ಪುಟ:Ekaan'gini.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಏಕಾಂಗಿನಿ ೨೧೫

                       ಸೂಚಿಸುವುದೇನನ್ನು? ವಿವಾಹ ವಿಚ್ಛೇದನದ ಹಕ್ಕು ಬಂದಿದೆಯೆಂದ
                       ಮಾತ್ರಕ್ಕೆ ದಾಂಪತ್ಯ ಜೀವನದಲ್ಲೆಲ್ಲ ವಿರಸವನ್ನೇ ಹುಡುಕುತ್ತ ಹೋಗಬೇ
                      ಕೆಂದು ಅರ್ಧವಲ್ಲ, ಅಲ್ಲವೆ ? ವಿಚ್ಛೇದನದ ತತ್ವವನ್ನು ಒಪ್ಪಿದೊಡನೆಯೇ
                      ಕಾಲಕಾಲಕ್ಕೂ ಬೇರೆ ಬಟ್ಟೆ ಕೊಳ್ಳುವಂತೆ ಬದುಕಿನ ಒಡನಾಡಿಯನ್ನು ಬದಲಾ
                      ಯಿಸಬೇಕೆಂದಿಲ್ಲ, ಅಲ್ಲವೇ?
                         ಏಕಾಂಗಿನಿ'ಯ ಒರವಣಿಗೆಯಲ್ಲಿ ಕಲೆಯ ಅಂಶ ವಿಚಾರದ ಅಂಶ 
                      ಕ್ಕಿಂತ ಏನೇನೂ  ಕಡಿಮೆಯಾಗದಂತೆ ಎಚ್ಚರ ವಹಿಸಿದ್ದೇನೆ. ಆದರೂ ಹಿಂದೂ 
                     ವಿವಾಹ ಶಾಸನದ ವಿಷಯದಲ್ಲಿ ಓದುಗರಿಗಿರುವ ಅಭಿಪ್ರಾಯವೇ ಈ ಕಾದಂ 
                     ಬರಿಯನ್ನು ಕುರಿತ ಹೊಗಳಿಕೆಯಾಗಿಯೋ ತೆಗಳಿಕೆಯಾಗಿಯೋ ಬಹು
                     ಮಟ್ಟಿಗೆ ವ್ಯಕ್ತವಾದರೆ  ಅಶ್ಚರ್ಯವೇನಿಲ್ಲ. ಹೀಗಿದ್ದರೂ  ಕಲೆಯ ಅಂಶ ನನ್ನ
                     ನೆರವಿಗೆ ಬರುವುದೆಂಬ ಭರವಸೆ ನನಗಿದೆ.
                        ಸುನಂದೆಯ ಕಧೆ ಇಲ್ಲಿಗೆ ಮುಗಿಯಿತೆ?-ಎಂದು ನೀನು ಕೇಳಬಹುದು ;
                     ಯಾರಾದರೂ ಕೇಳಬಹುದು ಏಕಾ೦ಗಿಯಾಗಿ ಇರಬಯಸಿದ ಹೆಣ್ಣು ಪಡೆಬೇ
                     ಕಾದ ಭವಣೆಗಳು ನಮಗೆ ತಿಳಿಯವೆ ? ಘೋರವಾದೊಂದು ಸಮಸ್ಯೆಯನ್ನು
                     ಸುನಂದಾ  ಬಗೆಹರಿಸಿದರೂ ಬೇರೆ ನೂರು ಸಮಸ್ಯೆಗಳಿಂದ ಆಕೆ ತಪ್ಪಿಸಿಕೊಳ್ಳು
                    ವುದಕ್ಕುಂಟೆ? ಈ ವಿಚಾರಗಳು ಕಣ್ಣೆದುರು ನಿಂತಾಗ  'ಏಕಾಂಗಿನಿ'ಯ  ಮು೦
                    ದಿನ ಭಾಗದ ರೂಪುರೇಖೆಗಳು ಗೋಚರವಾಗುತ್ತಿವೆ. ಮುಂದೆ ನೋಡೋಣ. 
                       ಇಷ್ಟೆ  ಸಾಕು, ನಿನ್ನ ಮೇಲೆ  ಪ್ರಭಾವ ಬೀರಿ ಒಲಿಸಿಕೊಳ್ಳುವುದಕ್ಕೋ
                    ಸ್ಕರ ಈ ಕಾಗದ ಬರೆದಿಲ್ಲ, ನಮ್ಮಿಬ್ಬರ ಜೀವನದಲ್ಲಿ ಅಂತಹ ಅಗತ್ಯವಿಲ್ಲ 
                   ಎನ್ನುವುದನ್ನು ನಾವು ಬಲ್ಲೆವು-ಓದುಗರು ಬಲ್ಲರೂ. ಆದರೂ ಸ್ಪಷ್ಟೀಕರಣ
                   ಯಾಕಾಗಲೂ ನನಗಿಷ್ಟವಾದ ವಿಷಯ '
                     ಹಿಂದೂವಿವಾಹಶಾಸನದ ವಿವರಗಳನ್ನೋದಿ ಅದರಲ್ಲೂ ವಕೀಲರ ನೋಟೀ 
                  ಸನ್ನು ಕಂಡ, ನಿನಗೆ ಆಶ್ಚರ್ಯವಾಯಿತೋ  ಏನೋ. ಆಭಾಗದಲ್ಲಿ ನೆರವು ನೀಡಿ
                  ದವರು ಇಲ್ಲಿನ ನನ್ನ ವಕೀಲ ಸ್ನೇಹಿತರಾದ  ಶ್ರೀಮಾನ್  ಎಂ ಎಸ್ ವೆಂಕಟ
                 ನಾರಣಪ್ಪನವರು. ಅವರಿಗೆ ನಾನು ಉಸಕೃತ.
                     ಹಾಗೆಯೇ ಲೇಖಕ. ಪ್ರಕಾಶಕ ಕೊ ಸು. ಸೀತಾರಾಮ್ ಅವರಿಗೂ. ಅವರ