ಪುಟ:Ekaan'gini.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೯೫

         "ಹೋಗಲಿ ಬಿಡು. ಇದನ್ನೊಮ್ಮೆ ಹ್ಯಾಗಾದರೂ ಬಗೆಹರಿಸಪ್ಪ.”
         "ನಿಮ್ಮ ಮಾವ ಒಪ್ಪಿದಾರೆಯೇ?"
          "ಹೂನಪ್ಪಾ ಎಷ್ಟೊಂದು ಸಂಕಟ ಪಟ್ಕೊಂಡ್ರೂಂತ. ಆತ ದೇವರಂಥ 
         ಮನುಷ್ಯ.ಆಪುಟ್ಟಣ್ಣನ ವಿಷಯ ಪೂರ್ತಿಗೊತ್ತಿಲ್ಲನಿಂಗೆ ಆತ ಮಹಾನೀಚ"
                 “ಹಾಗಂತ್ಲೇ ನಾನು ಊಹಿಸ್ದೆ, ಇಲ್ದಿದ್ರೆ, ನಿನ್ನ ನಾದಿನಿಯಂತ-.ಸಾಧು
             ಪ್ರಾಣಿ ಕೆರಳೋದು ಸಾಧ್ಯವೇ ಇಲ್ಲ.”
                ಹೊರಗೆ ಮಳೆಸುರಿಯತೊಡಗಿತು. ಬಿಸಿಕಾಫಿಯಿಂದ ಆದ ಉಪಯೋಗ 
         ಸ್ವಲ್ಪ ವಾದರೂ ಅದು ಸ್ವಾಗತಾರ್ಹವೇ.
      ಸ್ನೇಹಿತನಿಂದ ವಿವರ ಕೇಳಿ ತಿಳಿಯುತ್ತ ಸೋಮಶೇಖರ ನೋಟೀಸೊಂದನ್ನು
       ಬರೆದ. ಅದು ಸಿದ್ಧವಾದ ಬಳಿಕ ಆಲ್ಲಲ್ಲಿ ತಿಳಿಯಹೇಳುತ್ತ ಓದಿದ:
                                    ನೋಟೀಸು
        ನಂಬರು -                          ತಾರೀಕು--ನಾಳೇದು ತಾನೆ?
                     ಇದರ ಕೆಳಗೆ ನನ್ನ ಹೆಸರು ಮತ್ತು ವಿಳಾಸ          
        ಆತನ ವಿಳಾಸ ಹಾಕ್ಬಿಟ್ಟು ದಲ್ಲಿ ವಾಸವಾಗಿರುವ ಶ್ರೀಮಾನ್ ಪುಟ್ಟ
ಣ್ಣನವರಿಗೆ ____
       ನಮ್ಮ ಕಕ್ಷಿಗಾರಳಾದ ವಿಳಾಸ ಬರೆದು... ವಾಸವಾಗಿರುವ ಶ್ರೀಮಾನ್
    ಕೃಷ್ಣಪ್ಪನವರ ಮಗಳು ಶ್ರೀಮತಿ ಸುನಂದಮ್ಮ ಹೇಳಿಕೆ ಮೇರೆ 
     ತಿಳಿಯಪದಡಿಸುವುದೇನೆಂದರೆ:___
      ನಮ್ಮ ಕಕ್ಷಿಗಾರಳು ನಿಮಗೆ ಶಾಸ್ತ್ರೋಕ್ತವಾಗಿ ವಿವಾಹವಾದ  
     ಹೆಂಡತಿ ಆಗಿರುವುದೂ ಈ ಸಂಬಧದಿಂದ ಸರಸ್ವತಿ ಎಂಬ ಎರಡೂವರೆ 
     ವರ್ಷದ ಮಗುವಿರುವುದೂ ಸರಿಯಷ್ಟೆ? ಸದರಿ ಸರಸ್ವತಿ ಹುಟ್ಟದ ಮೇಲೆ 
     ಬಾಣಂತನ ಮುಗಿಸಿಕೊಂಡು ನಿಮ್ಮ ಮನೆಗೆ ನಮ್ಮ ಕಕ್ಷಿಗಾ ರಳು 
     ಬಂದಾಗಿನಿಂದಲೂ ಹೀನಾಮಾನವಾಗಿ ಬಯ್ಯುವುದು, ಹೊಡೆ ಯುವುದು,
     ಅನ್ನ ಬಟ್ಟೆ ಕೊಡದೆ ಚ೦ಡಿಸುವುದು,-ಈ ರೀತಿ ನಿಷ್ಕಾರಣ ವಾಗಿ ಕ್ರೂರ 
    ಹಿಂಸೆ ಮಾಡಿದ್ದರಿಂದ ನಮ್ಮ ಕಕ್ಷಿಗಾರಳು ಮತ್ತು ಮಗು ಸಹಿತ ಕಾಹಿಲೆ
    ಬಿದ್ದು ಬಹಳ ಕಷ್ಟ ಪಡಬೇಕಾಗಿ ಬ೦ದುದು ಸರಿ ಯಷ್ಟೆ? ನೈತಿಕ ನಂತರ
    ನೀವು ಕೆಟ್ಟ ಹೆಂಗಸರ ಜತೆ ಅ ಸಂಬಂಧ.