ಪುಟ:Ekaan'gini.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೦ ಏಕಾಂಗಿನಿ ಸೀತಮ್ಮನ ಜತೆಯಲ್ಲಿ ಗಿರೀಶನೂ ಪಾಪನನ್ನು ಬೀಳ್ಕೊಡಲೆಂದು ಗಾಂದಿ ಬಜಾರಿನವರೆಗೂ ಬಂದ. ಬಸ್ ಬಂದಿರಲಿಲ್ಲ. ಕಾಯುತ್ತಾ ನಿಂತಾಗ,ಮಾತಿನೆಡೆಯಲ್ಲಿ, ಸುನಂದೆಯ ದೃಷ್ಟಿ ಚಲಿಸುತ್ತಿದ್ದ ಜನಸ೦ದಣಿಯನ್ನೆ ದಿಟ್ಟಿಸುತ್ತಿತ್ತು....ಇವತ್ತು ಭಾನುವಾರ. ಎಲ್ಲಿರಬಹುದು ಆತ? ಅಕಸ್ಮಾತ್ ಇಲ್ಲಿಗೆ ಬಂದಿದ್ದರೆ ? ತನ್ನನ್ನು ಹೀಗೆ ಕಂಡಾಗ ಆತ ಏನು ಮಾಡಬಹುದು? ಏನು ಹೇಳಬಹುದು? ಬಸ್ ಬಂತು. ಮತ್ತೊಮ್ಮೆ ಬರುವ ಆಶ್ವಾಸನೆ ಕೊಟ್ಟು ಸುನಂದಾ ಮಗು ವಿನೊಡನೆ ಬಸ್ಸನ್ನೇರಿ ಕುಳಿತಳು. ಸೀತಮ್ಮನದು ಸುಖಮಯ ಸ೦ಸಾರ. ತನ್ನವಿಷಯ ಅವರಿಗೆ ಗೊತ್ತಿಲ್ಲವೆಂದೆ? ಆತ್ಮೀಯರು ಎಂದ ಮೇಲೆ ಭಾವ ಹೇಳಿಯೇ ಇರುತ್ತಾನೆ. ಹೀಗಿದ್ದರೂ ಅವರು ತಾತ್ಸಾರದಿಂದ ಕಾಣಲಿಲ್ಲ. ನಡತೆಕೆಟ್ಟವಳಿರಬಹುದೆಂದು ದುರದುರನೆ ನೋಡಲಿಲ್ಲ. ತಾನು ತಬ್ಬಿಬ್ಬಾಗು ವಂತಹ ಪ್ರಶ್ನೆ ಕೇಳಲಿಲ್ಲ ಈಗ ಬಸ್ಸಿನಲ್ಲಿ ತಾನೊಬ್ಬಳೇ ಹೊಗುತ್ತಿರುವು ದನ್ನು ಆತನೆಲ್ಲಾದರೂ ಕಂಡನೆಂದರೆ? ಕಣ್ಣುಗಳು ಆಸೆಯಿಂದ ಪಕ್ಕದ ಸಾಲಿನಲ್ಲಿದ್ದ ಗಂಡಸರನ್ನು ನೋಡಿದುವು. ಒಂದಕ್ಕೂ ಒಮ್ಮೆ ತಿರುಗಿದುವು....ತಾನು ಸಂಕಟದಿಂದ ವಿಲಿವಿಲಿ ಒದ್ದಾಡುತ್ತಿದ್ದರೆ ಸಂತೋಷ್ ಆತನಿಗೆ. ತನ್ನ ಅಸಹಾಯಕತೆಯನ್ನು ಕಂಡಾಗ ಸಂತೃಪ್ತಿ ಆದರೆ, ತಾನು ಸೋತಿಲ್ಲ, ಇನ್ನೂ ತಲೆ ಎತ್ತಿ ನಿಂತೇ ಇದೇನೆ--ಎ೦ಬುದನ್ನು ಆತ ಕಂಡಾಗ? ಕಂಡಿ ದ್ದರೆ ಚೆನಾಗಿತ್ತು. . 'ನೆನಪು ಕಹಿಯಲ್ಲ,' ಯಾವ ಪುಸ್ತಕೆ ಅದು? ಯಾರಿಗೊ? ತನಗೆ ಮಾಶ್ರ ನೆನಪು ಒಯೇ. ಆದೂ ಎಷ್ಟು? ಒಂದೆ ಎರಡೆ! ತನ್ನ ತಂದೆಗೊಂದು ಹುಚ್ಚು. ವಿರಸ ಇನ್ನು ಮೇಲೂ ಸರಿಹೋಗಬಹು ದೆಂಬ ಆಸೆ ಆತನಿಗೆ. ಹಗಲು ಗನಸು! –ಬಸ್ಸು ನಿಂತು ನಿಂತು ನಿಂತು ಮುಂದೆ ಹೋಯಿತು. ಜನ ಎಳಿದರು ಹತ್ತಿದರು– ತಂದೆ ಇನ್ನೂ ಆಸೆ ಇಟ್ಟುಕೊಳ್ಳುವುದರಲ್ಲಿ ಅರ್ಧವಿಲ್ಲ. ಆತನಿಗೆ ತಾನೇ ಈಗ ಮಗ-ಮಗಳು, ಪ್ರತಿಯೊಂದೂ, ಗಂಡ ಬಿಟ್ಟವಳೆಂದು ತನ್ನ ಮೇಲೆ ಅಪವಾದ ಇದೆ,ಎಂದು ವ್ಯಧೆ? ಅದನ್ನು ಲೆಕ್ಕಿಸದಿದ್ದರಾಯ್ತು.