ಪುಟ:Ekaan'gini.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಏಕಾಂಗಿನಿ ಮುಖವನ್ನು ಸೋಮಶೇಖರ ನೋಡಿದ, ಸೀತಮ್ಮ ಎದ್ದು ಒಳಹೋದಳು.

   “ಇಷ್ಟೆ”, ಎಂದ ಸೋಮಶೇಖರ. 
   ಒಂದು ನಿಮಿಷ ಸುಮ್ಮನಿದ್ದು ಸುನ೦ದಾ ಕೇಳಿದಳು: 
   “ಮಗೂಗೆ ಏನಾಗುತ್ತೆ ?”
   "ಮಗು ಇದ್ದರೆ, ಯಾರ ಜತೇಲಿ ಅದಿರೋದು ವಾಸೀಂತ ನ್ಯಾಯಾ 

ಸ್ಥಾನ ತೀರ್ಪುಕೊಡುತ್ತೆ.”

   “ಈ ವಿಚಾರಯೆಲ್ಲ ನಾಟಕದ ಹಾಗೆ ಬಹಿರಂಗವಾಗಿಯೇ ಆಗು
ತ್ತೇನು?'
 ಆ ಪ್ರಶ್ನೆ ಕೇಳುತಿದ್ದಂತೆ, ಈವರೆಗಿನ ಜೀವನ ನಾಟಕವೆಲ್ಲ ಯಾರಿಗೆ

ತಿಳಿಯದಂತೆ ಆಗಿತ್ತಲ್ಲವೆ? ಎಂಬ ಅಣಕದ ನುಡಿಯೊಂದು ಆಕೆಯೆ ಹೃದಯ ದೊಳಗೆ ರೂಪಗೊಂಡಿತು.

 ಹಾಗೇನಿಲ್ಲ ಖಾಸಗಿಯಾಗಿಯೇ ವಿಚಾರಣೆ ಆಗ್ಬೇಕೂಂತ ತಿಳಿಸಿದರೆ

ಹಾಗೇ ಮಾಡ್ತಾರೆ. ನ್ಯಾಯಾಸ್ಥಾನ ವಿಚ್ಛೇದನಕ್ಕೆ ಆಜ್ಜ ಕೊಟ್ಟರೆ ಜೀವ ನಾಂಶವನ್ನೂ ಕೊಡಿಸುತ್ತೆ.”

 ಕೊನೆಯ ವಾಕ್ಯ ಸುನಂದೆಗೆ ಕೇಳಿಸಿದಂತೆಯೇ ತೋರಲಿಲ್ಲ. 
ಆಕೆಗೆ ಆಶಕ್ತಿ ಎನಿಸಿ ಸಂಕಟವಾಯಿತು. ತಲೆ ಸಿಡಿಯತೊಡಗಿತು.ಬವಳ

ಬರುತ್ತಿದೆ, ತಾನಿನ್ನು ಬಿದ್ದುಬಿಡುವುದು ಖಂಡಿತ--ಎಂದು ಕೊಂಡಳ. ಆಧಾರವಾಗಿರಲೆಂದು ಗೋಡೆಗೆ ಒರಗಿದಳು.

 "ಸಾಕು ! ಸಾಕು!” ಎ೦ದಳು ಸುನಂದಾ. 
 ಸೋಮಶೇಖರ ಗಾಬರಿಯಾಗಿ ಆಕೆಯತ್ತ ನೋಡಿದ. “ಸೀತಾ, ಸೀತಾ,” 

ಎಂದು ಕರೆದ.

 ಆಸ್ವರದಲ್ಲಿದ್ದ ಉದ್ವಿಗ್ನತೆಯನ್ನು ಗಮನಿಸಿ ಸೀತಮ್ಮ ಓಡಿಬಂದಳು 
 "ಏನಾಯ್ತು?"
 "ನೀರು ತಗೊಂಡು ಬಾ.” 
 ಸುನಂದೆಯತ್ತ ನೋಡಿದ ಸೀತಮ್ಮ ಒಳಕ್ಕೆ ದಾವಿಸಿದಳು. 
 ಒರಗಿ ಕುಳಿತಿದ್ದ ಸುನಂದೆ ಬೀಳಲಿಲ್ಲ. ಒಂದು ಗುಟುಕು ನೀರನ್ನಷ್ಟೆ

ಕುಡಿದಳು