ಪುಟ:Ekaan'gini.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಏಕಾಂಗಿನಿ

ಸುನಂದೆಯ ಮನಸಿನ ಹೊಯ್ದಾಟವನ್ನು ಮೆಚ್ಚದೆ, ಆಕೆ ಸೀತೆ ಸಾವಿತ್ರಿ                                                        ಯರಂತೆ ಪತಿಭಕ್ತಿ ಪಾರಾಯಣೆಯಾಗಿ ದಿನಕಳೆಯಲಿ__ಎಂದು ಹಾರೈಸಿದ                                                   ವರುಂಟು. ಆಯತ್ನವನ್ನು ಆಕೆ ಮಾಡಿದಳೆಂಬುದಕ್ಕೆ ಹೇರಳ ಸಾಕ್ಷ್ಯ                                                             'ಏಕಾಂಗಿನಿ'ಯಲ್ಲಿದೆ.
  ಸುನಂದಾ ಎಂಥವಳು ? ಆಕೆ ಸಮಾಜದ 'ಪ್ರತಿಷ್ಠಿತ' ಮಹಿಳೆಯಲ್ಲ;                                                               'ಸ್ತ್ರೀ ಸ್ವಾತಂತ್ರ' ಚಳುವಳಿಯ ಯೋಧೆಯಲ್ಲ: ಸ್ವಚ್ಛಂದ ಪ್ರವೃತ್ತಿಯ

ಪ್ರತಿಪಾದಿಕೆಯಲ್ಲ, ಹೊಸಲು ದಾಟಿದ' ಕೆಟ್ಟ ಹೆಣ್ಣಲ್ಲ, ಮಧ್ಯಮ ವರ್ಗದ ಒಳ್ಳೆಯವಳಾದ ಸಾಮಾನ್ಯ ಗೃಹಿಣಿ ಸುನಂದಾ. ಗಂಡನೊಡನೆ ಬದುಕು ಸವಿಜೇನಾಗಬೇಕೆಂಬುದೇ ಆಕೆಗಿದ್ದ ಹಂಬಲ. ಅದು ದುಸ್ಸಾಧ್ಯವಾದಾಗ? ಕ್ರೂರಿಯಾದ ಪಶುವಾದ ಪತಿಯೊಡನೆ ದಿನ ಕಳೆಯುವುದು ಅಸಹನೀಯ ವಾದಗ? ಅತನನ್ನು ಸುಧಾರಿಸಲು ಮಾಡಿದಪ್ರಯತ್ನಗಳೆಲ್ಲ ನೀರಿನ ಮೇಲಿನ ಹೋಮವಾದಾಗ?__ಆಗ ಆಕೆಗುಳಿದ ಏಕಮಾತ್ರ ಹಾದಿಯಾವುದು?

 ಆ ಹಾದಿಯನ್ನು ಆಕೆ ಕೈಗೊಂಡ ಕತೆಯೇ 'ಏಕಾಂಗಿನಿ'                                                                                                                       ಸುನಂದೆಯ ಈಗಿನ ಮನೋಸ್ಥಿತಿಗೆ, ಕಾದಂಬರಿಯ ಕೊನೆಯಲ್ಲಿ ಬರುವ                       

ಈ ಕೆಲಸಾಲುಗಳು ಕನ್ನಡಿಯಾಗಿವೆ, ಆಕೆಯೆ ಹೇಳುವಂತೆ: "ನನ್ನ ಮನಸ್ಸು ನಿರ್ಮಲವಾಗಿದೆ, ವಿಜಯಾ. ಹೃದಯದ ಮೇಲೆ ಆಗಿದ್ದ ಗಾಯಗಳು ಮಾಯುತ್ತಾ ಬಂದಿವೆ. ಘೋರ ರಾತ್ರೆ ಕಳೆದು ಬೆಳಕು ಹರಿದ ಹಾಗೆ. ನನಗಿದು ಪುನರ್ಜನ್ಮ, ವಿಜಯಾ. ನಾನು ಯಾರಿಗೂ ಈವರೆಗೂ ಕೆಟ್ಟದು ಮಾಡಿಲ್ಲ. ಮುಂದೆಯೂ ಅಷ್ಟೆ ನನ್ನಿಂದ ಯಾರಿಗೂಕೆಡಕಾಗದು ಅಷ್ಟೇ ಅಲ್ಲ ಒಳೇದು ಮಾಡುವುಗು ಸಾಧ್ಯವೇನೋ ಅಂತ ಯತ್ನಿಸ್ತೇನೆ. ಒಳ್ಳೆಯವಳಾಗಿಯೇ ಸಾಯುತೇನೆ.."

 ಹೀಗೆ ಆಡುವ ಹೆಣ್ಣನ್ನು 'ಕಳಂಕಿನಿ' ಎಂದು ನಿಂದಿಸುವುದು ಸಾಧ್ಯವೇ?                                                              ಆಕೆಯನ್ನು ಕುರಿತು ಸಹಾನುಭೂತಿ ಸೂಚಿಸದೆ ಇರುವುದು ಸಾಧ್ಯವೇ?
 ಸುನಂದೆಯ ತಂಗಿ ವಿಜಯಳ ಪಾತ್ರ ನಿರೂಪಣೆಯ ಮಹತ್ವವನ್ನೂ                                                   ನೀನು ಗಮನಿಸಿರಬೇಕು. ಆಕೆಗೂ ದೊರೆತಿದ್ದ ಪತಿ 'ಪಾಲಿಗೆ ಬಂದ                                                   ಪಂಚಾಮೃತ'ವಾಗಿದ್ದ. ಆದರೆ ಅವರ ಬದುಕು ಬ೦ಗಾರವಾಯಿತು.                                                       ಹಾಗೆಯೇ ಕೆುಸುಮಾ, ರಾಧಮ್ಮ, ಸೀತಮ್ಮ ಮತ್ತಿತರ ಸಂಸಾರಗಳು.ಇದು