ಪುಟ:Ekaan'gini.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೭೧

"ಎಂಥದಾದರೂ.ಇಷ್ಟೊಂದು ಓದಿದೀನಲ್ಲ.ಅದರ ಪ್ರಯೋಜನವಾಗು

ವಂಥ ಕೆಲೆಸ"

 "ಆಗಲಿ ಸುನಂದಕ್ಕ.ವಿಜಾರಿಸಿ ಹೇಳ್ತೀನಿ. ನಿರಾಸೆಗಿಂತ ಹೀಗೆ ಧೈರ್ಯ

ವಾಗಿರೋದೇ ಮೇಲು."

 "ಹೇಳಿದೆನಲ್ಲಾ ಕುಸುಮ? ಈಗಿರೋ ಹಾಗೆ ನನಗೆ ಬದುಕೋದು ಇಷ್ಟ

ವಿಲ್ಲ.ಈ ಪರಿಸ್ಥಿತೀನ ಕೊನೆಗುಣಿಸಿದರೇನೇ ಮುಂದಿನ ಯೋಚನೆ ಸಾಧ್ಯ. ನಾನು ದುಡುಕಿ ಮಾತಾಡ್ತಿದೀನಿಂತ ಭಾವಿಸ್ಬೇಡಿ.ಎಷ್ಟೋ ಕಾಲ ಯೋಚಿಸಿ ಯೋಚಿಸಿ ಈ ಮಾತನ್ನ ಹೇಳ್ತಿದೀನಿ."

 "ಗೊತ್ತು ಅಕ್ಕ."
 "ಇವತ್ತು ಮನೆ ಬಿಟ್ಟಿದ್ದು ಎರಡು ಕೆಲಸಕ್ಕಾಗಿ. ಒಂದು, ನಿಮ್ಜತೇಲಿ

ಮಾತನಾಡಿ ನಿಮ್ಮ ಅಭಿಪ್ರಾಯ ತಿಳಿಯೋದು,ಎಲ್ಲಾದರೂ ಕೆಲಸ ಕೊಡಿ ಸೀಂತ ಕೇಳೋದು.ಆಮೇಲೆ,ಹೋದ ಸಾರೆ ಹೋಗಿದ್ದೆನಲ್ಲ, ಸೋಮ ಶೇಖರ ಅಂತ? ಅವರನ್ನೊಮ್ಮೆ ಹೋಗಿ ನೋಡೋದು. ಕಾನೂನು ಈ ವಿಷಯದಲ್ಲಿ ಏನು ಹೇಳಿತ್ತೇಂತ ತಿಳಕೋಬೇಕು."

 ಮಾತುಕತೆ ಒಂದು ಹದಕ್ಕೆ ಬಂತೆಂದು ಕುಸುಮೆ ತಿಳಿದು, "ರಾಧಮ್ಮ

ನಲ್ಲೆಗೆ ಹೋಗೋಣವೆ?" ಎಂದು ಕೇಳಿದಿಳು.

 "ಹೊಂ. ಅವರಿಗೆ ನಾನೇನೂ ಹೇಳೋದಿಲ್ಲ ಕುಸುಮಾ, ನಿಧಾನವಾಗಿ

ಸೀವೇ ಅವರಿಗೆ ತಿಳಿಸಿ. ನನ್ನ ಅಭಿಪ್ರಾಯ ಅವರಿಗೆಷ್ಟು, ಇಷ್ಟವಾಗುತ್ತೋ...."

  ಕುಸುಮಾ,ಕಾಫಿ ತಿಂಡಿ ತರಲೆಂದು ಏಳುತ್ತ ಅಂದಳು:
  "ನಿಮ್ಮ ತಂದೆಯವರಿಗೆ ಹೇಳಿದೀರಾ?"
  "ಇಲ್ಲ ಕುಸುಮಾ ಅವರು ಒಪ್ಪೋದು ಕಷ್ಟ. ಆದರೂ ಒಪ್ಪಿಸಬಲ್ಲೇ

ಅನ್ನೋವಿಶ್ವಾಸ ಇದೆ. ನಾನೇನೂ ನೀತಿಗೆಟ್ಟವಳಲ್ಲವಲ್ಲ!"

  ನಿದ್ದೆಯಿಂದ ಎಚ್ಚರಗೊಂಡು ಅಳುತಲಿದ್ದ ಸೋಮನಾಧನನ್ನು ಕೆಲಸದ

ಹುಡುಗಿ ಎತ್ತಿಕೊಂಡು ಮೇಲಕ್ಕೆ ಬಂದಳು.

  ಆ ಮಗುವನ್ನು ತನ್ನೆದೆಗೆ ಕರೆದು ಕುಸುಮಾ ಸಂತೈಸಿದಳು.
  ಕುಳಿತೇ ಇದ್ದ ಸುನಂದೆಗೆ ತಾನು ತುಂಬಾ ಆಯಾಸಗೊಂಡಿದ್ದಂತೆ ಭಾಸ

ವಾಯಿತು.