ಪುಟ:Ekaan'gini.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೭೫

        ಕೆಟ್ಟರೋಗಗಳಿದ್ದರೆ,   ಇಬ್ಬರೂ   ಬೇರೆಬೇರೆಯಾಗಿ  ಇರೋದಕ್ಕೆ  ಅವಕಾಶ 
        ಕೊಡೀಂತ   ನ್ಯಾಯಾ  ಸ್ಥಾನಕ್ಕೆ  ವ್ಯಧೆಗೆ  ಗುರಿಯಾದೋರು   ಅರ್ಜಿ  ಹಾಕ್ಬ
        ಹುದು. ಇನ್ನೊಂದು  Divorce -  ಹದಿಮೂರನೆ  ಸೆಕ್ಷನ್.  ವಿವರ ಓದ್ಲಾ?”
            ಆರ್ಧ  ಮುಚ್ಚಿಕೊಂಡಿದ್ದ ಕಣ್ಣುಗಳನ್ನು  ತೆರೆದು ಸುನಂದಾ ಆಂದಳು.
            "ಓದಿ."
           “ಈ  ಶಾಸನ ಜಾರಿಗೆ  ಬಂದ  ಅನಂತರ   ಅಧವಾ ಬರುವುದಕ್ಕೆ  ಮುಂಚೆ 
       ಆದ  ಯಾವುದೇ  ಮದುವೆಯನ್ನು,   ಗಂಡ  ಅಥವಾ   ಹೆಂಡತಿಯ  ಅರ್ಜಿ
ಪ್ರಕಾರ,   ವಿಚ್ಛೇದನದ  ತೀರ್ಪು  ಕೊಟ್ಟು    ವಿಸರ್ಜಿಸಬಹುದು.   ಆ   ತೀರ್ಪಿಗೆ
ಇರಬೇಕಾದ ಆಧಾರಗಳೇನೆಂದರೆ-
     ೧. ಆ   ವ್ಯಕ್ತಿ   [ ಗಂಡ ಅಥವಾ ಹೆಂಡತಿ]   ಬೇರೆಯವರ  ಜತೆ   ದೈಹಿಕ
ಸಂಬಂಧ ಬೆಳೆಸಿರಬೇಕು,  ಅಥವಾ
    ೨.  ಮತಾಂತರ ಹೊಂದಿರಬೇಕು; ಅಥವಾ 
    ೩. ಅರ್ಜಿ ಕೂಡೋದಕ್ಕೆ  ಹಿಂದಿನ ಮೂರು  ವರ್ಷಗಳಿಂದ  ಬುದ್ಧಿಭ್ರಮಣೆ 

ಯಾಗಿರಬೇಕು, ಅಥವಾ

    ೪. ಅರ್ಜಿ ಕೊಡೋದಕ್ಕೆ ಹಿಂದಿನ ಮೂರು ವರ್ಷಗಳಿಂದ ತೀವ್ರವಾದ ಗುಣ 

ವಾಗದಂಥ ಕುಷ್ಟರೋಗಕ್ಕೆ ಗೆುರಿಯಾಗಿರಬೇಕು , ಅಥವಾ

     ೫. ಅದೇ  ರೀತಿಯ ಆವಧಿಯಲ್ಲಿ.  ಕೆಟ್ಟರೋಗದಿಂದ  .ನರಳುತ್ತಿರಬೇಕು. 

ಅಥವಾ

     ೬. ಸನ್ಯಾಸಿಯಾಗಿರಬೇಕು , ಅಥವಾ    
     ೭. ಏಳು  ವರ್ಷಗಳ  ಅವಧಿಯಲ್ಲಿ  ನಾಪತ್ತೆಯಾಗಿರಬೇಕು,  ಅಥವಾ
     ೮   ಕಾನೂನು ಬದ್ದವಾಗಿ  ಬೇರ್ಪಟ್ಟು  ಎರಡು  ವರ್ಷಗಳಾದರೂ  ಜತೆ  

ಜೀವನ ಆರಂಭಿಸದೇ ಇರಬೇಕು , ಅಥವಾ

     ೯. ದಾಂಪತ್ಯ  ಹಕ್ಕು ದೊರಕಿಸಿಕೊಟ್ಟು   ಎರಡು ವರ್ಷಗಳಾದರೂ ಆ 

ಪ್ರಕಾರ ನಡೆಯದೇ ಇರಬೇಕು.

     - ಮದುವೆಯಾಗಿ ಮೂರು  ವರ್ಷಗಳಾಗುವ ತನಕ ವಿಚ್ಛೇದನಕ್ಕೆ  ಅರ್ಜಿ

ಯನ್ನು ಸ್ವೀಕರಿಸುವುದಿಲ್ಲ.

     ಸುನಂದೆಯ  ಮೈ  ಬೆವತಿತ್ತು.  ಹಾಳೆಗಳಿಂದ ತಲೆಯೆತ್ತಿ ಕಪ್ಪಗಾಗಿದ್ದ ಆ