ಪುಟ:Ekaan'gini.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಏಕಾಂಗಿನಿ

 ಕ್ಷಮಿಸು–ಎಂಬ ಅರ್ಥವೇ ಆ ಮಾತಿಗೆ. ಅದು ಪಶ್ಚಾತ್ತಾಪದ ಧ್ವನಿ.
 ಸುನಂದೆಯ ಗಂಟಲು ಒತ್ತರಿಸಿ ಬಂತು. ಆಕೆ ತಿರುಗಿ ನೋಡದೆಯೇ

ಅಂದಳು:

 “ಇರಲಿ ಬಿಡಪ್ಪ. ನನ್ನ ಹಣೇಲಿ ಬರೆದಿದ್ದು. ಯಾರೇನು ಮಾಡೋ

ಕಾಗತ್ತೆ?”.

ಹಣೇಬರೆಹ ಎನ್ನುವ ಪದವನ್ನು ವಿಜಯಳೆದುರು ಕುಸುಮಳೆದುರು

ಅದೆಷ್ಟು ಬಾರಿ ಟೀಕಿಸಿದ್ದಳೋ ಆಕೆ, ಆದರೂ ಈಗ, ಕೊನೆಗಾಣಿಸಲಾಗದ ಸಂಕಟಕ್ಕೆ ಆ ಪದವೇ ವಿವರಣೆಯಾಗಿತ್ತು.

 ಮಗಳ ಮಾತಿನ ಧ್ವನಿಯಿಂದ ಆಕೆ ಅಳುತ್ತಿದ್ದಳೆಂಬುದನ್ನು ತಿಳಿದು ಕೃಷ್ಣಪ್ಪ

ನವರೆಂದರು :

“ಅಳಬೇಡ ಸು೦ದಾ.”
ಸುನಂದಾ ಸೆರಗಿನಿಂದ ಕೆಣ್ಣೊರೆಸಿಕೊಂಡಳು.
“ಇಲ್ಲವಪ್ಪಾ”
ಒಂದು ನಿಮಿಷ ಮತ್ತೂ ಬಾಗಿಲಲ್ಲೇ ನಿಂತಿದ್ದು ಅವರು ಕೇಳಿದರು :
 “ಸರಸ್ವತಿ ಎಲ್ಲಿ ?”
 “ಪಕ್ಕದ್ಮನೆಗೆ ಹೋಗಿದಾಳೇಂತ ತೋರುತ್ತೆ.ಒಬ್ಬಳೇ ಓಡಾಡೋಕೆ ಶುರು 

ಮಾಡ್ಬಿಟ್ಟಿದಾಳೆ.”

ಹಾಗೆ ಒಬ್ಬಳನೇ ಬಿಡಬಾರದು–ಎನ್ನುವ ಮಾತು ನಾಲಿಗೆ ತುದಿಯ

ವರೆಗೆ ಬಂದರೂ ಅದನ್ನು ಉಚ್ಚರಿಸದೆ, "ನಾನು ಹೋಗಿ ಕರಕೊಂಡ್ಬರ್ತೀನಿ" ಎಂದು. ಮೊಮ್ಮಗಳನ್ನು ಹುಡುಕುತ್ತ ಕೃಷ್ಣಪ್ಪನವರು ಹೊರನಡೆದರು. ....ದಿನಕಳೆದಂತೆ, ಪುಟ್ಟಣ್ಣನೊಡನೆ ಇನ್ನೊಮ್ಮೆ ಬದುಕು ಸಾಧ್ಯ ಎನ್ನುವ ಭರವಸೆ ಸುನಂದೆಗೆ ಕಡಮೆಯಾಗುತ್ತ ಬಂತು. ಕಗ್ಗಲ್ಲಿನಲ್ಲಿ ಕೊರೆದಹಾಗಿತ್ತು ಪ್ರತಿಯೊಂದು ನೆನಪೂ. ಆಕೆಗೆ ಅನಿಸುತ್ತಿತ್ತು-ಆ ವ್ಯಕ್ತಿಯ ಮನಸ್ಸನ್ನು ಒಲಿಸಿಕೊಳ್ಳಲು ಯತ್ನಿಸುವುದೂ ಒಂದೇ,ಮರಳು, ಹಿಂಡಿ ಎಣ್ಣೆ ತೆಗೆಯು ವುದೂ ಒಂದೇ.

 ಹಾಗೆ ಬಲಗೊಳ್ಳುತಿದ್ದ ಆಭಿಪ್ರಾಯದ ಹಿನ್ನೆಲೆಯಲ್ಲಿ, ಬೆಂಗಳೂರಿಗೆ 

ಹೋಗುವುದರಿಂದ ಆಗುವ ಪ್ರಯೋಜನವೇನು? -ఎంబ ಪಶ್ರ್ನೆ ಎದ್ದು