ಪುಟ:Ekaan'gini.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಾಂಗಿನಿ ೧೫೭

“ಬೆಂಗಳೂರಲ್ಲೇ ಇದ್ದೂ ಯಾಕೆ ಅಪರಿಚಿತರ ಹಾಗಿರ್ಬೇಕು? ನಾಡದು
ಭಾನುವಾರ ನಿಮ್ಮ ದೊಡ್ಡ ಮಗಳನ್ನೂ ಮೊಮ್ಮಗಳನ್ನೂ ಕರಕೊ೦ಡು
ನಮ್ಮ ಮನೆಗೆ ಸಾಯಂಕಾಲ ಟೀಗೆ ಬನ್ನಿ. ಬರ್ತೀರ್ತಾ? ಆಗೊಲ್ಲ ಅನ್ಬೇಡಿ” 
 ಏನು ಹೇಳಬೇಕೆಂಬುದು ಕೃಷ್ಣಪ್ಪನವರಿಗೆ ತೋಚಲಿಲ್ಲ. ಸುನಂದೆಯ
ದಾಂಪತ್ಯ ಜೀವನ ಸುಖಕರವಾಗಿ ಇದ್ದಿದ್ದರೆ, ಆಹ್ವಾನವನ್ನು ಸ್ವೀಕರಿಸು
ವುದು ಸುಲಭದ ಸಂತೋಷದ ಕೆಲಸವಾಗುತಿತ್ತು, ಆದರೆ ಈಗ_? 
 “ಆಗಲಿ ತಾಯಿಾ ಸುದಂದಾಗೆ ಹೇಳ್ತೀನಿ. ಆಕೆ ಒಪ್ಪಿದರೆ_” 
 “ಒಪ್ಪದೆ ಏನ್ಮಾಡ್ತಾರೆ? ನಿಮಗೆ ಇಷ್ಟವಿಲ್ಲ. ಅದಕ್ಕೋಸ್ಕರ_” 
 ಸೋಮಶೇಖರ ನಡುವೆ ಬಾಯಿ ಹಾಕಿದ.
 “ಸೀತೆಯ ಮಾತು ಕೇಳಿ ಗಾಬರಿಯಾಗ್ವೇಡಿ, ಒರಟಾಗಿ ಮಾತಾಡೋದು
 ಅವಳಿಗೆ ರೊಢಿಯಾಗ್ಬಿಟ್ಟಿದೆ!”
ಸೀತಮ್ಮ ಗಂಡನನ್ನು ದುರುಗುಟ್ಟ ನೋಡಿದಳು.
 “ಆಗಲಿ. ಭಾನುವಾರ ಮೂರು ಗಂಟೆಗೆ ಬರ್ತಿವಿ. ಸರಿಯಾ?”
              ೨೦ 
 ಸುನಂದಾ ಮೊದಲು ಒಪ್ಪಲಿಲ್ಲ. ಹೊಸದಾಗಿ ಯಾರ ಸ್ನೇಹ ಮಾಡಿ
ಕೊಳ್ಳುವುದೂ ಆಕೆಗೆ ಇಷ್ಟವಿರಲಿಲ್ಲ.
  ಆದರೆ, “ಒತ್ತಾಯ ಮಾಡಿದ್ರು. ಕರಕೊಂಡ್ಬರ್ತೀಸೀಂತ ಒಪ್ಪಿ ಬಂದೆ,” 

ಎಂದು ತಂದೆ ಹೇಳಿದ ಮಾತು ಮಗಳ ಬಾಯಿ ಕಟ್ಟಿಸಿತು. ಭಾವನ ಬಾಲ್ಯ

ಸ್ನೇಹಿತ ಎನ್ನುವ ಮಾಹಿತಿ ,ಪ್ರತಿಭಟನೆಯನ್ನು ಕುಗ್ಗಿಸಿತು. ವಕೀಲ
ಎನ್ನುವ ಪದ, ಕುತೂಹಲವನ್ನು ಕೆರಳಿಸಿತು.
   ಹೀಗೆ ಆ ಭಾನುವಾರ ಕೃಷ್ಣಪ್ಪನವರು, ಮಗಳು-ಮೊಮ್ಮಗಳೊಡನೆ
ಸೋಮಶೇಖರನ ಮನೆಗೆ ಹೋದರು.
 ವಕೀಲರ ಹೆಂಡತಿ ಎಂತೋ  ಏನೋ ಎಂದಿದ್ದ ಸುನಂದೆಗೆ. ಹಾಸ್ಯ
ಪ್ರವ್ರುತ್ತಿಯ  ಮಾತಿನ ಮಲ್ಲಿ ಸೀತಮ್ಮನನ್ನು ಕಂಡು ಮನಸ್ಸು  ಹಗುರ

ವಾಯಿತು.