ಪುಟ:Ekaan'gini.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಏಕಾಂಗಿನಿ

    ಬೆಳೆಸುವ ವಾಡಿಕೆಯನ್ನು ಇಟ್ಟುಕೊಂಡಿದ್ದು ನಮ್ಮ ಕಕ್ಷಿಗಾರಳ ಮನ ಸ್ಸಿಗೆ. ಹಳ ವ್ಯಥೆಯುಂಟಾದದ್ದೂ ಈ ರೀತಿ ಎಂಟು ತಿಂಗಳ ಕಾಲ ಇವಳನ್ನು ಕ್ರೂರ ಹಿಂಸೆಗೆ ಗುರಿ ಮಾಡಿದ್ದೂ ಸರಿಯಷ್ಟೆ? ಆ ಬಳಿಕ ಕಕ್ಷಿಗಾರಳು ಅವಳ ತಂಗಿ ಮದುವೆಗೋಸ್ಕರ ತವರು ಮನೆಗೆ ಹೋಗ ಬೇಕಾಗಿ ಬಂತು ಅಲ್ಲಿಂದ ಕಕ್ಷಿಗಾರಳು ನಿಮ್ಮಲ್ಲಿಗೆ ವಾಪಸು ಬರುವ ವಿಷಯದಲ್ಲಿ ನೀವು ಉದಾಸೀನದಿಂದ ಇದ್ದುದು ಸರಿಯಷ್ಟೆ? ಹೀಗಿದ್ದಾಗ್ಲೂ, ನಮ್ಮ ಕಕ್ಷಿಗಾರಳು ಮತ್ತು ಅವರ ತಂದೆ ಎಷ್ಟೋ ಸಲ ಲಿಖಿತ ಮೂಲಕವಾಗಿಯೂ ಮತ್ತು ಮೊಕ್ತಾ ಮನೆಗೆ ವಾಪಸು ಕರ ಕೊಂಡು ಹೋಗಬೇಕೆಂದು ಪ್ರಾರ್ಥನೆ ಮಾಡಿದ್ದಾಗ್ಯೂ ನೀವು ಎಲ್ಲ ವನ್ನೂ ನಿರಾಕರಿಸಿದು ಸರಿಯಷ್ಟೆ ? ತದನಂತರ ನೀವು ವಾಸವಾಗಿದ್ದ ಹೋಟೆಲಿಗೆ ಮಗುವಿನೊಡನೆ ನಮ್ಮ ಕಕ್ಷಿಗಾರಳು ಬಂದಾಗ ಅವಳನ್ನು ತುಚ್ಛವಾಗಿ ಬೈದು ಧಿಕ್ಕರಿಸಿ ಹೊರಗೆ ಕಳಿಸಿದ್ದು ಸರಿಯಷ್ಟೆ?

ಈಗಲೂ ನೀವು ಈ ನೋಟೀಸು ತಲ್ಪಿದ ಹದಿನೈದು ದಿನಗಳಲ್ಲಿ ನಮ್ಮ ಕಕ್ಷಿಗಾ ರಳನ್ನು ನಿಮ್ಮ ಮಗುವನ್ನು ಕಕ್ಷಿಗಾರಳ ತಂದೆ ಕೃಷ್ಣಪ್ಪನವರ ಮನೆಯಿಂದ ಕರೆದುಕೊಂಡು ಹೋಗಿ ಮೊದಲಿನಂತೆ.ಸೌಹಾರ್ದ ರೀತಿ ಯಲ್ಲಿ ಸಂಸಾರ ಮಾಡಿಕೊಂಡಿರಬೇಕಂದು ನಮ್ಮ ಕಕ್ಷಿಗಾರಳು ಕೋರಿ ಕೊಂಡಿರುತ್ತಾಳೆ.ನೀವು ಹೀಗೆ ಮಾಡದಿದ್ದಲ್ಲಿ ನಮ್ಮ ಕಕ್ಷಿಗಾರಳು ನಿರ್ವಾಹವಿಲ್ಲದೆ ನಿಮ್ಮ ಮೇಲೆ ವಿವಾಹವಿಚ್ಛೇದನಕ್ಕಾಗಿ ತಕ್ಕ ಕೋರ್ಟನಲ್ಲಿ ಕ್ರರು ಪು ಜರುಗಿಸುವವಳಾಗಿರುತ್ತಾಳೆಂದು ಈ ಮೂಲಕ ನಿಮಗೆ ತಿಳಿಯಪಡಿಸಲಾಗಿದೆ.ಇದರಿಂದ 'ನಮ್ಮ ಕಕ್ಷಿಗಾರಳಿಗುಂಟಾಗುವ ಖರ್ಚುವೆಚ್ಛಗಳಿಗೂ ಮತ್ತು ಈ ನೋಟೀಸು ಫೀಸು ೧೦ ರೂವಾಯಿ ಗಳಿಗೂ ನೀವೇ ಬದ್ಧನಾಗಿರುತ್ತೀರಿ, ತಿಳಿಯಿರಿ...."

 ಓದಿ ಮುಗಿಸಿ ಸೋಮಶೇಖರ ಕರಡು ಪ್ರತಿಯನ್ನು ವೆಂಕಟರಾಮಯ್ಯನಿಗೆ
ಕೊಟ್ಟ. 

"ತಗೊಂಡು ಹೋಗಿ ಕೊಡು ಓದಿ ನೋಡ್ಲಿ. ವಿಳಾಸಗಳನ್ನ ಕೇಳಿ ಭರ್ತಿ ಮಾಡು"

ಸೋಮಶೇಖರ ಸ್ವಲ್ಬ ವಾದರೂ ನಿರ್ಲಿಪ್ತತೆಯಿಂದ ಈ ವ್ಯವಹರಣೆಯನ್ನು