ಪುಟ:Ekaan'gini.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೦೫ "ಹೋಗಮ್ಮ. ಮಗೂನ ಎತ್ಕೋ" ఎంದರು ನ್ಯಾಯಾಧೀಶರು. ಆ ಆಜ್ಞೆಯನ್ನು ಪಾಲಿಸಲು ತಾಯಿ ನಿಮಿಷವೂ ತಡಮಾಡಿಲಿಲ್ಲ. ಅಲ್ಲೆ ನಿಂತಿದ್ದ ಕೃಷ್ಣಪ್ಪನವರನ್ನು ನ್ಯಾಯಾಧೀಶರಿಗೆ ತೋರಿಸುತ್ತ ಸೋಮಶೇಖರ ಹೇಳಿದ: "ಇವರು ಅರ್ಜಿದಾರಳ ತಂದೆ." ಕೃಷ್ಣಪ್ಪನವರು ಕೈ ಮುಗಿದರು. ಆದರೆ ನ್ಯಾಯಾಧೀಶರಿಗೆ ಆ ವಂದನೆಯ ಅಗತ್ಯವಿರಲಿಲ್ಲ. ಅವರೆಂದರು: "ಮುಗಿದೇ ಹೋಯ್ತೇನು? ಸರಿ. ಸಾಕ್ಷ್ಯಗಳ ವಿಚಾರವೇನು?" ಸಾಕ್ಷಿದಾರರ ವಿಷಯವಾಗಿ ಯಾವ ಸಿದ್ಧತೆಯನ್ನೂ ಮಾಡದೆ ಇದ್ದ ಸೋಮಶೇಖರ ಎದೆ ಮುಂದು ಮಾಡಿ ಹೇಳಿದ: “ನಮ್ಮ ಸಾಕ್ಷಿದಾರರ ಪಟ್ಟಿ ಕೊಡ್ತೀನಿ.ಆದರೆ ಸಾಕ್ಷಿಗಳ ವಿಚಾರಣೆ ಅಗ ಶ್ಯವೆ ಏನೂಂತ ಖಾವಂದರು ಪರಾಂಬರಿಸಬೇಕು.ರೆಸ್ಪಾಂಡೆಂಟು ನನ್ನ ನೋಟೀಸಿಗೆ ಉತ್ತರ ಕೊಡಲಿಲ್ಲ. ಕೋರ್ಟಿನ ನೋಟೀಸನ್ನೂ ಮಾನ್ಯ ಮಾಡಲಿಲ್ಲ. ವಕೀಲರನ್ನೂ ನೇಮಿಸಲಿಲ್ಲ. ಆಪಾದನೆಗಳನ್ನ ಇದಿರಿಸೋ ಸಾಮರ್ಥ್ಯ ಇಲ್ಲವಾದ್ದರಿಂದಲೆ ಆತ ಸುಮ್ನಿದಾನೆ ಅನ್ನೋದು ಸ್ಪಷ್ಟವಾಗಿದೆ ಅಂತ ನನ್ನ ಅಭಿಪ್ರಾಯ." “ಹೌದು. ಅದು ಸ್ಪಷ್ಟವಾಗಿದೆ,” ಎಂದರು ನ್ಯಾಧೀಶರು. ಸೋಮಶೇಖರ ಮುಗುಳು ನಕ್ಕು ನ್ಯಾಯಾಧೀಶರಿಗೆ ವಂದಿಸಿದ. "ಆರ್ಡರ್ಸ್ಗೆ ಯಾವ ದಿನ ಗೊತ್ಮಾಡೋಣ?" ಎಂದು ನ್ಯಾಯಾಧೀಶರು ಗುಮಾಸ್ತೆಯನ್ನು ಕೇಳಿದರು.ಸೋಮಶೇಖರನ ಕಡೆ ತಿರುಗಿ ಅಂದರು. "ಇವತ್ತು ಹತ್ತಾರು ವ್ಯವಹರಣೆಗಳಿವೆ ಬರೆಯೋದಕ್ಕೆ ಪುರುಸೊತ್ತಿಲ್ಲ.

ತಿಂಗಳ ಕೊನೇ ವಿಸರ್ಜನೆಗೆ ಇಟ್ಕೋತೀನಿ, ಆಗದೆ?"

"ಖಾವಂದರ ಚಿತ್ತ." ಅವರು ಮೂವತ್ತನೆಯ ತಾರೀಕನ್ನು ಗೊತ್ತು ಮಾಡಿದರು. ಹೊರಡುತ್ತಾ ಸುನಂದಾ ನ್ಯಾಯಾಧೀಶರಿಗೆ ನಮಸ್ಕರಿಸಿದಳು.['ಮಗೂ,ನಮಸ್ಕಾರ ಮಾಡು' ಎನ್ನಲಿಲ್ಲ.] ಅವರು ಮುಗುಳು ನಗುತ್ತ ಆ ವಂದನೆಯನ್ನು ಸ್ವೀಕರಿಸಿದರು.