ಪುಟ:Ekaan'gini.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೮೬ ಏಕಾಂಗಿನಿ

       ಸುನಂದಾ ವಿವರ ಹೇಳಿದಳು.
       “ಅಕ್ಕಾ ಸಿಹಿ ಕೊಡಿಸು!”
        ತಂಗಿಯನ್ನು ಸೂಕ್ಷ್ಮವಾಗಿ ನೋಡುತ್ತ ಸುನಂದಾ ಕೇಳಿದಳು:
        "ಬಯಕೆನೇನೆ?"
        “ಇಲ್ಲಮ್ಮ, ಧೂ! ಸಿಹಿ, ನಿನಗೆ ಕೆಲಸ ಸಿಕ್ಕಿದ್ದಕ್ಕೆ.”
        ಲಜ್ಜೆಗೊಂಡ ವಿಜಯಳ ಮುಖ ಸೊಗಸಾಗಿ ವೆಂಕಟರಾಮಯ್ಯನಿಗೆ
     ತೋರಿತು.
        ತರಬೇಕಾದ ಸಾಮಾನುಗಳ ಪಟ್ಟಿಯನ್ನೂ ದುಡ್ಡನ್ನೂ ಕೊಟ್ಟು ತಂದೆ
     ಯನ್ನು ಸುನಂದಾ ಅಂಗಡಿಗೆ ಕಳುಹಿದಳು.
        “ಅಂತೂ ಶನಿವಾರ ನೋಡಿಕೊಂಡೇ ಬಂದಿರಿ. ಒಳ್ಳೇದಾಯ್ತು ನನಗೂ
     ರಜಾ," ಎಂದಳು ಸುನಂದಾ 
        "ಏನು ಸಮಾಚಾರ ?” ಎ೦ದು ವೆಂಕಟರಾಮಯ್ಯ ಕೇಳಿದ, ತಮ್ಮನ್ನು
     ಬರಮಾಡಿದುದರ ಉದ್ದೆಶವನ್ನು ತಿಳಿಯ ಬಯಸುತ್ತಾ.
        ಈಗಲೆ ಹೇಳಬೇಕೆ? ನಿಧಾನವಾಗಿ ಹೇಳಿದರಾಗದೆ? ಎಂದು ಒಂದು ಕ್ಷಣ 
     ಅನಿಶ್ಚಯದಿಂದ ಸುನಂದಾ ಹಾಗೆಯೇ ನಿಂತಳು. ಮತ್ತೆ ಒಮ್ಮೆಲೇ ಅಂದಳು:
        “ನಿಮಗೆಲ್ಲಾ, ಎಷ್ಟು  ಸಾಧ್ಯವೋ ಅಷ್ಟು ಬೇಸರ ಉಂಟುಮಾಡಿದೀನಿ.
     ಈ ಸಲ ಬೇಸರದ ಕೊಡಾನ ಪೂರ್ತಿಯಾಗಿ ತುಂಬಿಸ್ಬೇಕೂಂತ ಕರೆದೆ.”
         ಸರಸ್ವತಿಯನ್ನು ಮಾತನಾಡಿಸುತ್ತಿದ್ದ ವಿಜಯಾ ಕಿವಿ ನಿಗುರಿಸಿದಳು. ಅಕ್ಕನ
     ಮಾತು ಕೇಳಿ ಆಕೆಯ ಮುಖ ಕಪ್ಪಿಟ್ಟತು.
         “ಏನಾದರೂ ಆಯ್ತೆ ?”ಎಂದು ವೆಂಕಟರಾಮಯ್ಯ ಕೇಳಿದ.
         “ಇನ್ನೂ ಇಲ್ಲ.”
         " ಸ್ಪಷ್ಟವಾಗಿ  ಹೇಳಕ್ಕ!” ಎಂದಳು ವಿಜಯಾ ಅಗ್ರಹದ ಧ್ವನಿಯಿಂದ.
         “ಹೇಳ್ತೀನಿ. ಇನ್ನು ಹೇಳದೆ ಇರೋಕಾಗುತಾ ? ಇಬ್ಬರೂ ಕೇಳಿ. ನನ 
     ಗಾಗಿರೋ ಮದುವೆಯಿಂದ ನಾನು ಬಿಡುಗಡೆ ಹೊಂದ್ಬೇಕೂಂತ ಮಾಡಿದೀನಿ”
        ವೆಂಕಟರಾಮಯ್ಯ ಮತ್ತು ವಿಜಯಾ ತುಟಿ ಪಿಟಕ್ಕನ್ನದೆ ಕಲ್ಲಿನ ಬೊಂಬೆ
     ಗಳ ಹಾಗೆ ನಿಂತರು.ಅವರು ಚೇತರಿಸಿಕೊಳ್ಳಲು ಆಸ್ಪದ ಕೊಡದೆಯೇ
     ಸುನಂದಾ ಮುಂದುವರೆದಳು: