ಪುಟ:Ekaan'gini.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೧೨ ಏಕಾಂಗಿನಿ

ಪುಸ್ತಕವನ್ನೆತ್ತಿಕೊಂಡಳು. ಹಿಂದಿನ ರಾತ್ರೆ ಓದಿ ಬಿಟ್ಟಿದ್ದಲ್ಲಿಂದ ಮುಂದಕ್ಕೆ ಒಂದು ಅಧ್ಯಾಯವನ್ನೋದಿದಳು ಅನಂತರ ಪುಟಗಳ ಸಂಖ್ಯೆಯನ್ನು ನೆನಪಿಟ್ಟು ಪುಸ್ತಕವನ್ನು ಮುಚ್ಚಿದಳು.

 ತಂದೆಗಾಗಲೆ ನಿದ್ದೆ ಬಂದಿತ್ತು.
ರಾತ್ರೆ ಓದಲು ದೀಪ ಅನುಕೂಲವಾಗಿರಲಿಲ್ಲ. ಬೇರೆ ಮನೆಗೆ ಹೋದ                                                   ಮೇಲೆ ಮೇಜು, ಕುರ್ಚಿ, ಮೇಜುದೀಪ ಕೊಳ್ಳಬೇಕೆಂದು ಸುನಂದಾ ಯೋಚಿ                                               ಸಿದಳು. ಹಾಗೆಯೇ, ತಂದೆಗೆ ಓದಲು ಒಂದು ದಿನಪತ್ರಿಕೆ__ಕನ್ನಡದ್ದು                                            ಖಾಲಿಯಾಗಿದ್ದ ಮನೆಯನ್ನು ಆಕೆ ನೋಡಿಬಂದಿದ್ದಳು. ಸಾಕಷ್ಟು ವಿಶಾಲ                                                ವಾಗಿಯೆಇದ್ದ ಆ ಮನೆಯೊಳಗೆ ಮಾಡಬೇಕಾದ ಏರ್ಪಾಟನ್ನೆಲ್ಲ ಮನಸಿನಲ್ಲೆ                                                           ಈಗ ಎಣಿಕೆ ಹಾಕಿದಳು.
ತಂಗಿಯ ಕಾಗದಕ್ಕೆ ಸುನಂದಾ ಉತ್ತರ ಕೊಟ್ಟೇ ಇರಲಿಲ್ಲ. ದಿನವೂ                                                 'ನಾಳೆ__ನಾಳೆ' ಎಂದು ಮುಂದೆ ತಳ್ಳಿದ್ದಳು. ಯಾವುದನ್ನೂ 'ನಾಳೆ'ಗೆ                                                               ಸೂಕುವುದರಲ್ಲಿ ಅರ್ಥವಿಲ್ಲವೆನಿಸಿತು. ಈಗಲೇ ಬರೆಯುವುದು ಮೇಲೆಂದು                                                        ಆಕೆ ಎದ್ದಳು.
 ಬರೆಯಲು ಮೊದಲು ಮಾಡಿದಳು.
 ...' ಈ ಮನೆಯಿಂದ ಬರೆಯುತ್ತಿರುವ ಕೊನೆಯ ಕಾಗದ ಇದು. ಮುಂದಿ                                           ಸದು ಮಲ್ಲೇಶ್ವರದಿಂದ. ದೀಪಾವಳಿಗೆ ನಮ್ಮಿಬ್ಬರನ್ನು ಕರೆಸಿಕೊಳ್ಳುವುದು                                                         ಆ ಮನೆಗೇ'...
 ಎಲ್ಲವಿಷಯಗಳನ್ನೂ ಪ್ರಸ್ತಾಪಿಸಿದುದಾಯಿತೆಂದು ತೋರಿದಾಗ                                                      ಆಕೆ ಬರೆದಳು.
“ನನ್ನ ಮನಸ್ಸು ನಿರ್ಮಲವಾಗಿದೆ ವಿಜಯಾ. ಹೃದಯದ ಮೇಲಿದ್ದ                                                    ಗಾಯಗಳು ಮಾಯುತ್ತಾ ಬಂದಿವೆ. ಘೋರ ರಾತ್ರೆ ಕಳೆದು ಬೆಳಕು ಹರಿದ                                                            ಹಾಗೆ. ನನಗಿದು ಪುನರ್ಜನ್ಮ ವಿಜಯಾ. ನಾನು ಯಾರಿಗೂ ಈವರೆಗೂ                                                     ಕೆಟ್ಟದು ಮಾಡಿಲ್ಲ, ಮುಂದೆಯೂ ಅಷ್ಟೆ ನನ್ನಿಂದ ಯಾರಿಗೂ ಕೆಡಕಾಗದು.                                                ಆಷ್ಟೇ అల్ల, ಒಳ್ಳೆದು ಮಾಡುವುದು ಸಾಧ್ಯವೇನೋ ಅಂತ ಯತ್ನಿಸುತ್ತೇನೆ.                                                          ಒಳ್ಳೆಯವಳಾಗಿಯೇ ಸಾಯುತ್ತೇನೆ...”
 ಕೊನೆಯಸಾಲು, ಸುನಂದೆಯ ಕಣ್ಣೀರಿನಿಂದ ಪಾವನವಾಯಿತು.