ಪುಟ:Ekaan'gini.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಏಕಾಂಗಿನಿ ಹೊರಟೇ ಬಿಟ್ಟರು. ನಮಗೆ ಬಹಳ ಅವಮಾನವಾಯ್ತು. ಕೊನೆಗೆ ಮಾರ್ಕೆಟು ವರೆಗೂ ಹೋಗಿ ಸುತ್ತಾಡ್ಕೊಂಡು ಮನೆಗೆ ಬಂದೆವು....”

ತಂದೆ ಅದನ್ನೋದಿ ಮುಗಿಸಿದುದನ್ನು ಗಮನಿಸಿದ ಸುನಂದಾ ಅಂದಳು:
“ಇನ್ನೊಂದು ಓದಿ ನೋಡಪ್ಪ, ಅದಕ್ಕಿಂತಲೂ ಸಾರಸ್ಯವಾಗಿದೆ.”
ಕೃಷ್ಣಪ್ಪನವರು ನಿಟ್ಟುಸಿರು ಬಿಟ್ಟರು. ಮನಸ್ಸಿಲ್ಲದ ಮನಸ್ಸಿನಿಂದ

ಇನ್ನೊಂದನ್ನು ಎತ್ತಿಕೊಂಡರು. ಇಂಗ್ಲಿಷಿನಲ್ಲಿದ್ದ ಕಾಗದ.

 ಅಕ್ಕರೆಯ ಸಂಬೋಧನೆಯ ಬಳಿಕ, ಇಷ್ಟು ದಿನ ಯಾಕೆ ಬರೆಯಲಿಲ್ಲ

ವೆಂದು ಆಕ್ಷೇಪಣೆ. ಇನ್ನು ಮುಂದೆ ಹದಿನೈದು ದಿನಗಳಿಗೊಮ್ಮೆಯಾದರೂ ಕಾಗದ ಹಾಕದಿದ್ದರೆ ತಾನು ಬರೆಯುವುದನ್ನೇ ನಿಲ್ಲಿಸುವುದಾಗಿ ಬೆದರಿಕೆ. ಅದಾದ ಮೇಲೆ-'ಬರೆಯಬೇಕೋ ಬರೆಯಬಾರದೋ ನನಗೆ ತಿಳಿಯದು. ಆದರೂ ತಿಳಿಸದೆ ಇರುವುದರಲ್ಲಿ ಯಾವ ಅರ್ಥವೂ ಇಲ್ಲವೆಂದು ಬರೆಯಲು ನಿರ್ಧಸಿದ್ದೇನೆ. ಮೊನ್ನೆ ರಾತ್ರೆ ಇದ್ದಕ್ಕಿದ್ದ ಹಾಗೆ ನಮ್ಮವರೂ ನಾನೂ 'ನಾಗಿನ್' ನೋಡಬೇಕೆಂದು ಹೊರಟೆವು. ಅಲ್ಲಿ ನಾವು ಕುಳಿತ ಜಾಗಕ್ಕಿಂತ ಮೂರು ಸಾಲುಗಳ ಕೆಳಗಡೆ ನಿಮ್ಮ ಗಂಡನನ್ನು ನೋಡಿದೆ. ಆತನ ಜತೆ ಯಲ್ಲಿ ಯಾರೋ ಒಬ್ಬಳಿದ್ದಳು. ನಮ್ಮವರಿಗೆ ಈ ವಿಷಯ ತಿಳಿಸಿದೆ. ಅವರು ನೋಡುವಷ್ಟರಲ್ಲೆ ದೀಪ ಆರಿಯೋಯ್ತು.ಇಂಟ‍ರ್ವಲ್ ಆದಾಗ ಪುನಃ ನೋಡಿದೆವು. ಆತ ಎದ್ದು ಹೊರಹೋದರು. ಒಬ್ಬಳೇ ಉಳಿದಾಗ ಆಕೆ ಬೇರೆ ಗಂಡಸರನ್ನು ನೋಡುತಿದ್ದ ರೀತಿಯೋ! ಆ ವೇಷ ಭೂಷಣಗಳೊ! ಆ ಒನಪು ವಯ್ಯಾರವೊ! ಪುನಃ ದೀಪ ಆರುವ ಹೊತ್ತಿಗೆ ಆತ ಒಳಬಂದರು. ನನ್ನನ್ನೇನೂ ಅವರು ನೋಡಲಿಲ್ಲ. ನೋಡಿದ್ದರೂ ನನ್ನ ಗುರುತು ಸಿಗುತ್ತಿರ ಲಿಲ್ಲ ಅಂತ ಇಟ್ಕೊಳ್ಳೋಣ. ಇದು ಆ ರಾತ್ರೆಯ ಅನುಭವ. ಇದನ್ನೋದಿ ನಿಮಗೆ ವ್ಯಥೆಯಾಗಬಹುದು. ನನ್ನಾಣೆ, ನೀವು ಬೇಸರಪಟ್ಟುಕೊಳ್ಳಬಾ ರದು. ಈ ವಿಷಯವನ್ನು ನಿಮಗೆ ತಿಳಿಸದೆಯೇ ಬಚ್ಚಿಡುವುದು ಸಾಧ್ಯವಿತ್ತು. ಆದರೆ ಹಾಗ ಮಾಡುವುದು ಸರಿಯೆಂದು ನಾನು ಹೇಳಲಾರೆ. ಈಗ ಬರೆ ದಾಯಿತಲ್ಲಾ ಎಂದು ಒಂದು ರೀತಿಯ ಸಮಾಧಾನವೇ ಆಗಿದೆ. ಇದನ್ನೆಲ್ಲ ತಿಳಿದ ಮೇಲೂ ನೀವು ಧೈರ್ಯವಾಗಿದ್ದರೇ ನನಗೆ ಹೆಮ್ಮೆ ಎನಿಸೀತು. ನೀವು ಧೈರ್ಯವಾಗಿರುತ್ತೀರೆಂಬ ನಂಬಿಕೆ ನನಗಿದೆ .ಎಲ್ಲಿ,ನನ್ನ ಕಡೆಗೆ ನೋಡಿ