ಪುಟ:Ekaan'gini.pdf/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


   "ನಿಮ್ಮಕ್ಕ ತುಂಬಾ ಕೆಟ್ಟೊರು ಕಣೇ."
   "ಯಾಕೆ?"
   ಎಷ್ಟೊಂದು ಪೀಡಿಸ್ತಾರೆ!"
   ವಿಜಯಾ ನೆಲವನ್ನು ನೋಡುತ್ತಲೆ ಕಿಸಕ್ಕನೆ ನಕ್ಕಳು.
   "ಕಾಫಿ"
   ಇನ್ನೂ ಆಕೆಯ ಕೈಯಲ್ಲೇ ಇತ್ತು ಲೋಟ. ಅದನ್ನೆತ್ತಿ ವೆಂಕಟರಾಮಯ್ಯ ಕಿಟಕಿಯ ದಂಡೆಯ ಮೇಲಿರಿಸಿ ಬಾಗಿಲನ್ನು ಮರೆಮಾಡಿದ.
   "ಎಷ್ಟೊಂದು ನಾಚಿಕೆಯೇ ನಿನಗೆ?"
   ಕಾಫಿ ಹೀರಲು ವೆಂಕಟರಾಮಯ್ಯನಿಗೆ ಪುರಸತ್ತಿರಲಿಲ್ಲ..
   ಮತ್ತೆ ಉಸಿರಾಡುವುದು ಸಾಧ್ಯವಾದಾಗ ವಿಜಯಾ ಮೆಲು ಧ್ವನಿಯಲ್ಲಿ ಕೇಳಿದಳು.
   "ಆ ಕಾಫಿ ಮೇಲೂ ಇಷ್ಟು ಕನಿಕರ ತೋರಿಸ್ಬಾರ್ದೆ?"
   ಆತ ನಕ್ಕು ಲೋಟವನ್ನೆತ್ತಿಕೊಂಡ. ಕಾಫಿ ರುಚಿಯಾಗಿತ್ತು.
   "ಒಂದು ಗುಟುಕು ನಿನಗೂ ಕೊಡಲಾ?"
   "ಬೇಡಿ,ಒಳಗಿದೆ."
   ಬರೇ ಉಪಚಾರದ ಮಾತೊ ಅಷ್ಟೆ. ಆ ತುಟಿಗಳ ಸ್ಪರ್ಶಸುಖವನ್ನು ಅನುಭವಿಸಿದ್ದ ಲೋಟ ಈ ತುಟಿಗಳ ಬಳಿಗೆ    ಬಂದಾಗ ವಿಜಯಾ ಬೇಡವೆನಲಿಲ್ಲ.
   ಆತ ತುಂಟನೋಟ ಬೀರುತ್ತ ಕೇಳಿದ:
   "ಕಾಫಿ ಚೆನ್ನಾಗಿದೆ ನಿಮ್ಮಕ್ಕನಾ ಮಾದಿದ್ದು?"
   "ಅಲ್ಲ. ನಾನೆ ಮಾಡ್ದೆ."
   "ಅದಕ್ಕೇ ಹೀಗಿದೆ. ಏನು ರುಚಿಯೋ! ದೇವರಿಗೆ ಪ್ರೀತಿ!"
   ಅದು ನಗೆಮಾತೇ ಆಗಿದ್ದರೂ ಮುಖ ಕಪ್ಪಿಡುವ ಹಾಗಾಯಿತು ಆಕೆ ಕತ್ತು ಕೊಂಕಿಸಿ ರಾಗವೆಳೆದಳು :
   "ಹೋಗ್ರೀ!..."
   "ಹೋಗ್ಲೇನು?"
   "ಊ...."