ಪುಟ:Ekaan'gini.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೫೯

 “ಆಗ ಇವಳನ್ನು ಮಾಡ್ಕೊಂಡ್ಬಿಡ್ತಾನೆ! ಅಲ್ವೇನೊ?"
 ಗಿರೀಶನಿಗೆ ತಾಯಿಯ ಮಾತೂ ಅರ್ಧದಾಗಲಿಲ್ಲ. ಹೊಸಒಳ ಮಾತೂ
ಅರ್ಥವಾಗಲಿಲ್ಲ. ಆತ ಪ್ರಾಯಸ್ಥರಾದವರನ್ನು ಅವರ ವಾಡಿಗೇ ಬಿಟ್ಟು,
ಸರಸ್ವತಿಯ ಕೈ ಹಿಡಿದು, ತನ್ನ ಅಟದ ಸಾಮಾನುಗಳನ್ನು ಆಕೆಗೆ ತೋರಿಸ
ಲೆಂದು ಕೊಠಡಿಗೆ  ಕರೆದೊಯ್ದ.
   ಗೋಡೆ ಗಡಿಯಾರದಿಂದ ಒಂದು ಸದ್ದು ಕೇಳಿಸಿತು ನಾಲ್ಕೂವರೆ.
“ಹೊತ್ತಾಗ್ಹೋಯ್ತು. ಇನ್ನೂ ಒಂದ್ಕಡೆ ಹೋಗ್ಬೇಕು," ಎಂದು

ಸುನಂದಾ ಚಡಪಡಿಸಿದಳು.

  ಎಲ್ಲಿ? ಯಾರು?_ಎಂದು ಸೀತಮ್ಮ ಕೇಳಿದಳು.
“ಅವರು ನಿಮಗೆ ಹ್ಯಾಗೆ ಪರಿಚಯ?” ಎಂದಳು. 
ಉತ್ತರ ಹೊರಡುವುದು ತಡವಾಯಿತು,_ ಪ್ರಯಾಸವಾಯಿತು.
"ಹಿಂದೆ ನಾನು ಈ ಊರಲ್ಲೇ ಇದ್ದೆ  ನಾನೂ  ರಾಧಮ್ಮನೂ 

ನೆರೆಹೊರಯವರಾಗಿದ್ದಿ"

 ಆ ಸ್ವರದಲ್ಲಿ ಬೇಸರದ ಅವಸರದ ಅಂಶ ಹೇರಳವಾಗಿತ್ತು. ತಾನು ಹಾಗೆ
ಆಗ್ರಹ ತೊಟ್ಟು  ಕೇಳಿದುದು ಸರಿಯಾಗಿಲ್ಲವೇನೋ ಎಂದು ಸೀತಮ್ಮನಿಗೆ
ಕಸಿವಿಸಿಯಾಯಿತು.
  ಹೊರಗೆ  ಕೃಷ್ಣಪ್ಪನವರೂ ವಕೀಲರೂ ತಾಮ್ರದ ತಂತಿ ಪ್ರಕರಣದಿಂದ
ಹಿಡಿದು ರೇಡಿಯೋ ಆಕ್ಟಿವ್ ಕಣಗಳವರೆಗೆ ಹರಟೆ ನಡೆಸಿದ್ದರು.
  ಸುನಂದಾ ಎದ್ದುದನ್ನು ಕಂಡು, ಕೃಷ್ಣವ್ವನವರು ಹೇಳಿದರು.
  “ರಾಧಮ್ಮನವರ ಮನೆಗೆ ಹೋಗ್ತೀಯೇನು? ಗಾಂಧಿ ಬಜಾರಿನಿಂದ ಬಸ್ 
ಸಿಕ್ಕುತ್ತೆ. ನಡಿ ಬಸ್ ಹತ್ತಿಸಿ ಬರ್ತಿನಿ." 
" ನೀವು ಹೋಗಲ್ವೆ?" ಎಂದು ಸೋಮಶೇಖರ ಕೇಳಿದ.
“ಇಲ್ಲ. ಅಲ್ಲಿಂದ ಸುನಂದೆಗೆ ಹಾದಿ ಗೊತ್ತಿದೆ"
“ಹಾಗಾದ್ರೆ ಕೂತ್ಕೊಳ್ಳಿ. ಸೀತಾ ಹೋಗಿ ಬಸ್ ಹತ್ತಿಸಿ ಬರ್ತಳೆ."
  ಪುಸ್ತಕಗಳಿಗೋಸ್ಕರ ಇನ್ನೊಮ್ಮೆ  ಬರುವೆನೆಂದಳು ಸುನ೦ದಾ. ಸೋಮ
ಶೇಖರನಿಗೆ ನಮಸ್ಕರಿಸಿದಳು. ಸರಸ್ವತಿಗೆ 'ಟಾ ಟಾ' ಹೇಳಿ ಅಬ್ಯಾಸವಿರಲಿಲ್ಲ.
ಬದಲು ಅಜ್ಜನನ್ನು ನೋಡುತ್ತ “ತಾತ ಬರೋದಿಲ್ವಾ” ಎಂದು ರಾಗವೆಳೆದಳು.