ಪುಟ:Ekaan'gini.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೭೯ ಗಿಂತ ಮುಂಚೆ ತಂದೆಯನ್ನು ಸಿದ್ಧಗೊಳಿಸುವುದು ಅಗತ್ಯವೆಂದು ಆಕೆಗೆ ತೋರಿತು. ಅಂತಹದೊಂದು ಯತ್ನವೆಂದು ಸುನಂದಾ ಕೇಳಿದಳು:

 "ರಾಮಕೃಷ್ಣಯ್ಯನೋರು ಸಿಕ್ಕಿದ್ದರಾ?"
 "ಹೂಂ ಸು೦ದಾ. ಯಾಕೆ?"
 “ಮೊನ್ನೆ ನಡೆದಿದ್ದು ಹೇಳಿದಿಯಾ ಅವರಿಗೆ?"
 ಆ ರಾತ್ರೆಯಿಂದ ಇಷ್ಟರತನಕ ಮಗಳು ಆ ವಿಷಯವೆತ್ತಿರಲಿಲ್ಲ.  ಮರೆತು 

ಬಿಟ್ಟಳೇನೋ ಎಂದಿದ್ದರು ಕೃಷ್ಣಪ್ಪನವರು. ಈಗ ಈ ಪ್ರಶ್ನೆಯಿಂದ ಅವರಿಗೆ ಆಶ್ಚರ್ಯವೇ ಆಯಿತು.

 "ಹೇಳ್ದೆ.”
 "ಏನಂದರು?”
 "ಏನನ್ನೋದು? ಬೈದು ಶಾಪ ಹಾಕಿದ.”
 ಈಗ ಯಾಕೆ ಆ ವಿಷಯ? - ಎಂದು ಕೇಳೋಣವೆನ್ನಿಸಿತು.ಆದರೆ ಅದರ

ಚರ್ಚೆಯಿಂದ ಮಗಳಲ್ಲಿ ನೊಂದುಕೊಳ್ಳುವಳೋ ಎಂದು ಅವರು ಸುಮ್ಮನಾ ದರು.

 ಆದಾದ  ಎರಡು ದಿನಗಳಲ್ಲೆ  ಕುಸುಮಾ  ಬಂದಳು.  ಆಕೆ  ತಂದುದು 

ಒಳ್ಳೆಯ ಸುದ್ದಿ.

 “ಸಂಪಿಗೆ ರಸ್ತೇಲಿ ನಮ್ಮವರ ಸ್ನೇಹಿತರು ಕೆಲವರು ಶಿಶುವಿಹಾರ ನಡೆಸ್ತಿ 

ದಾರೆ. ಅಲ್ಲೊಂದು ಕೆಲಸ ಸಿಗುತ್ತೆ.”

 “ಪಾಠ  ಹೇಳ್ಕೊಡೋದೆ?”
 “ಅಲ್ಲ. ಅದಕ್ಕೆಲ್ಲಾ ಮೂರು ಜನ “ಟೀಚರು”ಗಳೇ ಇದಾರೆ.  ನೀವು ಆ

ಸಂಸ್ಥೆಗೆ ವೇತನದ ಕಾರ್ಯದರ್ಶಿನಿ ಗೌರವಕಾರ್ಯದರ್ಶಿನಿ ಬೇರೆ ಇದಾರೆ ಏನ್ಹೆಳ್ತೀರಾ?"

 "ಒಪ್ಪಿದೆ. ಸಂಬಳ ಎಷ್ಟು ಇಪ್ಪತ್ತೈದಾ?!"
 “ಯಾಕ್ರಿ? ಐವತ್ತು ಕೊಡ್ತಾರೆ, ದಿನಾ ಹನ್ನೊಂದರಿಂದ ನಾಲ್ಕರವರೆಗೊ

ಐದರವರೆಗೊ ಕೆಲಸ.”

 “ಆಗಲಮ್ಮ. ಯಾವುದಕ್ಕೂ ಸಿದ್ಧ ನಾನು.”
 “ಶನಿವಾರ ಬೆಳಗ್ಗೆ ಸಮಿತಿ ಅಧ್ಯಕ್ಷರನ್ನು ನೀವು ನೋಡ್ಬೇಕು. ವಿಳಾಸ