ಪುಟ:Ekaan'gini.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ


ತಮ್ಮೊಂದಿಗೆ  ಹಾಗೆ ವರ್ತಿಸಿದ್ದ  ಆ ಪಶು, ಆತನೇ ಅಲ್ಲವೇ ಪುಟ್ಟಣ್ಣ ?  ತನ್ನ  

ಅಳಿಯ ? ಹೆಂಡತಿಯನ್ನು ಗಂಡ ಬಯ್ಯುವುದು ಹೊಡೆಯುವುದು ಅಸಾಮಾ ನ್ಯವಾಗಿರಲಿಲ್ಲ. ಆದರೆ ಈ ರೀತಿಯ ನಡವಳಿಕೆ......

      ಆ  ಗುಂಪಿನಲ್ಲಿ ಅವರನ್ನು ಗುರುತು ಹಿಡಿದವರು ಯಾರೂ ಇದ್ದಂತೆ  ಕಾಣ

ಲಿಲ್ಲ. ಆದೊಂದು ರೀತಿಯಲ್ಲಿ ಸಮಾಧಾನದ ವಿಷಯವೇ ಅಧನಾ, ಗುರುತಿ ನವರು ಒಬ್ಬರಾದರೂ ಇರುತ್ತಿದ್ದರೆ ಮೇಲಾಗುತಿತ್ತ್ತೋ ಏನೋ ನಡೆದುದಕ್ಕೆ ಸಾಕ್ಷ್ಹ್ಯವಾದರೂ..........

    ಯಾವ ಸುಡುಗಾಡಿಗೋಸ್ಕರ  ಸಾಕ್ಶ್ಯ  ?  ಈ ಮನುಷ್ಯನ  ಜತೆಯಲ್ಲಿ

ಮಗಳು ಬದುಕಬೇಕೆಂದು ಇನ್ನೂ ಆಸೆ ಇಟ್ಟುಕೊಂಡೇ ಇದ್ದೆ ನಲ್ಲ !

   ಥೂ  !
   ರಾಮಕೃಷ್ಣಯ್ಯನ  ಮನೆಗೆ ಹೋಗಿ ಅವನಿಗೆ ಈ ವಿಷಯ ತಿಳಿಸಬೇ

ಕೆಂದು ಕೃಷ್ಣಪ್ಪನವರಿಗೆ ಒಮ್ಮೆ ತೋರಿತು. ಬಳಿಕ, 'ಅವಸರವೇನು  ? ನಾಳೆ ಹೇಳಿದರಾಯ್ತು. ಅಥವಾ ನಾಡದು ಹೇಳಿದರಾಯ್ತು.' ಎಂದೂ ಅನಿಸಿತು

 ಮಗಳಿಗೆ ಹೇಳುವ ಅಗತ್ಯವಿಲ್ಲ,  ಆಕೆಗೆ  ತಿಳಿಯದಿರುವುದೇ ಮೇಲು....

ಎಂದು ಮನಸ್ಸು ಬಿಗಿ ಹಿಡಿದೇ ಕೃಷ್ಣಪ್ಪನವರು ಮನೆಸೇರಿದರು

ಕಾಲಿಗಿಷ್ಟು ನೀರು ಹನಿಸಿ ಬಳಬಂದೊಡನೆ ಅವರಿಗೆ ತುಂಬಾ ನಿತ್ರಾಣ ವೆನಿಸಿತು.

  "ಯಾಕೋ ಆಯಾಸವಾಗ್ಥಾ ಇದೆ.  ಹಾಸಿಗೆ ಹಾಸ್ತೀಯಾ ?"  ಎಂದು ಮಗ

ಳಿಗೆ ಅಂದರು.

  ಸುನಂದಾ ಗಾಬರಿಯಾದರೂ ತೋರಿಸಿಕೊಳ್ಳದೆ, ತಂದೆಯ ಹಾಸಿಗೆಯನ್ನು

ಸಿದ್ದಪಡಿಸಿದಳು.

 ಆತ ಸಂಧ್ಯಾವಂದನೆ ಮಾಡಿರಲಿಲ್ಲ

"ಊಟ ಸ್ವಲ್ಪಹೊತ್ತು ಬಿಟ್ಕೊಂಡು ಮಾಡ್ತೀಯಾ ?"  ಎಂದು ಸುನಂದಾ

ಕೇಳಿದಳು..

"ನನಗೆ ಹಸಿವಿಲ್ಲ. ಏನೋ ಪಟ್ಟಾಗಿ ತಿಂದು ಬಂದೆ. ನೀನು ಊಟಮಾಡಿ ಮಲಕೋ."

"ರಾಮಕೃಷ್ಣಯ್ಯನವರ ಮನೆಗೆ ಹೋಗಿದ್ಯಾ ?"