ಪುಟ:Ekaan'gini.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




              ೨೦೦                                   ಏಕಾಂಗಿನಿ
                 ರಾಧಮ್ಮನೆಂದರು :
                 “ಅಯ್ಯೋ! ಇದೇನು ಮಾಡ್ತಿದೀರಾ? ಛೆ, ಬಿಡಿ! ತಪ್ಪೂಂತ ಹೇಳೋಕೆ 
              ನಾನು ಯಾರು?
                 "ಆಶೀರ್ವಾದ ಮಾಡಿ "
                  ಗದ್ದದಿತ ಕಂಠದಿಂದ ರಾಧಮನೆಂದರು :
                  “ದೆವರು ನಿಮಗೆ ಒಳ್ಳೇದು ಮಾಡ್ಲಿ ಸುನಂದಾ.”
                            ○               ○              ඊ                     ඊ
                  ಪುಟ್ಟಣ್ಣ, ರಿಜಿಸ್ಟರ್ ಆಗಿ ಬಂದಿದ್ದ ಕಾಗದವನ್ನು ಎರಡು ಸಹಿ ಹಾಕಿ
               ಪಡೆದುಕೊಂಡ. ಇ೦ಧದೇ ಇರಬಹುದೆಂದು, 'ಇಂದಾ' ವಿಳಾಸ ನೋಡಿದೊ 
               ಡನೆಯೆ ಆತ ಊಹಿಸಿದ್ದ. ವಕೀಲರ ನೋಟೀಸು, ಹು೦ ! ಪುಟ್ಟಣ್ಣ ಮುಗು
               ಳುನಗುತ್ತ ಅದನ್ನೋದಿದ. ಎರಡನೆ ಸಾರೆಯೊಮ್ಮೆ ಓದಿದ. ಬಳಕೆ ಮರು
               ಯೋಚನೆ ಇಲ್ಲದೆ, ಅದನ್ನು ಚೂರುಚೂರಾಗಿ ಹರಿದು ಹಾಕಿದ.
                  ತನಗೆ ಬೇಡವಾಗಿದ್ದ ಸಂಬಂಧದಿಂದ ಮುಕ್ತನಾಗುವ ದಿನ ಸಮೀಪಿಸಿ ತೆಂದು 
               ಆತನಿಗೆ ಸಂತೋಷವಾಯಿತು,
                   ಚಾಣಾಕ್ಷರಾದ ವಕೀಲರನ್ನು ನೀಮಿಸಿ ಅವರನ್ನೆಲ್ಲ ಕುಣಿಸಿದರೆ ಹೇಗೆ ?-
               ಎ೦ಬೊ೦ದು ಯೋಚನೆಯೂ  ಹೊಳೆಯಿತು. ಆಕೆಯ ಮೇಲೆ ದುರ್ನಡತೆಯ 
               ಪ್ರತ್ಯಾರೋಪ ಹೊರಿಸಬಹುದು. ಮಗುವನ್ನು ತನ್ನ  ವಶಕ್ಕೆ ಕೊಡಬೇoದು 
               ಕೇಳಬಹುದು. ಬೇಕುಬೇಕೆಂದೆ ಅವರನ್ನು ಗೋಳಾಡಿಸುಹುದು.
                    ಆ ಯೋಚನೆ ಸೊಗಸಾಗಿತ್ತು, ಎಲ್ಲಾದರೂ ಆಕೆಗೆ ಸೋಲಾಗಿ ಮಗು
                ವನ್ನು ತನ್ನ ವಶಕ್ಕೆ ಕೊಟ್ಟರೆ? ಅದೀಗ ಫಜೀತಿ!ಆ ಮಗುವನು ಯಾವು 
                ದಾದರೂ ಆನಾಧಾಶ್ರಮಕ್ಕೆ ದಾಟಿಸಬೇಕು.
                   ಆದರೆ ವಾಸ್ತವವಾಗಿ ಆತನಿಗೆ ಅಂತಹ ಯಾವ ತೊಂದರೆಯೂ ಇಷ್ಟ
                ವಿರಲಿಲ್ಲ. ಹೀಗಾಗಿ, ಏನು ಬೇಕಾದರೂ ಮಾಡಿಕೂಳ್ಳಲಿ ಎಂದು ಸುಮ್ಮ
                ನಾದ.
                    ಆಕೆ ಜೀವನಾಂಶ ಕೇಳುವಳೇನೋ. ವಕೀಲರ ನೋಟೀಸಿನಲ್ಲಿ ಖರ್ಚು 
                ವೆಚ್ಚದ ಮಾತೇ ಇರಲಿಲ್ಲ. ಮಹಾ ಸ್ವಾಭಿಮಾನಿ  ఆ ಹೆಣ್ಣು. ತನಗೆ ತಿಳಿ 
                ಯದೆ? ನ್ಯಾಯಾಸ್ಥಾನದಲ್ಲೂ ಆಕೆ ಆ ಪ್ರಶ್ನೆ ಎತ್ತಲಾರಳು. ಶೇಖಡಾ