ಪುಟ:Ekaan'gini.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೯೯

ಸುನಂದಾ ಅದನ್ನೋದಿ ಅಂದಳುಅ:

“ಇದನ್ನೆಲ್ಲಾ ಬರೀಲೇಬೇಕೇನು?" ಆಕೆಯ ಭಾವನೆಂದ:

"ಹೌದು. ಕ್ರಮ ಪ್ರಕಾರ ಆಗೋದು ಬೇಡ್ವೆ?"
"ಆ ಖರ್ಚು ವೆಚ್ಚದ ವಿಷಯ ಬಿಟ್ಟುಬಿಡೋದಕ್ಕೆ ಹೇಳು ಆತನ ಪಾಪದ ಹಣ ಯಾರಿಗ್ಬೇಕು?"


               ೨೭

ವಿಜಯಾ ಮತ್ತು ವೆಂಕಟರಾಮಯ್ಕ, ದೀಪಾವಳಿಗೆ ಮತ್ತೆ ಬರುವೆ ವೆಂದು ಹೇಳಿ, ಶಿವಮೊಗ್ಗೆಗೆ ಹೊರಟುಹೋದರು. ವಕೀಲರ ನೋಟೀಸು ಪುಟ್ಟಿಣ್ಣನನ್ನು ಹುಡುಕಿಕೊ೦ಡು ಹೋಯಿತು. ಕುಸುಮೆಯ ಬಳಿಗೆ ಬಂದು ಸುನಂದಾ ಅಂದಳು: "ಹಿಂದೆ ನೀವೊ೦ದು ಮಾತು ಹೇಳಿದ್ದಿರಿ. 'ವಿವಾಹ ವಿಚ್ಚೇದನ ತತ್ವ ನನಗೆ ಒಪ್ಪಿಗೆ. ಆದರೆ ಅದನ್ನು ಆದ ನ್ಯಾಯ ಸರಿಪಡಿಸೋಕೆ ಉಪಯೋಗಿ ಸ್ಪೇಕು. ಹೊಸ ಅನ್ಯಾಯ ಮಾಡೋದಕ್ಕಲ್ಲ'__ಅಂತ. ನೆನಪಿದೆಯಾ ಕುಸುಮಾ?" "ಇದೆ.? "ಆ ತತ್ತ್ವನ ಆದ ಅನ್ಯಾಯ ಸರಿವಡಿಸೋಕೆ ಈಗ ಉಪಯೋಗಿಸ್ತೀನಿ. ಯಶಸ್ವಿಯಾಗು ಅಂತ ಹಾರೈಸಿ," "ಯಶಸ್ವಿಯಾಗಿ ಸುನಂದಕ್ಕ." ಸುನಂದಾ ಅಲ್ಲಿಂದ ರಾಧಮ್ಮನ ಬಳಿಗೆ ನಡೆದಳು. "ಒಮ್ಮೆ ಮುರಿದ್ಮೇಲೆ ಕೂಡ್ಸೋಕಾಗಲ್ಲ__ಅಂದಿದ್ರಿ.ಪುನ್ಃ ಕೂಡ್ಸೋದು ಸರ್ವಧಾ ಅಗತ್ಯವಿಲ್ಲ ಅನ್ನೋದು ಖಚಿತವಾಗಿ ಮರೆತಿದೀನಿ. ದುಡುಕ್ಷೇಡ__ಅಂದಿದ್ರಿ. ದುಡುಕದೆ ಸಾವಧಾನವಾಗಿ ಯೋಚಿಸಿ ಮಾಡ್ತಿದೀನಿ. ಇದು ತಪ್ಪೂಂತ ಅನಿಸಿದರೆ,ಹೊಟ್ಟೀಲಿ ಹಾಕ್ಕೊಂಡು ಕ್ಷಮಿಸಿ",ಎಂದು ನುಡಿದು ರಾಧಮ್ಮನ ಪಾದಗಳನ್ನು ಮುಟ್ಟಿದಳು.