ಪುಟ:Ekaan'gini.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೦೭ ಸಂತೃಪ್ತಿಯ ನಿಟ್ಟುಸಿರು ಬಿಡುತ್ತ ಕುಸುಮಾ ಅಂದಳು: "ವ್ಯವಹರಣೆ ಮುಗಿಯಿತು ಹಾಗಾದರೆ. ಇಷ್ಟು ಬೇಗ್ನೆ ಆಗುತ್ತೇಂತ ಗೊತ್ತಿರ್‌ಲಿಲ್ಲ." "ಆತ ಬರಲಿಲ್ಲ. ಎಕ್ಸ್ ಪಾರ್ಟಿ ತೀರ್ಮಾನ ಕೊಟ್ರು" "ಮತ್ತೆ ಇಷ್ಟು ದಿವಸದಿಂದ ನೀವು ತಿಳಿಸ್ಲೇ ಇಲ್ಲ"? ವಿಚಾರಣೆ ಮುಗಿದು ತೀರ್ಪು ಬರಲು ಸ್ವಲ್ಪ ದಿನ ಕಾಯಬೇಕಾಯಿತೆಂದು--ಎರಡು ದಿನಗಳ ಹಿಂದೆಯಷ್ಟೆ ತೀರ್ಪುತಿಳಿಯಿತೆಂದು--ಸುನಂದಾ ಹೇಳಿದಳು. ಗೆಳತಿಯ ಮುಖವನ್ನೆ ನೋಡುತ್ತ ಕುಸುಮಾ ಅಂದಳು, "ಅಂತೂ ಮುಕ್ತಾಯವಾಯಿತಲ್ಲ ಅಬ್ಬ! ನೀವಾದ್ದರಿಂದ ಇದನ್ನೆಲ್ಲಾ ಸಹಿಸ್ಕೊಂಡಿರಿ."

"ಹೊಗಳಿಕೆ ಬೇರೆ ಬೇಕೇನೋ ಇನ್ನು? ನೀವು-ರಾಧಮ್ಮ ಇರದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಸುನಂದಾ ಬದುಕಿ ಇರ್‌ತಿದ್ದಳೋ ಇಲ್ಲವೊ"
  "ನ್ಯಾಯಾಸ್ಥಾನದಲ್ಲಿ ನಿಮಗೆ ದಿಗಿಲಾಯ್ತೆ?"

"ಇಲ್ಲವಮ್ಮ ಹ್ಯಾಗಿರುತ್ತೋ ಅಂತಿದ್ದೆ. ಅಲ್ಲಿಗೆ ಹೋದ್ಮೇಲೆ ಧೈರ್ಯ ಬಂತು. ಒಂದು ಘಂಟೆ ಹೋತ್ತಿನೊಳಗೆ ಎಲ್ಲಾ ಆಯ್ತು..." ವಿಚಾರಣೆಯ ವಿವರವನ್ನು ಕುಸುಮಾ ಕುತೂಹಲದಿಂದ ಕೇಳಿದಳು. ಅದಾದ ಬಳಿಕ, ಬೇರೆ ವಿಷಯವಿರಲೆಂದು ಆಕೆಯೆಂದಳು: "ನಿಮ್ಮ ಕೆಲಸ ಏನಂತಿದೆ?" "ಸ್ವಾರಸ್ಯವಾಗಿದೆ. ಒಳ್ಳೆಯವರು. ಅಕ್ಕನಿಗೋಸ್ಕರ ನೀವು ಆರಿಸಿದ ಕೆಲಸ. ಕೇಳಬೇಕೆ? ಆದರೆ ಇನ್ನು ನನ್ನ ವಿಷಯದಲ್ಲಿ ಅವರೇನು ತಿಳ್ಕೋತಾರೋ" ಬೇರೆ ವಿಷಯವೆಂದು ಮಾತನಾಡಿದುದು ಸುಳ್ಳೇ. ಎಲ್ಲವನ್ನೂ ಆವರಿಸಿತ್ತು ಬದುಕಿನಲ್ಲಾದ ಮಾರ್ವಾಟು. ಕುಸುಮಾ ಅಶ್ವಾಸನೆ ಇತ್ತಳು. "ಅದರ ಯೋಚನೆ ಮಾಡ್ಬೇಡಿ. ಆವತ್ತು ಎಷ್ಟು ಬೇಕೋ ಅಷ್ಟು ಅವರಿಗೆ ಹೇಳಿದ್ದೆ. ಇವತ್ತೂ ಹಾಗೇ ಮಾಡ್ತೀನಿ. ಹೆದರ್‌ಕೋ ಬೇಡಿ. ಅವರೇನೊ ಗೊಡ್ಡು ವೈದಿಕರಲ್ಲ."