ಪುಟ:Ekaan'gini.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೪೭ ಸ್ವಲ್ಪ ನಕ್ಕುಬಿಡಿ. ಹಾಗೆ...'

 ಮುಂದಿನ ಸಾಲುಗಳ ಮೇಲೆ ಕೃಷ್ಣಪ್ಪನವರು ಸುಮ್ಮನೆ ದೃಷ್ಟಿ ಹಾಯಿ 

ಸಿದರು, ಅಷ್ಟೆ. ಓದಲು ಅವರಿಗೆ ಮನಸ್ಸಾಗಲಿಲ್ಲ. ಓದಿದ ಅಂಶದಿಂದಲೆ ತಿಳಿದ ವಿಷಯಗಳು ಸಾಕಷ್ಟಿದ್ದುವು. ಕಾಗದಗಳನ್ನು ಅವರು ಮಗಳಿಗೆ ವಾಪಸು ಕೊಟ್ಟರು. ಕನ್ನಡಕವನ್ನು ಕೆಳಕ್ಕಿರಿಸುವುದನ್ನು ಮರೆತು ಹಾಗೆಯೇ ಛಾವಣಿ ನೋಡುತ್ತ ಆರಾಮ ಕುರ್ಚಿಯಲ್ಲೇ ಒರಗಿ ಕುಳಿತರು.

 ಏನನ್ನಾದರೂ ಮಾತನಾಡುವುದು ವಿಹಿತವೆಂದು ಸುನಂದಾ ಅಂದಳು:
 “ತಿಳಿಯಿತಲ್ಲಪ್ಪ ಬೆಂಗಳೂರು ಸಮಾಚಾರ?"
 ಕೃಷ್ಣಪ್ಪನವರು ಮಗಳನ್ನೇ ನೋಡಿದರು. ಅವರ ಅಂತ‍ರ್ಯ‍ದೊಳಗೆ ಆಸೆ

ನಿರಾಸೆಗಳ ನಡುವೆ ಹೋರಾಟವಾಗುತ್ತಿತ್ತು. ಸುಮ್ಮನಿರದೆ ಅವರೆಂದರು :

 “ಆತ ಎರಡನೆ ಮದುವೆಯಂತೂ ಮಾಡ್ಕೊಂಡಿಲ್ಲ ನನಗೆ ಗೊತ್ತು. 

ಹಾಗೇನಾದರೂ ಇದ್ದಿದ್ದರೆ ರಾಮಕೃಷ್ಣಯ್ಯನಿಗೆ ಖಂಡಿತ ತಿಳೀತಿತ್ತು." ಸುನಂದೆಗೆ ನಗು ಬಂತು.

 "ನಾನು ಹಾಗಂದ್ನೆ ? ಇನ್ನೂ ಪ್ರಯತ್ನ ಮಾಡ್ಬೇಕು ಅಂತಲೇ ಹೇಳ್ತಾ

ಇದ್ದೆಯಲ್ಲ ಅದಕ್ಕಂದೆ”

 ಕೃಷ್ಣಪ್ಪನವರಿಗೆ ತಮ್ಮ ಅಸಹಾಯತೆಯನ್ನು ಕಂಡು ರೇಗಿತು.
 “ಸಾಕು ತಿಳಿದೋಳಹಾಗೆ ಜಾಸ್ತಿ ಮಾತಾಡ್ಬೇಡ!”
 ಸುನಂದಾ ಸರಕ್ಕನೆ ತಿರುಗಿ ಒಳ್ಳಕ್ಕೆ ಹೊರಟುಹೋದಳು. ತಂದೆ ತನ್ನ

ಮೇಲೆ ರೇಗಿ ನುಡಿದಿದ್ದ. ಆತನ ಮನಸಿನೊಳಗೆ ಸಂಕಟವೇ ಆ ರೀತಿ ಮಾತ ನಾಡಿಸಿತ್ತೆಂಬುದು ನಿಜ. ಆದರೂ ಆತ ತನ್ನ ಮೇಲೆ ರೇಗಿದ್ದ. ಆ ತಿಳುವಳಿಕೆ ಬಲು ಕ್ರೂರವಾಗಿ ಕಂಡು ಸುನಂದೆಯ ಕಣ್ಣುಗಳು ಹನಿಗೂಡಿದುವು. ಆಕೆ ಬೆಂಕಿ ಸರಿಮಾಡಲೆಂದು ಒಲೆಯ ಮುಂದೆ ಕುಳಿತಳು.ಕಂಬನಿಗಳು ಕಾಡಿ ದುವು. ಅಷ್ಟರಲ್ಲೆ ಹಿಂಭಾಗದಿಂದ ತಂದೆಯ ಸ್ವರ ಕೇಳಿಸಿತು. ಕ್ಷೀಣವಾಗಿದ್ದರೂ ಒಲವು ತುಂಬಿದ್ದ ಸ್ವರ. " ಸುಂದಾ, ಏನೋ ಮನಸ್ಸು ತಡೀಲಾರದೆ ಅಂದೆ,ಕೋಪಿಸ್ಕೋ ಬೇಡಮ್ಮ”