ಪುಟ:Ekaan'gini.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಏಕಾಂಗಿನಿ

      “ನನ್ನತ್ತೆ ತೀರ್‌ಕೊಂಡು ಆಗಲೆ ಎರಡು ತಿಂಗಳಾಯ್ತು” ಎಂದ ವೆಂಕಟ 

ರಾಮಯ್ಯ.

      “ಹೌದೆ? ಅಯ್ಯೋ!” ಎ೦ದಳು ಸೀತಾ.
      ಸೋಮಶೇ೩ುರ ಸ್ನೇಹಿತನನ್ನೆ ನೋಡುತ್ತಾ," ಹಾಗಾದರೆ ಇಲ್ಲೇನು ಇವರು

ಒಬ್ಬರೇ ಇದಾರಾ? ಗಂಡು ಮಕ್ಕಳು ಯಾರೂ ಇಲ್ಲಾಂತ ನೀನು ಹೇಳಿದ್ದೆ, ಅಲ್ಲವಾ? ಎಂದ.

     ಆಗ ವೆಂಕಟರಾಮಯ್ಯ ತನ್ನ ಅತ್ತಿಗೆಯ ಕತೆ ಹೇಳಿದ.
     “ಅಯ್ಯೋ ಪಾಪ!" ಎಂದಳು ಸೀತಮ್ಮ .
     "ಕಷ್ಟ . ಹೂಂ"  ಎಂದ ಸೂಮಶೇಖರ ಸಿಟ್ಟುಸಿರು ಬಿಟ್ಟ.
     "ನೀವು ಹೋಗೋಕ್ಮುಂಚೆ ಆಕೇನ ಒಮ್ಮೆ ಕರಕೊಂಡ್ಬಂದು ಪರಿಚಯ

ಮಾಡ್ಸಿ," ಎಂದು ಸೀತಮ್ಮ ಹೇಳಿದಳು.

     “ಅವಳಿಗೀಗ ಯಾವುದರಲ್ಲೂ ಇಷ್ಟವಿಲ್ಲ ಸ್ವಲ್ಪ ದಿವಸ ಹೋಗ್ಲಿ, ಆಕೇನ 

ನೋಡಿದರೆ ಸಂಕಟವಾಗುತ್ತೆ,"

     "ಸಹಜ,” ಎಂದ ಸೋಮಶೇಖರ
     ಸೀತಮ್ಮ ಒಳಹೋದಮೇಲೆ ವೆಂಕಟರಾಮಯ್ಯ ಕೇಳಿದ.
     “ಏನಪ್ಪಾ, ಕಾನೂನು ಏನು ಹೇಳುತ್ತೆ ಇ೦ಧಾ ವಿಷಯದಲ್ಲಿ?”
     ಸೋಮಶೇಖರ ಉತ್ತರ ಕೊಡದೆ ಗೆಳೆಯನ ಮುಖವನ್ನೆ ನೋಡಿದ.
     ತನ್ನ ಪ್ರಶ್ನೆಯನ್ನು ವಿವರಿಸುವುದು ಅಗತ್ಯವೆಂದು ವೆಂಕಟರಾಮಯ್ಯನೆಂದ:
     "ನಾನು ತಿಳಿದಿರೋ ಹಾಗೆ ಆತ ಮಹಾ ಖದೀಮ, ಏನು ಮಾಡೋದಕ್ಕೂ 

ಹೇಸೋ ಮನುಷ್ಯನಲ್ಲ ಕಾನೂನಿನ ಬೆದರಿಕೆ ಹಾಕಿ ಏನೂ ಮಾಡೋದಕ್ಕೆ ಆಗಲ್ವೆ?"

     ನಿಧಾನವಾಗಿ ಸೋಮಶೇಖರನೆಂದ:
     “ಇದು ಬಹಳ ಕಷ್ಟದ ಕೆಲಸ, ಆಸ್ತಿ ಲೇವಾದೇವಿ ವಿಷಯವಾದರೆ ಬೇರೆ. 

ಇಲ್ಲಿರೋದೆಲ್ಲ ಇದಕ್ಕೆ (ಎದೆ ಗುಂಡಿಗೆ ಮುಟ್ಟ ತೋರಿಸುತ್ತಾ) ಸಂಬಂಧ ಪಟ್ಟದ್ದು. ಜಾಸ್ತಿ ನೋವಾದರೆ ಇದು (ತಲೆಯತ್ತ ಬೊಟ್ಟು ಮಾಡುತ್ತಾ) ಕೆಟ್ಟು ಹೊಗುತ್ತೆ.”

    “ನಿಜ. ಸುಮ್ನೆ ಹೇಳ್ದೆ ಅಷ್ಟೆ.”