ಪುಟ:Ekaan'gini.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಏಕಾಂಗಿನಿ

                                                                                                                        ವಿಳಾಸವಿಲ್ಲ. ನಿನ್ನ ಹತ್ತಿರವೂ ಇಲ್ಲಾಂತ ತೋರುತ್ತೆ. ಹೌದೆ? ಅಪ್ಪ ಏನು                                           ಹೇಳುತ್ತಾರೆ? ಇಲ್ಲಿ ಮಳೆಯ ಆರ್ಭಟ ಮುಗಿಯುತ್ತ ಬಂದಿದೆ, ಅಪ್ಪನನ್ನು                                                 ಒಮ್ಮೆ ಕಳಿಸಿಕೊಡ್ತೀಯಾ? ಆದರೆ ಸರಸ್ವತಿಯನ್ನು ನೋಡಿಕೊಳ್ಳುವವರು                                                       ಯಾರು? ನಿನಗೆ ಕಷ್ಟವಾದರೆ ಬೇಡ . ಆಗಾಗ್ಗೆ ಕಾಗದ ಬರಿ. ಸೀತಮ್ಮನವ                                         ರನ್ನು ಇತ್ತೀಚೆಗೆ ಕಂಡಿದ್ದಿಯಾ? ತಿಳಿಸಬೇಕಾಗಿರುವ ವಿಶೇಷ ಇನ್ನೂ ಏನೂ                                             ಇಲ್ಲ! ನೀನು ಸಂತೋಷವಾಗಿದ್ದಿ ಅಲ್ಲವಾ? ಸರಸ್ವತಿ ಚಿಕ್ಕಮ್ಮನನ್ನ ಮರೆತಿಲ್ಲ                                         ತಾನೆ? ಶಿಶು ವಿಹಾರ ಏನನ್ನುತ್ತೆ? ರಾಧಮ್ಮ__ಕುಸುಮಾ ಏನು ಹೇಳ್ತಾರೆ?                                        ರಾಮಕೃಷ್ಣಯ್ಯನವರ ಮನೆಗೆ ಹೋಗಿದ್ದೆಯಾ? ಚುಟುಕಾಗಿ ಉತ್ತರ ಬರೀ                                           ಬೇಡ__ ಹಾಂ!"
ಅದನ್ನು ಮತ್ತೆ ಮತ್ತೆ ಓದುತ್ತ ಸುನಂದಾ.'ಈ ಒಲವಿಗಿಂತ ಹಿರಿದಾದ                                         ಸಿರಿ ಸಂಪದ ಬೇರೆ ಇಲ್ಲ' ಎಂದು ಮನಸ್ಸಿನಲ್ಲೆ ಅಂದುಕೊಂಡಳು.
    *           *           *          *
ರಾಧಮ್ಮನ ದೊಡ್ಡ ಮಗನಿಗೆ ಬ್ರಹ್ಮೋಪದೇಷವೆಂದು, ಕೃಷ್ಣಪ್ಪನವರನ್ನೂ                                               ಸುನಂದೆಯನ್ನೂ ಕರೆಯಲು ರಾಧಮ್ಮ ಬಂದರು.
"ಆಫೀಸಿನ ಕೆಲಸದಲ್ಲಿ ಅವರಿಗೆ ಪುರುಸೊತ್ತೇ ಇಲ್ಲ. ಅದಕ್ಕೋಸ್ಕರ ನಾನೇ                                                   ಕರೆದ್ಬಿಟ್ಟು ಹೋಗೋಣ--ಅಂತ ಬಂದೆ, ಏನೂ ತಿಳ್ಕೋಬೇಡಿ," ಎಂದು                                     ಕೃಷ್ಣಪ್ಪನವರೊಡನೆ ರಾಧಮ್ಮ ಹೇಳಿದರು.
"ಮಗಳನ್ನೂ ತಂದೆಯನ್ನೂ ಕರೆಕೊಂಡು ತಪ್ಪದೆ ಬನ್ನಿ," ಎಂದು ಸುನಂ                                            ದೆಗೆ ಅಂದರು.
       *         *          *          *

ಬೀದಿಗಿಳಿದಾಗ ನೆರೆಹೊರೆಯವರು ಸುನಂದೆಯನ್ನೇ ನೋಡುತ್ತಿದ್ದರು. ಇತ್ತೀಚಿನ ಘಟನೆಗಳು ಅವರಿಗೆ ಗೊತ್ತಿರಲಿಲ್ಲವಾದರೂ ಸುನಂದೆಯನು ಗಂಡ ಬಿಟ್ಟಿರುವನೆಂಬುದು ತಿಳಿದಿತ್ತು ನಾಲಿಗೆಗೆ ನವೆ. ಮೂದಲಿಸಿ ಲೇವಡಿ ಮಾಡುವ ತವಕ.[ಯಾರಪ್ಪನ ಗಂಟು] ಆದರೆ ಸುನಂದೆಯ ನಯವಿನಯ್ನ ಸ್ನೇಹಪರತೆ, ಜತೆಯಲ್ಲಿ ಗಾಂಭೀರ್ಯ--ಅವರ ಬಾಯಿ ಮುಚ್ಚಿಸಿದುವು.

      *         *        *          *

ಸೋಮಶೇಖರ, ಹೆಂಡತಿ ಮತ್ತು ಮಗುವಿನೊಡನೆ ಒಗೆ ಸುನಂದೆಯ ಮನೆಗೆ ಬಂದ.