ಪುಟ:Ekaan'gini.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಏಕಾಂಗಿನಿ

  “ನಿಮಗೆ ಹಿಂದಿ ಬರುತ್ತಾ?” ಎಂದು ಸೀತಮ್ಮ ಕೇಳಿದಳು.
 “ಇಲ್ಲಮ್ಮ .”
 “ನನಗೂ ಬರಲ್ಲ. ಆದರೆ ನನ್ನ ತಂಗಿ, ರತ್ನ ಮಾಡ್ಕೊಂಡಿದಾಳೆ.”
 ಮಾತು ಸ್ಪಷ್ಟವಾಗಲಿಲ್ಲವೆಂದು ಸುನಂದಾ ಕೇಳಿದಳು.
 “ರತ್ನಾ  ಅಂತಲೆ ನಿಮ್ಮ ತಂಗಿ ಹೆಸರು?”
 “ರತ್ನ ಅನ್ನೋದು ಹಿಂದೀ ಪರೀಕ್ಷಯ ಹೆಸರು ಕಣ್ರೀ, ತಂಗೀ  ಹೆಸರು 
ವಿಶಾಲಾಕ್ಷೀಂತ."
 "ಓ!ಎಲ್ಲಿಗೆ  ಕೊಟ್ಟದೆ?"
 "ಈಗ್ಲೇ ಎಲ್ಲಿಗೂ ಯೋಗಲ್ವಂತೆ!"
  ಸೀತಮ್ಮ ಇನ್ನೂರಕ್ಕೂ  ಮಿಕ್ಕಿ ಕನ್ನಡ  ಇಂಗ್ಲಿಷ್  ಕಥೆ ಪುಸ್ತಕಗಳನ್ನು
ಶೇಖರಿಸಿದ್ದಳು.
 “ಕನ್ನಡಿ ಬೀರುಗ  ಆಗ್ಹೋಯ್ತು,  ಲಾ ಜರ್ನಲ್ ತುಂಬಿ
 ಸೋಕೆ. ನಾನು, ಗತಿ ಇಲ್ದೋಳು. ನನ್ನ ಐಶ್ವರ್ಯಾನ ಎುರದ ವೆಟ್ಟಗೇ
ಲಿಟ್ಟೀದೀನಿ."
  ಸುನಂದೆಯ ಆಸೆಯ ಕಣ್ಣುಗಳು ಪ್ರಸ್ತಕಗಳನ್ನು  ದೂರದಿಂದಲೆ ಮುದ್ದಿಸಿ

ದುದನ್ನು ಸೀತಮ್ಮ ಊಹಿಸಿದಳು.

  "ಓದೋಕೆ  ಬೇಕಾದರೆ ತಗೊಂಡು ಹೋಗಿ. ನೀವೇ ಬಂದು ವಾಪಸು 

ತಂದ್ಕೊಡದೇ ಇದ್ರೆ, ಲಾಯರ್ ನೋಟೀಸು ಬರುತ್ತೆ!”

 ಸೀತಮ್ಮನ ಮಗನ ಹೆಸರು ಗಿರೀಶ.
“ಮೊನ್ನೆ ಜೂನ್ ಗೆ ಮೂರು ತುಂಬಿತು,” ಎಂದಳು ಆತನ ತಾಯಿ.
ಆತನಿಗಿಂತ ವಯಸ್ಸಿನಲ್ಲಿ ಕೆಲ ತಿಂಗಳು   ಚಿಕ್ಕವಳಾಗಿದ್ದ ಸರಸ್ಯ
 ಯನ್ನು ತೋರಿಸುತ್ತ ಸೀತಮ್ಮನೆಂದಳು:
 “ಪಾವನನ್ನ ಇಲ್ಲೇ ಇಟ್ಕೊಳ್ಳೋಣ್ವೇನೊ?"
 "ಹೊಂ!"
  ಆತ  ಸಿದ್ಧನಾಗಿದ್ದ.
  "ಪುಟ್ಟ ತಂಗಿ ಮನೆಗೆ ಬಂದ್ಮೇಲೆ ಈ ಪಾಪನ್ನ ಯಾರು ಕೇಳ್ತಾರೆ?”
ಎಂದಳು ಸುನಂದಾ.