯಲ್ಲಿ ತಾನಿಲ್ಲದೆ-ಹೇಗೆ ದಿನ ಕಳೆದನೆಂದು ತಿಳಿಯುವ ಆತುರ ಅವಳಿಗೆ. ಕೊಠಡಿಯಲ್ಲಿ ಒಬ್ಬನನ್ನೇ ನೋಡುತ್ತಾ ಆಕೆ ಕೇಳಿದಳು: "ನಿಮಗೆ ನನ್ನ ನೆನಪಾಗ್ರಿತ್ತಾ?" ತನ್ನವಳ ತುಟಿಗಳು ಬೇರ್ಪಟ್ಟು ಮಾತು ಹೊರಡುತ್ತಿದ್ದ ಸೊಬಗನ್ನೆ ದಿಟ್ಟಿಸುತ್ತಿದ್ದ ವೆಂಕಟರಾಮಯ್ಯ, ಆ ಪ್ರಶ್ನೆಯ ಅರ್ಧ ಆತನಿಗಾಗಲಿಲ್ಲ. ಆದೇನನ್ನೋ ತುಟಿಗಳನ್ನು ತುಟಿಗಳು ಕೇಳಿದಂತಾಯಿತು. ಇಂಧದನ್ನೇ ಎಂದು ಪ್ರಯಾಸವಿಲ್ಲದೆ ಊಹಿಸಿ,ಕೇಳಿದುದನ್ನು ಆತ ಕೊಟ್ಟ. ಗಂಡನನ್ನು ಬಹಳ ದಿನಗಳ ಬಳಿಕ ಕಂಡ ಮೊದಲ ಸಂಭ್ರಮದಲ್ಲಿ ತ೦ದೆ ಆತನೊಡನೆ ಮುಖ್ಯವಾದುದೊಂದು ವಿಷಯ ಚ್ರಚಿಸಲು ಇಚ್ಛಿಸಿರುವನೆಂದು ಹೇಳುವುದಕ್ಕೊ ವಿಜಯಾ ಮರೆತಳು .. ಆದರೆ ಕೃಷ್ಪಪ್ಪನವರು, ఆ ಸ೦ಟೆಯ అళిಯನ ಜತೆಯಲ್ಲಿ ದೊರ ನಡೆದು, ಊರ ಕೆರೆಯ ಏರಿಯ ಮೇಲೆ ಕುಳಿತು, ತನ್ನ ಹಿರಿಯ ಮಗಳಿಗೆ ಒದಗಿದ ದುರ್ಗತಿಯ ಕಧೆ ಹೇಳಿದರು. “ನನಗೆ ಗೊತ್ತಿದೆ. ವಿಜಯಾ ಹೇಳಿದಾಳೆ.” ಎ೦ದ ವೆ೦ಕಟರಾಮಯ್ಯ, " ಸುನಂದೆಯ ತಂದೆಯಾಗಿ ನಾನು ಅಳಿಯನಾದ ನಿಮಗೆ ಹೇಳಬೇಕಾದ್ದು ಕರ್ತವ್ಯ," ಎ೦ದು ಕೃಷ್ಣಪ್ಪನವರು,ಒ೦ದನ್ನೊ ಬಿಡಲಿಲ್ಲ, ಮನೆ ಮಾರುವ ಮಾತು ಬಂದಾಗ ವೆಂಕಟರಾಮಯ್ಯನೆಂದ: “ನಿಮಗೆ ಹ್ಯಾಗೆ ತೋಚುತ್ತೋ ಹಾಗ್ಮಾಡಿ.” “ಹಾಗಲ್ಲವಪ್ಪ, ಇದು ನನಗಿರೋ ಒ೦ದೇ ಆಸ್ತಿ. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಸೇರಿದು, ಮಾರಾಟವಾದ್ಮೇಲೆ." "ವಿಜಯಾ ಕೈಲಿ ಈ ವೆಷಯ ಪ್ರಸ್ತಾಪಿಸಿದೀರೇನು?” “ಇಲ್ಲ, ವಿನರ ಒಂದೂ ಆಕೆಗೆ ತಿಳಿದು.” “ಆಗಲಿ, ನಾನು ಅವಳಿಗೆ ಹೇಳ್ತೀನಿ, ಮನೆ ಮಾರಾಟಮಾಡಿ, ಆದರೆ ಹಣ ಮಾತ್ರ ನಮಗೆ ಕೊಡೋದಕ್ಕೆ ಬರಜೇಡಿ. ಅದು ಎಷ್ಟಾದರೂ ಇರಲಿ,ನಾದಿನಿಗೇ ಕೊಟ್ಟಿಡಿ.”