ಪುಟ:Ekaan'gini.pdf/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


   "ನನಗೇನಮ್ಮ ಗೊತ್ತು? ಮರೆತ್ಬಿಟ್ಟಿದೀನಿ. ಅದೇನು ದೇವರ ನಾಮವೆ ನೆನಪಿಟ್ಕೊಳ್ಳೋಕೆ?"
   "ಅಳಿಯ ದೇವರ ನಾಮ!"
   "ಉದ್ಧಾರವಾಯ್ತು."
   "ಕೊನೇಲಿ ರಾಯರು ಸಿಡಿಮರಿಯಾಗ್ತಾರೆ."
   "ಯಾಕೊ?"
   "ವದುಮ ಕಾಣಿಸ್ಕೊಳ್ಲಿಲ್ಲಾಂತ."
   "ಎಲ್ಲಿಗೆ ಹೋಗಿದ್ಲೊ?"
   "ಒಳಗಿರ್ಲಿಲ್ಲಾಮ್ಮ."
   "ಮತ್ತೆ?"
   "ಅಯ್ಯೋ ಅಮ್ಮ! ಒಳಗಿಲ್ಲದ ಮೇಲೆ ಇನ್ನೆಲ್ಲಿರ್ತಾಳೆ ಹೇಳಿ?"
   ಹೊರಗೆ__ಎಂಬ ಪದ ಮನಸ್ಸಿನಲ್ಲ್ವ್ ರೂಪುಗೊಂಡು ಸುನಂದೆಯ ತಾಯಿ ನಕ್ಕರು.
   "ಥೂ! ಥೂ! ಅದೆಂಥ ಹಾಡೇ!" ಎಂದರು.
   "ನಮ್ಮ ವಿಜೀ ಒಳಗಿದಾಳೆ. ಆದರೂ ರಾಯರಿಗೆ ದೇವೀ ದರ್ಶನವಾಗೇ ಇಲ್ಲ!"
   ಸುನಂದೆಯ ತಂದೆ ಒಳಗೆ ಬಂದರು, ನಗೆಯ ವಾತಾವರಣವನ್ನು ಕಂಡು ಅವರಿಗೆ ಹಾಯೆನಿಸಿತು.      
   ತಮ್ಮಾಕೆಯನ್ನುದ್ದೇಶಿಸಿ ಅವರೆಂದರು:
   "ಜೋಯಿಸರನ್ನು ನೋಡ್ಕೊಂಡು ಬರ್ತೀನಿ ಕಣೇ."
   ಹಿರಿಯ ಮಗಳತ್ತ ನೋಡುತ್ತ ಹೇಳಿದರು:
   "ಮೊದಲು ಕಾಫಿಯೋ ಸ್ನಾನವೋ ವಿಚಾರಿಸ್ಕೊಂಡು ಎಲ್ಲ ನೋಡ್ಕೊ ಸುನಂದಾ."
   ಹೊರಬಂದು ಅಳಿಯನೆದುರುನಿಂತು ಅಂದರು :
   "ಸ್ವಲ್ಪ ಆಂಗಡಿ ಬೀದಿ ಕಡೆ ಹೋಗ್ಬರ್ತೀನಿ ವೆಂಕಟರಾಮಯ್ಯನವರೆ.ಯಾವುದಕ್ಕೂ ಸಂಕೋಚಪಟ್ಕೋಬೇಡಿ. ನಿಮ್ಮದೇ ಮನೆ...."

ಹಿಂದೆ ಸುನಂದೆಯ ಗಂಡ ಬಂದಿದ್ದಾಗ ಭಾವನನ್ನು ಹಂಗಿಸುವ ತುಂಟಿಯಾಗಿದ್ದಳು ವಿಜಯಾ ಈಗ ವಿಜಯಾಳ ಗಂಡ ಬಂಡಗ, ಆ