ಪುಟ:Ekaan'gini.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಏಕಾಂಗಿನಿ

ವರ್ತಿಸಿದ್ದ. ಮುಂದೆ, ಇಬ್ಬರೂ ಪರಸ್ಪರ ಬಯಸಿತೊಡಗಿದ ಬಳಿಕ, ಅವರೊಳಗಿನ ಸಂಬಂಧ ಸರಳವಾಯಿತು... ಆದರೂ ಅದು ವ್ಯಾವಹಾರಿಕವಾಗಿಯಷ್ಟೇ ಇತ್ತೆಂದು ಸುನಂದೆಗೆ ಈಗ ಅನಿಸುತ್ತಿತ್ತು,.. ಪ್ರೇಮ...ಸಿಹಿ--ಎನ್ನುವಂತಹ ನೆನಪುಗಳು ಕೆಲವಿದ್ದುವು ಆದರೆ, ಕಹಿಯ ಅಂಶವೇ ಹೆಚ್ಚು. ಸಿಹಿ ಮಕ್ಕಳಾಟದ ಮಣ್ಣುಗುಡ್ಡೆಯಾದರೆ, ಕಹಿ ಮಹಾ ಮೇರುವಿನಷ್ಟು....

ಸುನಂದಾ ನಡುಮನೆಗೆ ಬಂದು, ಗೋಡೆಯನ್ನೇ ಚಿತ್ರವಿಚಿತ್ರವಾಗಿ ಅಲಂಕರಿಸಿದ್ದ ದೇವದೇವತೆಯರ ರಾಮಸೀತೆಯರ ಋಷಿಮಹರ್ಷಿಗಳ ಪಟಗಳನ್ನು ನೋಡಿದಳು. ಕಲಾವಿದನ ಕಲ್ಪನಾ ಶಕ್ತಿಗೊಂದು ಮಿತಿಯೇ?.. ಅಲ್ಲೇ ಬಾಗಿಲ ಮೇಲ್ಗಡೆ ದೊಡ್ಡದಾದ ಭಾವಚಿತ್ರವಿತ್ತು. ಕುರ್ಚಿಯ ಮೇಲೆ ಕುಳಿತಿದ್ದ ತಂದೆ:ಆತನ ಹಿಂಬದಿಯಲ್ಲಿ ವಿಸೀತಳಾಗಿ ನಿಂತಿದ್ದ ತಾಯಿ. ಎಷ್ಟೋ ವರ್ಷಗಳಿಗೆ ಹಿಂದಿನ ಚಿತ್ರ ಹೆತ್ತವಳು ತನ್ನನ್ನು ರಮಿಸುತ್ತಿಲ್ಲವೆಂದು ಅಸಹನೆ ತೋರತೊಡಗಿದ್ದ ಸರಸ್ವತಿಗೆ ಆ ಭಾವಚಿತ್ರವನ್ನು ತೋರಿಸುತ್ತಾ ಸುನಂದಾ ಅಂದಳು:

"ತಾತ, ಅಜ್ಜೀ...."

ಸರಸ್ವತಿಗೇನೂ ಗುರುತು ಸಿಗಲಿಲ್ಲ. ಆದರೂ ತನ್ನ ತಾಯಿಯ ಅಭಿಪ್ರಾಯವನ್ನು ಅಲ್ಲಗಳೆಯಬಾರದೆಂದು ಆಕೆಯೂ ತೊದಲು ನುಡಿದಳು.

"ತಾತಾ,ಅಜ್ಜ್.. ಇಹ್ಹಿ!"

ನಿಂತಲ್ಲೆ ನಿಲ್ಲಲಾಗಲಿಲ್ಲ ಸುನಂದೆಗೆ ದೃಷ್ಟಿ ಇನ್ನೊಂದು ಕೊಠಡಿಯತ್ತ ಹರಿಯಿತು. ವಿದ್ಯಾರ್ಥಿ ದೆಸೆಯಲ್ಲಿ ಸೋದರಿಯೊಬ್ಬರಿಗೂ ಅದು ಅಧ್ಯಯನದ ಜಾಗವಾಗಿತ್ತು. ಸುನಂದಾ ಗಂಡನ ಮನೆ ಸೇರಿದ ಬಳಿಕ ವಿಜಯಳೂ ಅದನ್ನು ಒಂದೆರಡು ವರ್ಷ ಉಪಯೋಗಿಸಿದ್ದಳು. ಅನಂತರ ಆ ಕೊಠಡಿ ಡಬ್ಬ ತಪ್ಪಲೆಗಳನ್ನೂ ಹಾಸಿಗೆಗಳನ್ನೂ ಕೂಡಿಡುವ ಉಗ್ರಾಣವಾಗಿ ಮಾರ್ಪಟ್ಟಿತು.

"ಒಳಗೆ ಏನುಮಾಡುತ್ತಿರುವಳೋ ತಾಯಿ? ಮನಸ್ಸು ಕಸಿವಿಸಿಯಾದಾಗ ತಾಯಿಯ ನೆನಪು

ಸ್ನಾನದ ಮನೆಯಿಂದ, ಸುರಿದುಕೊಳ್ಳುತ್ತಿರುವ ನೀರಿನ ಸದ್ದು ತಾನೂ ಹಿಂದೆಯೊಮ್ಮೆ... ಅಯ್ಯೋ!