ಪುಟ:Ekaan'gini.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ


'ಪಾಪ'ಸಿಲ್ಲದೆ ಒಂಟಿಯಾಗಿಯೆ ಬಂದ ಸುನಂದೆಯನ್ನು ಗಿರೀಶ ಗುರುತಿ ಸಿದ. ಸೀತಮ್ಮ ನಡುಮನೆಗೆ ಕರೆದೊತಯ್ದು, ಹಾಸಿದ್ದ ಜಮಖಾನದ ಮೇಲೆ ಆಕೆಯನ್ನು ಕುಳ್ಳಿರಿಸಿದಳು.

   ಅನಂತರ ಅರ್ಧ ಘಂಟ ಯಲ್ಲೆ  ಸೋಮಶೇಖರ ಮನೆಗೆ ಬಂದ.

ಆತ ಮುಖ ತೊಳೆಯಲೆಂದು ಸ್ನಾನದ ಮನೆಗೆ ಹೋದಾಗ, ಸೀತಮ್ಮ, ಟವೆಲಿನೊಡನೆ ಹಿಂಬಾಲಿಸಿ ಬಂದು ಅಂದಳು:

    "ಯಾರೋ ಒಂದು ಧರಾ ಇದಾಳೆ ನೋಡಿದರೆ ಅಯ್ನೋ ಅನಿಸುತ್ತೆ.

ಏನು ಕಷ್ಟವೋ ಏನೋ"

   ಸೋಮಶೇಖರ ಸುಮ್ಮನಿದ್ದ.

ನಡುಮನೆಗೆ ಕಾಫಿ ತಂದಿರಿಸಿ, “ನೀವೂ ಇಲ್ಲಿಗೇ ಬನ್ನಿ” ಎಂದು ಗಂಡ ನನ್ನು ಸೀತಮ್ಮ ಕರೆದಳು.

ಕಾಫಿ ಕುಡಿಯುತಿದ್ದಂತೆ ಸುನಂದಾ ಹೇಳಿದಳು.

“ವಕೀಲರಿಗೆ ಪುರಸೊತ್ತಿದೆಯಾ ?” "ಕಕ್ಷಿಗಾರರು ಬರೋದು ಏಳು ಗಂಟೆ ನಂತರ, ಅಷ್ಟರವರೆಗೂ ವುರ ಸೊತ್ತೇ" “ನಾನೂ ಒಬ್ಬಳು ಕಕ್ಷಿಗಾರಳಾಗಿ ಬಂದಿದೀನಿ" “ಕೇಳಿದೆಯಾ ಸೀತಾ? ಬಡ ವಕೀಲರನ್ನ ಹಾಗೆ ಹಂಗಿಸ್ತಿದ್ದಾರೆ!” ಎಂದ ಸೋಮಶೇಖರ. “ "ಹಾಗಲ್ಲ, ಸಹಜವಾಗಿಯೇ ಹೇಳ್ದೆ, ನಿಮ್ಮ ಜತೇಲಿ ಮಾತಾಡ್ಬೇಕಾ ಗಿತ್ತು", ಎಂದಳು ಸುನಂದಾ. ಸೀತಮ್ಮ ಆಕೆಯ ಕೆಂಪಡರಿದ ಮುಖವನ್ನೆ ನೋಡಿದಳು. “ಆಗಲಿ, ಏನು ಬೇಕೋ ಕೇಳಿ” “ಇಲ್ಲೇ ಕೂತಿರೋಣವೇ?”