ಪುಟ:Ekaan'gini.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಏಕಾಂಗಿನಿ

 ವಿಲ್ಲ."
 "ಹಾಗೇನು? ಯಾಕಂತೆ?”
 ವೆಂಕಟರಾಮಯ್ಯ ತನ್ನ ಹೆಂಡತಿಗೋಸ್ಕರ ದೊಡ್ಡ ಪಾಲು ಕೇಳಿರಬಹು
ದೆಂಬುದು ಸೋಮಶೇಖರನ ಊಹಗೊ ಬರದ ವಿಷಯ.
 “ಹಣವನ್ನೆಲ್ಲಾ ಅತ್ತಿಗೆಗೇ ಕೊಟ್ಟಡ್ಟೇಕೂಂತ ಆವರ ಅಪೇಕ್ಷೆ”
 "ಹಾಗೋ!"
 ಅದು, ತನ್ನ ಗೆಳೆಯನ ಬಗೆಗೆ ಅಭಿಮಾನವನ್ನೂ ಸೂಚಿಸಿದ ಉದ್ಗಾರ.
 "ನೀವು ಆತನ ಸ್ನೇಹಿತರು. ಹೇಗಿದ್ದರೂ ಈ ವಿಷಯದಲ್ಲಿ ನನ್ನ ಮಾತನ್ನೆ
 ನೀವು ನಡೆಸಿಕೊಡ್ಟೇಕು!"
  ಸೋಮಶೇಖರ ನಕ್ಕ.
 “ವಕೀಲರು ಯಾವಾಗಲಾ ಕಕ್ಷಿದಾರುಕಡೆ. ಆದರೆ ಭಾರಿ ಫೀಸು ಕೊಡ್ಬೇ
ಕಾಗುತ್ತೆ.”
 ಸೋಮಶೇಖರನ ಮುಖವನ್ನು ಸೂಕ್ಷ್ಮವಾಗಿ ನೋಡುತ್ತಾ ಕೃಷ್ನಪ್ಪನವ 
ರೆಂದರು:
 "ಓಹೋ! ಅಗತ್ಯವಾಗಿ!'
ಒಂದು ನಿಮಿಷ ಸುಮ್ಮನಿದ್ದು ಸೋಮಶೇಖರ ಹೇಳಿದ:
"ನಾನೊಂದು ಕೇಳ್ತೀನಿ ನಡೆಸ್ಕೊಡ್ತಿರಾ?”
ಹಿಂಜರಿಯದೆ ಕೃಷ್ಣಪ್ಪನವರು ಉತ್ತರವಿತ್ತರು.
“ಅಪ್ಪಣೆಯಾಗಲಿ.”
“ವೆಂಕಟರಾಮಯ್ಯನಿಗೆ ನೀವು ಮಾವ ಎಂದಾದಮೇಲೆ ನಮಗೆ ಸಮೀಪ
ದವರೇ ಆದಿರಿ. ನಿಮ್ಮ ವಿಷಯವೆಲ್ಲಾ ಸ್ವಲ್ಪ ಮಟ್ಟಿಗೆ ನಿಮ್ಮ ಆಳಿಯನಿಂದ
ಗೊತ್ತಾಗಿದೆ. ನಮ್ಮ ಮನೆಯೊಳಗೆ ಕೇಳ್ತಾ ಇದ್ರು-”
 ಅಷ್ಟಕ್ಕೆ ತಡೆದು ಆತ “ಸೀತಾ,” ಎಂದ ಕರೆದರು.
ಸೀತಮ್ಮ ಮುಖ ತೋರಿಸಿದಾಗ, "ನೋಡು ಬಂದಿದಾರೆ. ನೀನೇ ಹೇಳು”
ಎಂದ.
ಆಕೆ ಮುಗುಳು ನಕ್ಕಳು. ತುಟಿಗಳೆಡೆಯಿಂದ ಸೊಗಸಾದ ದಂತಪಂಗ್ತಿ

ಕಾಣಿಸಿತು.ಆಕೆ ಎಂದಳು: