ಪುಟ:Ekaan'gini.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಏಕಾ೦ಗಿನಿ ತಾತ ಸಾಕಿದ ಮಗಳು ಅಂತ ನಾಳೆ ಆಕೇನ ಗೇಲಿ ವಾಡ್ತಾರೆ!” ತಂದೆಯ ಮನಸ್ಸು ಪ್ರಸನ್ನವಾಗಿದೆ ಎಂದು ಆ ನಗೆಮಾತು ಸಾಕ್ಷ್ಯ ಹೆಳಿತು. ...ಶನಿವಾರದ ಸಂದರ್ಶನ ಸುಲಭವಾಗಿತ್ತು. ವಯಸ್ಸಾಗಿದ್ದವರೊಬ್ಬರು ತಮ್ಮ ಹೆಂಡತಿಯ ಜತೆಯಲ್ಲಿ ಸುನಂದೆಯನ್ನು ಬರಮಾಡಿಕೊಂಡರು. “ಆರ್ಜಿ ತ೦ದಿದೀರಾ?” ఎంದವರು ಕೇಳಿದರು. “ಇಲ್ಲ.” "ಹಾಗಾದರೆ ಒಂದನ್ನು ಬರೆದು ಬಿಡಿ," ಎಂದು ಹೇಳಿ ಅವರು ಕಾಗದ ಲೇಖನಿ ತರಿಸಿಕೊಟ್ಟರು. ಅವರ ಹೆಂಡತಿಯೆ೦ದರು: “ನಿಮ್ಮ ವಿದ್ಯಾಭ್ಯಾಸದ ವಿಷಯವೆಲ್ಲಾ ನಮಗೆ ಗೊತ್ತಿದೆ. ಕುಸುಮಾ ಹೇಳಿದಾಳೆ.” “ಕುಸುಮಾ ಇಲ್ಲಿಗೆ బంದಿದ್ರೆ" ಎ೦ದು ಆಶ್ಚರ್ಯಾದಿ೦ದ ಸುನ೦ದಾ ಕೇಳಿದಾಳೆ." "ಹೌದು, ಮತ್ತೆ.. ಅವಳು ನಮಗೆ ಬೇಕಾದೋಳೆು. ನಮ ಸ್ನೇಹಿತರ ಹುಡುಗಿ.” ತನಗೆ ಕೆಲಸ ದೊರೆಯಲು ಗೆಳತಿಯೇ ಕಾರಣಳು. ಇವರು ತನ್ನ ಗಂಡನ ಪರಿಚಿತರು ಎ೦ದು ಸುಳ್ಳು ಹೇಳಿದ್ದಳು ಆಕೆ. ఆల్లి ಕುಳಿತಿದ್ದ ಗ೦ಡಸು ಸೂಚಿಸಿದ೦ತೆ ಸುನ೦ದ ತಾನೇ ಒ೦ದು ಅರ್ಜಿ ಯನ್ನು ಬರೆದಳು. ಬರೆದು ರೂಢಿ ಇರಲಿಲ್ಲ, ಇಂಗ್ಲಿಷು ಎಲ್ಲಿ ಕೈ ಕೊಡು ವುದೋ ಎ೦ದು ಅವಳಿಗೆ ಭಯವಾಗಿತ್ತು. ಆದರು ಅರ್ಜಿ ತಕ್ಕ ಮಟ್ಟಿಗೆ ಸಮರ್ಪಕವಾಗಿಯೇ ಇತ್ತು. ಅರ್ಜಿದಾರಳು ಶ್ರಿಮತಿ ಸುನ೦ದ ಮಿಸ್ಸೂ అల్ల, ಮಿನೆಸು ಅల్ల, ಸುನ೦ದ ವುಟ್ಟಣ್ಣ ಎ೦ದು ಉದ್ದಕ್ಕೆ ಬೆಳೆದಿರಲಿಲ್ಲ ಆ ಹೆಸರು. “ಹಿ೦ದೆ ನೀವೆಲ್ಲೂ ಕೆಲಸ ಮಾಡಿದವರಲ್ಲ, ಆದ್ದರಿಂದ ಪ್ರಮಾಣ ಪತ್ರಗ ಳೊ೦ದೂ ఇల్ల," ఎంದರು ಅಧ್ಯಕ್ಷರು. “ఇల్ల," ఎంದಳು ಸುನ೦ದಾ ವಿಷಾದಿ೦ದ.