ಪುಟ:Ekaan'gini.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ೧೮೯

      ಸೋಮಶೇಖರರಲ್ಲಿಗೆ ಸುನಂದಾನ ಒಂದಿನ ಕರಕೊಂಡು ಹೋಗಿದ್ದೆ. ಅವರ
      ಮನೆಯಾಕೆ ಒತ್ತಾಯ ಮಾಡಿ ಕರೆಸಿದ್ಲು."
          "ಹೌದೆ ? ಅತ್ತಿಗೆ ಹೇಳ್ಲೇ ಇಲ್ಲ. ಮರೆತರೂ೦ತ ಕಾಣುತ್ತೆ."  
          “ಆತ ಬಹಳ ವಿನಯಶಾಲಿ. ಒಳ್ಳೆಯೋರು."  
          ಮಾವ ಇಷ್ಟೊಂದು ಉಲ್ಲಾಸದಿ೦ದಿರುವಾಗ ನಾದಿನಿ ಹೇಳಿದ್ದ ವಿಷಯ
      ಪ್ರಸ್ತಾಪಿಸುವುದಾದರೂ ಹೇಗೊ_ಎಂದು ವೆಂಕಟರಾಮಯ್ಯ ವಿವಂಚನೆಗೆ
      ಒಳಗಾದ- ಆದರೆ ಮೌನವನ್ನು ಮುರಿದು, ಅನುಕೂಲ ಪವನ ಇದ್ದಕಿದ್ದ೦ತೆ
      ಬೀಸಿತು.
          “ಆತನ೦ಥ ನಾಲ್ಕು ಜನ ಇದಾರೇ೦ತ ಲೋಕ ಇನ್ನೂ ಉಳಿದಿದೆ.
      ಒಮ್ಮೊಮ್ಮೆ ಈ ಗೋಳು ಸಹಿಸೋಕಾಗ್ದೆ ಒದ್ದಾಡ್ತೀನಿ. ಆಗ ಭಗವಂತ
     ಯಾಕಾದರೂ ಇನ್ನೂ ಈ ಭೂಮಿಮೇಲೆ  ಇಟ್ಟಿದಾನೋ ಅಂತ ಗೋಳಾಡ್ತೀನಿ"
         ವೆಂಕಟರಾಮಯ್ಯ ಎಚ್ಚರಿಕೆಯಿಂದ ಬಾಣವನ್ನು ಕೈಗೆತ್ತಿಕೊಂಡ.
         "ಆತ_ಪುಟ್ಟಣ್ಣ_ಹ್ಯಾಗಿದಾರೆ?”
         “ಅಯ್ಯೋ, ಅದನ್ನೇನು ಕೇಳ್ತೀರಾ? ಸುನ೦ದೆ ತಾಯಿ ಹಾಗೆ ಸಾಯೋ
     ದಕ್ಕೂ ಆತನೇ ಕಾರಣ. ನಾನೂ ಹೀಗೆ ಸಣ್ಣಗಾಗಿ ಕೊರಗ್ತಾ ಇದೀನಲ್ಲಾ_
     ನಾಳೆ ನಾನು ಹೃದಯಕ್ರಿಯೆ ನಿಂತು ಸತ್ತರೆ ಆ ಪುಣ್ಯವೂ ಆತನ ತಲೆ
     ಮೇಲೆಯೇ."
         ಮನಸಿನೊಳಗೇ ಸಮಾಧಾನಪಟ್ಟುಕೊಳ್ಳುತ್ತ ಆಳಿಯ ಕೆಳಿದ: 
         "ಇತ್ತೀಚೆಗೆ ಆತನ ಭೇಟಿಯಾಗಿತ್ತೇನು?” 
         ಕೃಷ್ಣಪ್ಪನವರು ನಿಟ್ಟುಸಿರು ಬಿಟ್ಟರು. 
         “ಯಾಕೆ ಕೇಳ್ತೀರಾ ಅದನ್ನ? ಅಯ್ಯೋ!” 
         ಆನಂತರ, ಆವರ ಪಾಲಿನ ಅತ್ಯಂತ ಕ್ರೂರವಾದ ಅನುಭವದ ಕಥೆ.
    ಸುನ೦ದಾ ನಾಲ್ಕೇ ಪದಗಳಲ್ಲಿ ಬೆಳಗ್ಗೆ ಅದನ್ನು ಹೇಳಿದ್ದಳು. ಕೃಷ್ಣಪ್ಪನವರು
    ಈಗ ಪೂರ್ಣ ಚಿತ್ರವನ್ನು ಕೊಟ್ಟರು. 
        ಇದನ್ನೆಲ್ಲ ಕೇಳಿದಾಗ, ತಾನು ಮಾಡುತ್ತಿರುವುದು ದಾಕ್ಷಿಣ್ಯಕ್ಕೆ ಕಟ್ಟು
    ಬಿದ್ದ ಕೆಲಸವಲ್ಲ; ಇದು ತನ್ನ ಪಾಲಿನ ಕರ್ತವ್ಯ_ಎಂಬುದು ವೆಂಕಟರಾಮ
   ಯ್ಯನಿಗೆ ಸ್ಪಷ್ಟವಾಯಿತು.