ಪುಟ:Ekaan'gini.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೮೪ ಏಕಾ೦ಗಿನಿ

ದ್ದಾಗ ಆದ ಅನುಭವವೇ ಹಸನ್ಮುಖಿಯಾಗಿ ಬಂದ ಮಗೆಳನ್ನು ಕಂಡು ಕೃಷ್ಣಪ್ಪನವರಿಗೂ ಸಂತೋಷ ವಾಯಿತು. ఆಕೆಯೆ೦ದಳು: “ನನ್ನ ಹೆಸರು ಬರೇ ಸುನ೦ದಾ ಅ೦ತ ಕೊಟ್ಟೆ ಅಪ್ಪ. ಆತನದನ್ನ ಸೇರಿಸಿಲ್ಲ..." ಏನೋ ಹುಡುಕುತಿದ್ದಂತೆ ಬೀರುವಿನತ್ತ ಮುಖ ತಿರುಗಿಸಿ ಹೇಳಿದ ಮಾತು. “ಒಳ್ಳೆದಾಯ್ತು, ಬಿಡು,” ಎಂದರು ತಂದೆ. ಸ್ವಲ್ಪ ಹೊತ್ತು ಸುಮ್ಮನಿದು ಅವರೆಂದರು: "ವಿಜಯಾಗೆ ಕಾಗದ ಬರೆದು ಈ ವಿಷಯ ತಿಳಿಸೋಲ್ವ??” "ತಿಳಿಸ್ತೀನಿ." ...ತಂದೆ ಹೊರಹೋದ ಮೇಲೆ ಸುನಂದಾ ಬರೆದು ಹಾಕಿದುದು ಚುಟು ಕಾದ ಕಾಗದ, ಅದು ತಂಗಿಗಲ್ಲ. ಭಾವನಿಗೆ. ಅದರಲ್ಲಿದ್ದುದಿಷ್ಟೆ: "ಈ ಕಾಗದ ಕೈ ಸೇರಿದ ಒಂದು ವಾರದೊಳಗೆ ವಿಜಯಳನ್ನು ಕರೆದು ಕೊಂಡು ಬನ್ನಿ, ಎರಡು ದಿನಗಳ ಮಟ್ಟಿಗೆ ಬಂದರೆ ಸಾಕು. ನಿಮ್ಮ ಹತ್ತಿರ ಅಗತ್ಯ ಮಾತನಾಡಬೇಕಾಗಿದೆ. ಉಳಿದುದೆಲ್ಲಾ ಭೇಟಿಯಾದಾಗ.” ಕಾಗದ ಓದಿ ತಂಗಿಯೂ ಭಾವನಾ ಗಾಬರಿಯಾಗಬಹುದೆಂದು ಸುನಂದಾ ಷರಾ ಬರೆದಳು: “ತ೦ದೆ ಆರೋಗ್ಯವಾಗಿದಾರೆ.”

                                   ೧೫

ಮೊದಲಾಗಿ ತಿಳಿಸದೆ ಅಳಿಯನೂ ಮಗಳೂ ಬ೦ದಿಳಿದುದನ್ನು ಕಂಡು ಕೃಷ್ಣಪ್ಪನವರಿಗೆ ಸೋಜಿಗವೂ ಆಯಿತು, ಸ೦ತೋಷವೂ ಆಯಿತು. "ರಜಾ ಇತ್ತೆ?” ಎಂದು ಅವರು ಕೇಳಿದರು.