ಪುಟ:Ekaan'gini.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಏಕಾಂಗಿನಿ

    ....ಮುಂದೆ ಒಂದು ವಾರದೊಳಗೇ ರಾಮಕೃಷ್ಣಯ್ಯನವರ ಕಾಗದ ಬಂತು. 

ಹದಿನಾರು ರೂಪಾಯಿ ಬಾಡಿಗೆಗೆ ಪುಟ್ಟದೊಂದು ಔಟ್ ಹೌಸನ್ನು ಶೇಷಾದ್ರಿ ಪುರದಲ್ಲೆ ಗೊತ್ತು ಮಾಡಿದ್ದರು. 'ಒಳ್ಳೇ ಮುಹೂರ್ತ ನೋಡಿ ಹೊರಟುಬನ್ನಿ' ಎಂದು ಕೊನೆಯಲ್ಲಿ ಬರೆದಿದ್ದರು.

      ಆ ವಾಕ್ಯವನ್ನೋದಿ ಸುನಂದೆ, “ಅಯ್ಯೋ!” ಎಂದು ನಕ್ಕಳು 

“ಹುಟ್ಟಿದ ಕ್ಷಣದಿಂದ ಸಾಯೋವರೆಗೂ ಮುಹೂರ್ತ ನೋಡೋದೇ ಆಯ್ತು, ಅಲ್ವೆ ಅಪ್ಪಾ ?” ಎಂದಳು.

       “ಹಾಗೆಲ್ಲಾ ಮಾತಾಡ್ಬಾರದಮ್ಮ,” ಎಂದರು ಕೃಷ್ಪಪ್ಪನವರು.


                                ೧೯
     ಸುನಂದಾ ಬೆಂಗಳೂರಲ್ಲೇ ನೆಲೆಸುವಳೆಂಬ ಸುದ್ದಿ ತಿಳಿದು, ರಾಧಮ್ಮ– 

ಕುಸುಮೆಯರಿಗೆ ಸಂತೋಷವಾಯಿತು. ಆದರೆ, ಯಾವತ್ತು-ಏನು ಎಂದೆಲ್ಲ ಸುನಂದಾ ಬರೆದಿರಲೆಲ್ಲ.

     ಒಂದು ಮಧ್ಯಾಹ್ನ, ಸ್ವತಃ ಸುನಂದೆಯೇ ಮಗಳ ಜತೆಯಲ್ಲಿ ತಮ್ಮನ್ನು 

ಕಾಣಲು ಬಂದಾಗ, ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ.

        -“ಇದೇನ್ರಿ ಇದು? ಯಾವತ್ತು ಬಂದಿರಿ?”
        -"ಮನೆ ನೋಡ್ಕೊಂಡು ಹೋಗೋಕೆ ಬಂದಿದೀರಾ ?”
        ಸುನಂದಾ ಹೇಳುತ್ತಿದ್ದುದು ನಿಜವೇ ಎಂದು ನಂಬಲು ಅವರಿಬ್ಬರಿಗೂ 

ಸ್ವಲ್ಪ ಹೊತ್ತು ಹಿಡಿಯಿತು.

       “ಅಬ್ಬ ! ಏನೋಂತಿದ್ದೆ, ಪರವಾಗಿಲ್ಲ ನೀವು,” ಎಂದು ಕುಸುಮಾ ರಾಗ 

ವೆಳೆದಳು.

    ಮನೆ ಮಾಡಿರುವುದು ದೂರದ ಶೇಷಾದ್ರಿಪುರದಲ್ಲಿ ಎಂದು ತಿಳಿದಾಗ 

ರಾಧಮ್ಮ ರೇಗಿದರು :

     “ಎಷ್ಟೊಂದು ಸಮೀಪ ! ಯಾಕೆ, ಕೆಂಗೇರೀಲೋ ಯಶವಂತಪುರದಲ್ಲೊ 

ಮನೆ ಸಿಗಲಿಲ್ವೇನು?”