ಪುಟ:Ekaan'gini.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ೧೮೧ ಮೂಕನಂತಾದರು, ಏನು ಹೇಳಬೇಕೆಂದೇ ಅವರಿಗೆ ತೋಚಲಿಲ್ಲ. ಹೆಣ್ಣು ಮಕ್ಕಳು ಕೆಲಸ ಮಾಡುವುದು ಅವರಿಗೆ ಇಷ್ಟವಾಗಿರಲಿಲ್ಲವೆಂದಲ್ಲ, ಹಾಗೆ ತಿಳಿಯುವ ಸಂಕುಚಿತ ಭಾವನೆ ಅವರಿಗಿರಲಿಲ್ಲ. ಎಷ್ಟಾದರೂ ಇಷ್ಟು ದುಡಿದು ಸಂಪಾದಿಸುವೆನೆಂದು ತಾವು ಹೇಳಿದುದಕ್ಕೆ ಮಗಳೊಪ್ಪದೆ, ಸ್ವತಃ ತಾನೇ ದುಡಿಯಲು ಹೊರಟಳಲ್ಲಾ-ಎಂಬ ಅಂಶ ಅವರ ಮನಸ್ಸನ್ನು ಸ್ವಲ್ಪ ಕಟು ಕಿತು. ಬಳಿಕ, ಮಗಳ ಕೆಚ್ಚೆದೆಯನ್ನು ಕಂಡು ಹೆಮ್ಮೆ ಎನಿಸಿತು. ಆಕೆಯ ಗೆಳತಿ ಪ್ರಯತ್ನಪಟ್ಟ ದೊರಕಿಸಿದ್ದ ಕೆಲಸದ ವಿಷಯದಲ್ಲಾ ಬೇಸರಪಡು ವಂತಿರಲಿಲ್ಲ. ತಿಂಗಳಿಗೆ ಐವತ್ತು ರೂಪಾಯಿ ಕಡಿಮೆ ಏನಲ್ಲ, ತಮ್ಮ ನಿವೃತ್ತಿ ವೇತನದೊಡನೆ ಅದೂ ಸೇರಿದಾಗ, ಅಚ್ಚುಕಟ್ಟಾದ ಸಂಸಾರವನ್ನೆ ನಡೆಸ బಹುದು. ఒ೦ದು ತಿ೦ಗಳ ಹಿ೦ದೆಯಾಗಿದ್ದರೆ ಮಗಳ ಯೋಜನೆಗೆ ಸಮ್ಮತಿ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಸುನಂದಾ ದುಡಿಯುತ್ತಿರುವಳೆಂದು ಪುಟ್ಟಣ್ಣಸಿಗೆ ತಿಳಿದಾಗ ವಿರಸ ಹೆಚ್ಚ ಬಹುದೆ೦ಬ ಭಯ ಆಗ ಅವರನ್ನು ಕಾಡುತ್ತಿತ್ತು. ಈಗ ಅದಿಲ್ಲ. ಆತನ ಪ್ರತಿಕ್ರಿಯೆ ಏನಿದ್ದೀತೆಂದು ತಿಳಿಯುವ ಆಗತ್ಯವಿಲ್ಲ. అంತಹ ಆಸಕ್ತಿಯೇ ಇರಲಿಲ್ಲ ಅವರಿಗೆ. ಒಲ್ಲದೆ ಒ೦ದು ರೀತಿ ಯಿ೦ದ, ಸುನ೦ದ ಹೀಗೆ ಕೆಲಸಕ್ಕೆ ಹೋಗುವುದೇ ಮೇಲು ಆತನ ಮೊಂಡು ತನಕ್ಕೆ ಸರಿಯಾದ ಉತ್ತರ. ದುಂದಾವೃತ್ತಿಯಿಂದ, ಒಂದು ಹೆಣ್ಣಿನ ಬದು ಕನ್ನು ಮಣ್ಣಗೂಡಿಸುವುದು ದುಸಾಧ್ಯ ಎಂಬುದು ಆತನಿಗೆ ಗೊತ್ತಾಗಲಿ! ತಂದೆ ಒಪ್ಪಿಗೆಯ ಉತ್ತರ ಕೊಡದಿದ್ದರೂ ಸುನಂದಾ ಮುಂದುವರಿದಳು. “ಸ್ವಲ್ಪ ದಿವಸ ನಿನಗೆ ತೊಂದರೆ. ಸರಸ್ವತೀನ ನೀನೇ ನೊಡೊಣ್ಣಬೇಕಾ ಗುತ್ತೆ, ಆಮೇಲೆ ನನ್ಬತೇಲೆ ಕರಕೊಂಡು ಹೋಗೃಹುದು. ಅಲ್ಲಿ ಮಕ್ಕಳೊ ಟ್ಟಿಗೆ ಆಟವಾಡ್ತಿರ್ಲಿ...ಅಲ್ಲದೆ, ಇದೇ ಮನೇಲಿ ಇರಬೇಕು ಅನ್ನೋದೇನು? ಅನುಕೂಲವಾಗಿರೋ ಸಣ್ಣದೊಂದು ಮನೆ ಹುಡುಕಿ ಮಲ್ಲೇಶ್ವರಕ್ಕೆ ನಾವು ಹೋಗ್ಬಹುದು, ಅಲಾ ?” ಆ ತರ್ಕಸರಣಿ ಕೃಷ್ಣಪ್ಪನವರನ್ನು ಅಪ್ರತಿಭರಾಗಿ ಮಾಡಿತು. ಆವರೆಂದರು: “ನಿನ್ನಿಷ್ಟ ಸುಂದಾ, ಭಗವಂತನ ಇಚ್ಛೆ అದೇನು ఇದೇಯೋ ಯಾರಿಗೆ ಗೊತ್ತು ? ನೀನು ಕೆಲಸಕ್ಕೆ ಹೋಗೋದು ನನಗೆ ಒಪ್ಪಿಗೆ. ಸರಸ್ವತೀದೇನು ಮಹಾ ? ನೋಡ್ಕೋತೀನೀ. ನನಗೂ ಹೊತ್ತು ಹೋಗ್ವೇಕೋ ಬೇಡವೋ?