ಪುಟ:Ekaan'gini.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೯೭

   ಪರಿಗಣಿಸಲು ಸಮರ್ಧನಾಗಿದ್ದ. ವೆಂಕಟರಾಮ್ಯನಿಂದ ಅದು ಸಾಧ್ಯವಿರಲಿಲ್ಲ.
   "ಕೈಯಲ್ಲಿದ್ದ ಕರಡು ಪ್ರತಿಯನ್ನೇ ನೋಡುತ್ತ ಆತನೆಂದ:
   " ವಿವಾಹ ವಿಚ್ಛೇದನದ ಕಲ್ಪನೆಗಿಂತಲೂ ಅದನ್ನು ಪಡೆಯೋ ವಿಧಾನವೇ ಭಯಂಕರ.”
   "ಇಷ್ಟಕ್ಕೇ  ಮುಗಿಯಿತೂ೦ತ ತಿಳಕೋಬೇಡ. ಈ ನೋಟಿಸಿನಲ್ಲಿರೋ ಆಪಾದನೆಗಳನ್ನೆಲ್ಲ ರುಜುವಡಿಸೋಕೆ            ನಾವು ಸಿದ್ಧವಾಗಿರ್ಬೇಕು ಹಿಂಸೆ ಕೊಟ್ಟದು, ಕೆಟ್ಟ ನಡತೆ—ಇವಕ್ಕೆಲಾ. ಸಾಕ್ಷಿಗಳು ರ್ಸಿಬಹುದೇನು?”
   “ಖಾಸಗಿ ವಿಚಾರಣೆ ತಾನೆ?”
   "ಹೂಂ."
  “ಆಕೇನ ಒಡಹುಟಿದವಳ ಹಾಗೆ ಪ್ರೀತಿಸೋ  ಸ್ನೇಹಿತೆಯರಿದಾರೆ.
   ಎಷ್ಟೋ ವಿಷಯ ಕಣ್ಣಾರೆ ನೋಡಿರೋರು.ಅವರ ಸಾಕ್ಷ್ಯ ಸಾಕಾದೀತೆ?"
   "ಧಾರಾಳವಾಯ್ತು."
   "ಇವರ ಕ್ರಮ ಹ್ಯಾಗವ್ವಾ?ಏನಾಗುತ್ತೆ ಮುಂದೆ?"
   "ಮೌಲತ್ ನಾನು ಫಾರ್ಮ್ ಕೊಡ್ತೀನಿ.ನಾದಿನಿ ಕೈಲಿ ಸಹಿಹಾಕಿಸ್ಕೊಂಡು ಬಾ ನೋಟೀಸ್ ಕಳಿಸಿ ಹದಿನೈದು ದಿವಸ ಕಾಯ್ಬೇಕು ಇದನ್ನ ತಗೊಳ್ಳದೇ ಆತ ತಪ್ಪಿಸ್ಕೋಬಹುದು ಅಥವಾ ತಗೊಂಡು ಸುಮ್ಮನಿರಬಹುದು ತನ್ನ ವಕೀಲನ ಮೂಲಕ ಮುಖ್ಯ ವಿಷಯಗಳನ್ನ ನಿರಾಕರಿಸಿ ಉತ್ತರ

ಕೊಡಲೂ ಬಹುದು. ಆ ಮೇಲೆ ಡಿಸ್ಟ್ರಿಕ್ಟ್ ಕೋರ್ಟಿಗೆ ನಮ್ಮ ಅರ್ಜಿ ಅವನೇನೂ ಬರಬೇಕಾದ್ದಲ್ಲ.ನಾನೇ ಕೊಡ್ತೀನಿ ಶಿರಸ್ತೇದಾರ ಅದನ್ನ ತಗೊಂಡು ಫೈಲ್ ಮಾಡ್ತಾನೆ. ಒಂದು ತಿಂಗಳ ವಾಯಿದೆ ಕೊಟ್ಟು ಆ ಮಹಾನುಭಾವನಿಗೆ ಕೋರ್ಟು ನೋಟೀಸು ಕೊಡುತ್ತೆ.ಆತ ಬಂದರೆ ಸಾಕ್ಷಿಗಳ ವಿಚಾರಣೆಗೇಂತ ಮತ್ತೊಂದು ತಿಂಗಳು ಮುಂದೆ ಹೋಗುತ್ತೆ.ಅದಾದ್ಮೇಲೆ ತೀರ್ಪು....

ಆತ ಅರ್ಜೀನ ಎದುರಿಸ್ಬಹುದೂ ಅಂತೀಯಾ?"
 ಯೋಚಿಸಿ ವೆಂಕಟರಾಮಯ್ಯ ಹೇಳಿದ:
  "ಇಲ್ಲ ಅನಿಸುತ್ತೆ.ಮಗು ವಿಷಯದಲ್ಲಂತೂ ಆತನಿಗೆ ಆಸಕ್ತಿ ಇಲ್ಲ."
   "ಆತ ಸುಮ್ಮನಿದ್ದರೆ ಎಕ್ಸ್ ಪಾರ್ಟ ತೀರ್ಪು.ಹೀಯರಿಂಗಿನ ದಿವಸವೇ
  ಎಲ್ಲಾ ಮುಗಿದ್ಹೋಗುತ್ತೆ."