ಪುಟ:Ekaan'gini.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೯೧

ನಾದಿನಿ ವಿಷಯದಲ್ಲಿ ಕೆಟ್ಟ ನಾಲಿಗೆಗಳು ಏನ೦ತಿವೆ ಅನ್ನೋದು ಗೊತ್ತಿಲ್ವಾ

ನಿಮಗೆ?” 

ಕೃಷ್ಣಪ್ಪನವರು ಮಾತನಾಡಲಿಲ್ಲ. ವೆಂಕಟರಾಮಯ್ಯನೂ ಸುಮ್ಮನೆ

ಕುಳಿತ. 

ಸ್ವಲ್ಪ ಹೊತ್ತಾದ ಮೇಲೆ ಮಾವ ಗಡುಸಾದ ಸ್ವರದಲ್ಲಿ 'ಇನ್ನು ಏಳೋಣ,” ಎಂದರು . ಆಳಿಯ ವಿಧೇಯನಾಗಿ ಎದ್ದ. ಮನೆ ಕಡೆಗೆ ಹಿಂತಿರುಗುತ್ತ ಕೃಷ್ಣಪ್ಪ ಕೇಳಿದರು. “ಸುನಂದಾ ಈ ವಿಷಯ ಮಾತಾಡಿದ್ಲಾ?” ವೆ೦ಕಟರಾಮಯ್ಯ ತಡವರಿಸಿದ. ಇಲ್ಲ-ಎನ್ನಬೇಕೆನಿಸಿತು.ಅದರು

ಆದುದಾಗಲೆಂದು ಧೈರ್ಯದಿಂದ ಹೇಳಿದ:

"ಹೌದು." ನಾಲ್ಕು ಹೆಜ್ಜೆ ಮಾತಿಲ್ಲದೆ ನಡೆದು ಮಾವ ಎಂದರು “ಅದಕ್ಕೇ ನಿಮ್ಮಿಬ್ಬರನ್ನೂ ಅವಸರವಾಗಿ ಕರೆಸಿದ್ದು-- ಅಲ್ವೆ?' ಧ್ವನಿ ಗೊಗ್ಗರವಾಗಿತ್ತು. ಆಳಿಯ ಸುಮನಿದ್ದ. ...ಮನೆಯಲ್ಲಿ ಕೃಷ್ಣಪ್ಪನವರು ಮಕ್ಕಳೊಡನೆ ಮಾತನಾಡಲಿಲ್ಲ ಸರಸ್ವತಿ ಯೊಬ್ಬಳನ್ನೇ ತೊಡೆಯ ಮೇಲೆ ಕೂರಿಸಿಕೊಂಡು ಹೊತ್ತು ಕಳೆದರು ಒಳಗೆ ವಿಜಯಾ ಕೇಳಿದಳು. “ಏನಂದರು?” “ಏನೂ ಹೇಳ್ಲಿಲ್ಲ" ಎ೦ದ ವೆ೦ಕಟರಾಮಯ್ಯ. ಕೃಷ್ಣಪ್ಪನವರಿಗೆ ರಾತ್ರೆ ನಿದ್ದೆ ಬರಲಿಲ್ಲ. ಭಾವಕ್ಕೂ ವಿಚಾರಕ್ಕೂ ಒ೦ದೇ

ಸಮನೆ ತಿಕ್ಕಾಟ ನಡೆಯಿತು. ಅಚಾರ, ಪರ೦ಪರೆ, ಲೋಕಾಪವಾದದ ಭಯ
ಎಲ್ಲವೂ  ಒಂದಾಗಿ ಒಂದೆಡೆ ಜಗ್ಗಿದುವು. ಮಗಳು ಮೊಮ್ಮಗಳು ಸುಖಿಯಾಗಿರ

ಬೇಕೆ೦ಬ ಆಸೆ, ಪುಟ್ಟಣ್ಣನಂತಹ ಪಿಶಾಚಿಯ ಹಿಡಿತದಿಂದ ಅವರು ವಿಮುಕ್ತ ರಾಗಬೇಕೆನ್ನುವ ಹ೦ಬಲ, ನ್ಯಾಯಾಸ್ಥಾನದ ಮೊರೆಹೋಗುವುದರಲ್ಲಿ

ತಪ್ಪಿಲ್ಲ ಎನ್ನುವ ಸಮಾಧಾನ----ಇವೆಲ್ಲ ಒ೦ದಾಗಿ ಇನ್ನೊ೦ದೆಡೆ ಜಗ್ಗಿದುವು.
'ನಾವೇನು ಪರಂಗಿಯವರು ಕೆಟ್ಟು ಹೋದೆವೆ?' ಎಂದು ಮನಸ್ಸಿನಲ್ಲೆ ಒಮ್ಮೆ 

ಗೊಣಗಿದರು. ಮರು ಕ್ಷಣದಲ್ಲೆ ಒಳಗಿನ ಧ್ವನಿ ಕೇಳಿಸಿತು-'ನಾನು ಹೇಗಿ