ಪುಟ:Ekaan'gini.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಾತ್ರ ವಹಿಸುವ ಎಳೆಯರು ಯಾರೂ ಮನೆಯಲ್ಲಿಲ್ಲ. ಆ ಕೆಲಸವನ್ನೂ ತಾನೇ ಮಾಡಬೇಕು ಎಂದುಕೊಂಡಳು ಸುನಂದಾ.

    ತಂದೆ ಬೀದಿಗಿಳಿದೊಡನೆಯೆ ಸುನಂದಾ ನಡು ಮನೆಗೆ ಬಂದಳು.
    "ನಮಸ್ಕಾರ"
    ಅನಿರೀಕ್ಷಿತವಾಗಿದ್ದ ವಂದನೆ--ಸಂಬೋದನೆ; ಹೆಣ್ಣು ಸ್ವರ, ಛಾವಣಿಯನ್ನೇ ದಿಟ್ಟಿಸಿ ನೋಡುತ್ತ ಕುಳಿತಿದ್ದ ವೆಂಕಟರಾಮಯ್ಯ ಚಕಿತನಾಗಿ ಪಕ್ಕಕ್ಕೆ ತಿರುಗಿದ,
    "ನಮಸ್ಕಾರ, ಓ, ನೀವಾ!"
    ತನ್ನವಳ ಅಕ್ಕ ಎಂಬ ಅರಿವಿನ ಸಮಾಧಾನದಿಂದ ಹುಟ್ಟಿತ್ತು ಆ ಉದ್ಗಾರ
    "ಇನ್ಯಾರೂಂತಾ ತಿಳಕೊಂಡ್ರಿ?"
    ಸಂಕೋಚವನ್ನು ದೂರ ಸರಿಸುತ್ತ ಉತ್ತರರೂಪವಾಗಿ ವೆಂಕಟರಾಮಯ್ಯ ನಕ್ಕ.
    "ಎಲ್ಲಿ ಪದುಮ ಕಾಣಿಸ್ತಿಲ್ವೇನು?" ಎಂದರು ಸುನಂದಾ.
    "ಪದುಮ?"
    ಪಾಪ-- ಕಕ್ಕಾಬಿಕ್ಕಿಯಾಗಿದ್ದ ವೆಂಕಟರಾಮಯ್ಯ!
    "ಹೂಂ, ಅವಳೇ ವಿಜಯಾ."
    ಆ ಕರಿಯ ಮುಖದಲ್ಲೂ ರಕ್ತ ಸಂಚಾರವಾಗಿ ತೇಜಃಪುಂಜವಾಯಿತು.
    "ಓ!"
    "ಅಕ್ಕಾ" ಅಂಬ ಕರೆ ಬಂತೆಂದು ಸುನಂದಾ ಒಳಹೋಗಿ, ಕ್ಷಣ ತಡೆದು ಮತ್ತೆ ಬಂದಳು.
    "ಮಡಿಯುಟ್ಟು ಕೊಂಡ ಮೇಲೆಯೇ ಕಾಫಿ ತಗೋತಿರ? ಅಥವಾ ಒಂದು ಗುಟುಕು ಮೊದಲೇ ಕುಡಿಯೋಕೆ                                             
    ಆಕ್ಷೇಪವೇನದರೂ ಉಂಟೇ?-- ಅಂತಾ ಕೇಳ್ತಾರೆ."
    "ಯಾರು?"
    "ಅತ್ತೆ!"
    ಭೂಪತಿಗೆ ಕಸಿವಿಸಿಯಾಯಿತು. ಸ್ನಾನ ಆಮೇಲೆ ಎಂದರೆ ಮಡಿ