ಪುಟ:Ekaan'gini.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ಏಕಾ೦ಗಿನಿ

ಕೊಡ್ತೀನಿ. ಒಬ್ಬರೇ ಹೋಗೋಕೆ ಆಗುತಾ? ಆಧವಾ ನಾನೂ ಜತೇಲೆ ಬರಲ ?”, “ಬೇಡ ಕುಸುಮಾ. ಇಷ್ಟು ಸಣ್ಣ ಕೆಲಸ ನಾನೊಬ್ಬಳೇ ಮಾಡಲಾರೆನಾ?” ಹೀಗೆ ಮುಖ್ಯ ವಿಷಯಕ್ಕೆ ಸ೦బంధిసిವ ಸ೦భాಷಣೆಯಾದ ಮೇಲೂ ಕುಸುಮಾ ಸ್ವಲ್ಪ ಹೊತ್ತಿದ್ದಳು. “ಮೊನ್ನೆ ವಕೀಲರ ಮನೆಗೆ ಹೋಗಿದ್ದಿರಾ ?” ఎంದು ಆಕೆ ಕೇಳಿದಳು. "ಹೊ೦. ಹೋಗಿದ್ದೆ.” ಬಂದ ಉತ್ತರ ಅಷ್ಟೆ. ಸುನಂದಾ ಬೇರೇನನ್ನೂ ಹೇಳಲಿಲ್ಲವೆಂದು ಕುಸುಮಾ ಬೇಸರಗೊಳ್ಳಲಿಲ್ಲ. ಅಚಾತುರ್ಯದಿಂದ ಕೇಳಬಾರದ ಪ್ರಶ್ನೆ ಕೇಳಿ ಗೆಳತಿಯ ಮನಸ್ಸನ್ನು ನೋಯಿಸಬಾರದೆಂದು ಆಕೆ ಸುಮ್ಮನಾದಳು. ಮತ್ತೊಮ್ಮೆ ಶನಿವಾರದ ಔಪಚಾರಿಕ ಭೇಟಿಯ ವಿಷಯ ತಿಳಿಸಿ ಕುಸುಮಾ ಹೂರಟಳು. “ಹ್ಯಾಗೆ ಹೋಗ್ರೀರಾ ಈಗ?” ಎಂದಳು ಸುನಂದಾ ಬೀದಿಯವರೆಗೆ బರುರತ್ತಾ, “ಬರತ ಸರ್ಕಲಿನವರೆಗೂ ನಮ್ಮವರಿದ್ದರು. ಕಾಗ್ನಲ್ಲಿ ತದ್ಬಿಟ್ಟು ಹಾಗೇ ಷಾಪಿಗೆ ಹೋದರು, ಈಗ ಬಸ್ನಲ್ಲಿ ಹೋಗ್ತೀನಿ.” ಸುನಂದಾ ಮಾತುಗಳನ್ನು ಒಂದೊಂದಾಗಿಯೇ ತೂಗುತ್ತ ಆಂದಳು : "ಏನು ಹೇಳ್ಳೇಕೋ ನನಗೆ ತೋಚ್ತಾ ಇಲ್ಲ, ಕುಸುಮಾ, ಈ ಋಣ ಯಾವತ್ತಾದರೂ ನಾನು ತೀರಿಸೋಕೆ ಸಾಧ್ಯವಾಗುತ್ತೋ ಇಲ್ಲೋ. ಕಾನೂನು ತಿಳಿಯೋಕೆ ಆವತ್ತು ಹೋಗಿದ್ದೆ, ತಿಳಿದಾಗ ಭಯವಾಯ್ತು, ಈಗ ಸುಧಾರಿ ಸಿದೀನಿ." “ಧೈರ್ಯವಾಗಿರಿ ಸುನಂದಕ್ಕ. ಕಷ್ಟವಾಗೂಲ್ಲ" “ರಾಧಮ್ಮನಿಗೆ ಹೇಳಿದಿರ ?” “ಅವರು ಆತ್ತು ಬಿಟ್ರು ಕಣ್ರೀ.” ಸುನ೦ದ ಉಗುಳು ನು೦గి ಸುಮ್ಮನಾದಳು. “ಆಗಲಿ ಮುಂದೆ ನೋಡೋಣ,” ಎಂದಳು. ...ಊಟದ ಹೊತ್ತಿಗೆ ಬಂದ ಕೃಷ್ಣಪ್ಪನವರು ಮಗಳ ಮಾತು ಕೇಳಿ