ಪುಟ:Ekaan'gini.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                  ಏಕಾಂಗಿನಿ                                     ೨೦೩
           ಆತನ ಪರವಾಗಿ ಯಾವ ವಕೀಲರೂ ಒಳಬರಲಿಲ್ಲ. ಆತನ ದ್ರುಷ್ಟಿ ನ್ಯಾಯಾ
           ಧೀಶರ ಮೇಲೆ ನೆಟ್ಟಿತು . ಅವರು ಮುಗುಳುನಕ್ಕು ಅಂದರು:
               "ರೆಸ್ಪಂಡೆಂಟಿಲ್ಲ. ನಿಮ್ಮ ಕೇಸು ಇವತ್ತೇ ಮುಗಿಯೋ  ಹಾಗೆ ಕಾಣು
           ತ್ತಲ್ಲ!"
               ನಾಯಾಧೀಶರಾದವರು ಮಾತನ್ನೇ ಆಡಲಾರರು ಎಂದುಕೊಂಡಿದ್ದಳು
           ಸುನಂದಾ. ಆದರೆ ನಾಯಾಧೀಶರೂ ಮನುಶ್ಯರೆ ಎ೦ಬುದು ಈಗ  ಆಕೆಗೆ
           ಅರಿವಾಯಿತು
               ನಾಯಾಸ್ಕಾನದೊಳಗಿದ್ದ ಒಬ್ಬನೇ ಗುಮಾಸ್ತೆ ಬರೆದುಕೊಳ್ಳಲು ಸಿದ್ಧ 
          ನಾದ
               “ಶುರು ಮಾಡೋಣವೆ?” ಎಂದು ನಾಯಾಧೀಶರು ಕೇಳಿದರು.
               “ಆಗಬಹುದು ಖವ್ಂದರೆ," ಎಂದು ಸೋಮಶೆಖರ.
               ಗುಮಾಸ್ತೆಯ ಸೂಚನೆಯಂತೆ, ಸೋಮಶೇಖರನ ನಿರ್ದೇಶದಂತೆ,
         ಸುನಂದಾ ಕಟಾ೦ಜನದೊಳಗೆ ನಿಂತಳು
               "ಎಲ್ಲಾ  ಸತ್ಯವಾಗಿ ಹೇಳ್ತೀನಿ ," ಎಂದು ಆಕೆಯಿಂದ ಆಣೆ ಮಾಡಿಸಿ
         ದುದಾಯಿತು.
               ಸೋಮಶೇಖರ ಅರ್ಜಿಯನ್ನು ಕೈಗೆತ್ತಿಕೊಂಡ.  ಅರ್ಜದಾರಳಿಗೂ ಪುಟ್ಟಣ್ಣ
          ಎಂಬ ರೆಸ್ಪಾಂಡೆಂಟನಿಗೂ ಇರುವ ಸಂಬಂಧವನ್ನು ಕೇಳಿ ಸ್ಥಿರಪಡಿಸಿದ.
          ಅರ್ಜಿಯಲ್ಲಿದ್ದ ಅಂಶಗಳನ್ನೆಲ್ಲ ಸುನಂದಮ್ಮನೇ ಹೇಳುವ ಹಾಗೆ ಸೋಮ
         ಶೇಖರ ಪ್ರಶ್ನೆಗಳನ್ನು ಕೇಳಿದ.
               ಕಂರ ವಾರ ಮಾಡಿ ಉತ್ತರ ಕೊಡುವ ಹೆಂಗಸಾಗಿ ಆಕೆ ತೋರಲಿಲ್ಲ. 
          ಬುದ್ದಿವಂತೆ- ಎಂದುಕೊಂಡರು ನ್ಯಾಯಾಧೀಶರು
               ನೋಮಶೇಖರನ ಪ್ರಶ್ನೆಗಳು ಕೇಳಿಸುತಿದ್ದುವು
               "ಕೋರ್ಟಿಗೆ ಅರ್ಜಿ ಹಾಕೋದಕ್ಮುಂಚೆ ನಿಮ್ಮ ಗಂಡನಿಗೆ  ನೋಟೀಸು 
           ಕೊಟ್ಟಿದ್ರಿ ಅಲ್ವೆ?"
                "ಹೌದು.”
                "ಈ ನೋಟಿಸು ದಾಖಲ್ಮಡಿದೆ ಖಾವಂದರೆ.'
                 ಖಾವಂದವರು ತಲೆಯಲ್ಲಾಡಿಸಿದರು.