ಪುಟ:Ekaan'gini.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಏಕಾಂಗಿನಿ

     ಮಾತು ನಿಲ್ಲಿಸಿದ ಸುನಂದ ಅಲ್ಲೇ ಬಾಗಿಲ ಮೇಲ್ಗಡೆ ಇದ್ದ ವರ್ಣ ಚಿತ್ರವನ್ನೆ ದಿಟ್ಟಿಸಿ ನೋಡಿದಳು.ಕಂದಮ್ಮನನ್ನು ಮಡಿಲಿಗೆ ಬರಸೆಳೆದು ಮೈ ಮರೆತ ತಾಯಿ. ಹಿಂದೆಯೊಮ್ಮೆ ಕುಸುಮ ಹೇಳಿದ್ದಳು: 'ನನ್ನ ತಮ್ಮ ಮಾಡಿದ್ದು, ಚೆನ್ನಗಿ ಚಿತ್ರ ತಗೀತಾನೆ.'
     ಆ ಚಿತ್ರದಿಂದ ಸುನಂದಾ ದ್ರುಷ್ಟಿ ಕದಲಿಸಿದಳು.
     "ನಾನು ತಂತಿ ಮೇಲೆ ನಡೀತಿದೀನೀ ಅನ್ನೋದು ನನಗೆ ಗೊತ್ತಿದೆ ಕುಸುಮಾ. ಈಗಾ ನಾನೇನಾದರು ಮಾಡಲೇ ಬೇಕು. ನನ್ನ ಮೇಲೆ ಆತನಿಗೆ ಇನ್ನು ಅಧಿಕಾವಿದೆ ಅನ್ನೋದರಲ್ಲಿ ಅರ್ಥವಿಲ್ಲ. ತನ್ನ ಮೇಲಂತು ನನಗೆ ಯಾವ ಹಕ್ಕು ಇಲ್ಲಾಂತ ಆಗಲೆ ಹೇಳಿದಾನೆ."
     'ಪತಿಯೇ ಪರದೈವ' ಎನ್ನುವ ಮನೋವ್ಱತ್ತಿಯಿಂದ, ಆ ಕೆಟ್ಟ ಮನುಷ್ಯನನ್ನು ಏಕವಚನದಲ್ಲಿ  ಸಂಬೋಧಿಸುವ ಪರಿಸ್ಥಿತಿಯವರೆಗೆ. ಎಷ್ಟೋಂದು ದೂರ, ಎಷ್ಟೋಂದು ಅಂತರ! ಆತ ಮನುಷ್ಯ ಸ್ವರೊವಾದ ರಾಕ್ಷಸ. ಸಂದೇಹ ವಿರಲಿಲ್ಲ. ಅಂತಹನನ್ನು ಏಕಚನದಿಂದಲ್ಲದೆ ಬೇರೆ ಹೇಗೆ ಕರೆಯಬೇಕು?
     ಈಗ ಸುನಂದೆಯ ಮಾತುಗಳು ನಿಧಾನವಾಗಿ ಬರತೊಡಗಿದುವು.
     "ನಾನು ಹಿಂದೂ ಸ್ತ್ರೀ.ಪ್ರತಿಯೊಬ್ಬರೂ ನನಗವನ್ನು ನೆನಪು ಹುಟ್ಟ

ಸ್ತಾನೇ ಇರ್ತಾರೆ. ನನ್ನನ್ನು ಬೆನ್ನ ಹಿಂದೆ ಲೇವಡಿ ಮಾಡೋ ಜನರೇ ಎದುರಿಗೆ ನೀತಿಪಾಠದ ಮಂತ್ರ ಜಪಿಸ್ತಾರೆ. ಗೃಹ ದೇವತ-ಆದರ್ಶಸತಿ! ಎಂಧೆಂಧ ಕಲ್ಪನೆಗಳು. ಆದರೆ ನಾನು ದೇವತೆಯಲ್ಲ ಕುಸುಮಾ.ದೇವತೆ ಯಾಗುವುದು ನನಗೆ ಬೇಕಾಗಿಲ್ಲ. ನಾನು ಮನುಷ್ಯಳಾದರೆ ಸಾಕು-- ಒಳ್ಳೇ ಮನುಷ್ಯಳಾದರೆ ಸಾಕು..."

  ಕುಸುಮಾ ಕಿವಿಕೊಡುತಿದ್ದಳೆಂಬುದನ್ನು ಖಚಿತ ಮಾಡಿಕೊಂಡು ಸುನಂದಾ

ಮುಂದುವರಿದಳು:

 "ನಾನು ಸ್ವಂತಂತ್ರಳಾದರೆ ಮಾತ್ರ ಬದುಕಿರೋದು ಸಾಧ್ಯ."
 ಹೌದೆಂದು ಕುಸುಮಾ ತಲೆದೂಗಿದಳು.
 "ನಿಮಗೂ ನಿಮ್ಮವರಿಗೂ ಎಷ್ಟೋ ಜನ ಗುರುತಿದಾರೆ. ನನಗೊಂದು

ಕೆಲಸ ಕೊಡಿಸ್ತೀದಾ?"

 "ಎಂಥ ಕೆಲಸ?"