ಪುಟ:Ekaan'gini.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಾಂಗಿನಿ ೧೫೩

    ತನ್ನ ಮಾವನ ಮನೆ ಈಗ ಬೆಂಗಳೂರಲ್ಲೆ ಇರುವ ವಿಷಯ ಆತ ತಿಳಿಸಿದ.
   ಸೀತಮ್ಮ ಹೇಳಿದಳು:
   “ಇನ್ನು ನಮ್ಮನೇ ಆತಿಧ್ಯಕ್ಕೆ ಕೈ ಮುಗೀತೀರಾ!"
   “ಹಾಗೇನೂ ಇಲ್ರೀ.”
   "ಏನಿಲ್ಲ? ನನಗ್ಗೊತ್ತಿಲ್ವೆ?  ಹೋಗಲಿ ಬಿಡಿ. ಇನ್ನು ನಿಮ್ಮ ಹೆಂಡತಿ ತವ 

ರ್‍ಮನೆಗೆ ಬಂದಾಗಲಾದರೂ ನೋಡೋ ಅವಕಾಶ ನಮಗೆ ಸಿಗುತ್ತೆ.”

   ತಾಯಿಯಿಲ್ಲದ ತವರು ಮನೆ. ಆ ವಿಷಯ ಅವರಿಗೆ ಗೊತ್ತಿರಲಿಲ್ಲ ..
   ಅಳಿಯನತ್ತ ತಿರುಗಿ ಇಳ ಸ್ವರದಲ್ಲಿ ಕೃಷ್ಣ ಪ್ಪನೆಂದರು:
   “ನಾನಿನ್ನು ಹೊರಡ್ತೀನಿ, ಆಗದಾ?" 
   ಆ ಮಾತು ಕೇಳಿಸಿದ ಸೋಮಶೇಖರ ಅವರತ್ತ ನೋಡಿದ.
   "ಯಾಕೆ? ಏನವಸರ?”
   “ನೀವು ಬಾಲ್ಯ ಸ್ನೇಹಿತರೂಂತ ವೆಂಕಟರಾಮಯ್ಯ ಹೇಳಿದ್ರು, ಹ್ಯಾಗೂ 

ಈ ಊರಲ್ಲೇ ಇದೀನಲ್ಲ, ಪರಿಚಯ ಮಾಡ್ಕೊಳ್ಳೋಣಾಂತ ಬಂದೆ....ನೀವು ಮಾತಾಡ್ತಾ ಇರಿ, ಇಲ್ವೇ ಸ್ವಲ್ಪ ಕೆಲಸವಿದೆ ಹೋಗ್ತೀನಿ.”

    “ಕಾಫೀನಾದರೂ ತಗೊ೦ಡು ಹೋಗಿ.” ಎಂದಳು ಸೀತಮ್ಮ
    “ಇಲ್ಲ ತಾಯಿಾ, ಇಷ್ಟು ಹೊತ್ತಿಗೆ ನಾನೇನೂ ತಗೊಳೊಲ್ಲ.”
    "ಕಾಫಿ ಬೇಡ ಸೀತಾ.  ಬೇರೇನಾದರೂ ತಂದ್ಕೊಡು," ಎಂದ ಸೋಮ

ಶೇಖರ.

    ಮನೆ ಎಲ್ಲಿ ಮಾಡಿದೀರಾ? ಅನುಕೂಲವಾಗಿದೆಯ? ನಿವೃತ್ತಿಯಾಗಿ ಎಷ್ತು 

ವರ್ಷವಾಯ್ತು? ಎ೦ದು ವಕೀಲರು ಕೇಳಿದ ಸವಾಲುಗಳಿಗೆಲ್ಲ ಕೃಷ್ಣಪ್ಪನ ವರು ಸಮರ್ಪಕವಾದ ಉತ್ತೆರ ಕೊಟ್ಟರು. ಸೀತಮ್ಮ ತಂದಿರಿಸಿದ ಹಾಲನ್ನು ನಿರಾಕರಿಸಲಾಗದೆ ಕುಡಿದರು, ತಟ್ಟೆಯಲ್ಲಿದ್ದ ಬಾದಾಮಿ ಮಾವಿನಹಣ್ಣಿನ ಹೋಳುಗಳಿ೦ದ ನಾಲ್ಕನ್ನು ಆಯ್ದು ತಿಂದರು.

    ಮಾವ ಹೊರಟಾಗ, "ಏಳು ಘ೦ಟೆಯೊಳಗೆ ನಾನೂ ಬಂದ್ಬಿಡ್ತೀನಿ," 

ಎಂದ ವೆಂಕಟರಾಮಯ್ಯ,

    “ಸಜ್ಜನ! ಮಾತಿನಲ್ಲೆಷ್ಟು ವಿನಯ!” ಎಂದು ಸೀತಮ್ಮ , ಕೃಷ್ಣಪ್ಪನವರನ್ನು

ಹೊಗಳಿದಳು,