ಪುಟ:Ekaan'gini.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೮೭

      “ಆತ ಹೀನಾಯವಾಗಿ ನನ್ನ ತಂದೇನ ಬಯ್ದ. ನಡು ಬೀದೀಲಿ ಅಪ
  ಮಾನ ಮಾಡ್ದ. ತಲೆಹಿಡುಕ_ಕಳ್ಳ_ಹುಚ್ಚ ಅಂದ. ಇದನ್ನು ಸಹಿಸಿಯೂ 
  ಸುಮ್ಮನಿದ್ದರೆ ನಾನೆಂಧ ಮಗಳಾಗ್ತೀನಿ? ಮಾಡಬೇಕಾದ ಪ್ರಯತ್ನಾನೆಲ್ಲಾ
  ಯಾವತ್ತೋ, ಮಾಡಿದ್ದಾಯ್ತು. ಇನ್ನೇನೂ ಇಲ್ಲ. ನನ್ನ ಮಗಳನ್ನ ನಾನು
  ಉಳಿಸ್ಕೋಬೇಕು. ನ್ಯಾಯ ನನ್ನ ಕಡೆಗಿದೆ. ಸುಮ್ಮನೆ ಇದ್ದು ಸಮಾಜದ
  ದೃಷ್ಟೀಲಿ ನೀತಿಗೆಟ್ಟೋಳು ಅನಿಸೋದಕ್ಕಿಂತ, ನೀಚನಾದ ಗಂಡನನ್ನು  ದೂರ 
  ವಿಟ್ಟೋಳು ಅನಿಸ್ಕೊಳ್ತೀನಿ !”
       ವಿಜಯಾ ಅಲ್ಲೇ ಕುಳಿತು ಬಿಕ್ಕಿ ಬಿಕ್ಕಿ ಅಳತೊಡಗಿದಳು.
       ಸುನಂದೆಗೆ ರೇಗಿತು.
       "ಯಾಕಳ್ತೀಯ ? ಇದೇನು ನನ್ನ ಶ್ರಾದ್ಧವೇನೆ? ಅ೦ತೂ ನಿನಗೆ ಕೆಟ್ಟ
  ಹೆಸರು ಬರುತ್ತೆ, ಆಲ್ಲ?"
      ಈ ವಿಷಯದಲ್ಲಿ ವಿಜಯಳ ಅಭಿಪ್ರಾಯವೇನೆಂಬುದನ್ನು ಆಕೆಯ ಅಕ್ಕನಿ
  ಗಿಂತಲೂ ಚೆನ್ನಾಗಿ ತಿಳಿದಿದ್ದ, ವೆಂಕಟರಾಮಯ್ಯ. ಅತ್ತಿಗೆ ತಪ್ಪು ತಿಳಿವಳಿ
  ಕೆಯಿಂದ ಆ ಮಾತನಾಡುತಿದ್ದಾಳೆಂದು ಆತನಿಗೆ ಕೆಡುಕೆನಿಸಿತು. ತಾನು
  ತಿಳಿಯ ಹೇಳಬೇಕು ಎಂದು ಆತ ಬಾಯಿ ತೆರೆಯುವಷ್ಟರಲ್ಲೇ ವಿಜಯಳ
  ಸ್ವರ ಕೇಳಿಸಿತು
      “ಇಲ್ಲ ಅಕ್ಕಾ. ಹಾಗೆ ಹೇಳ್ಬೇಡ ಆಕ್ಕಾ. ನಿನ್ನ ಅಭಿಪ್ರಾಯ ತಪ್ಪು ಅಂತ
   ನಾನು ಯಾವತ್ತಾದರೂ ಅಂದಿದೀನಾ! ನೀನು ಪಡುತ್ತಿರೋ ಹಿಂಸೆ ನೆನೆ
   ಸ್ಕೊಂಡು ಅಳು ಬಂತು.”
       ವೆಂಕಟರಾಮಯ್ಯನೂ ಸ್ವರ ಕೂಡಿಸಿದ.
       “ಹೌದ್ರು ಕಣ್ರೀ. ವಿಜಯಾ ನಿಜವನ್ನೆ ಹೇಳ್ತೀದಾಳೆ.”
       ಸುನಂದಾ ಸುಮ್ಮನಾದಳು. ತಂಗಿಯ ಬಳಿಯಲ್ಲಿ ತಾನು ಕುಳಿತಳು.
   ಕಣ್ಣುಗಳು ಹನಿಗೂಡಿದುವು. ಕ್ಷೀಣವಾದ ಸ್ವರದಲ್ಲಿ ಆಕೆಯೆಂದಳು :
       ನನ್ನನ್ನು ಕ್ಷಮಿಸಿ. ನೀವು ನನ್ನನ್ನು ತಿರಸ್ಕಾರದಿಂದ ನೋಡಬಹುದು
   ಅನ್ನೊ ಭಯ ಇತ್ತು. ಅದಕ್ಕೊಸ್ಕರ ಆ ರೀತಿ ಮಾತನಾಡ್ದೆ. ಭಯದ 
   ಜತೇಲೆ ನೀವು ನನ್ನನ್ನು ಬಿಟ್ಟುಹಾಕಲಾರಿರಿ ಆನ್ನೋ ಒಂದು ಆಶೆಯೂ
   ಇತ್ತು. ಆಶೆ ಸುಳ್ಳಾಗಲಿಲ್ಲ.”